ಅಕ್ರಮ ದಾಸ್ತಾನು: 5 ಟನ್ ಪಡಿತರ ಅಕ್ಕಿ, ಆರೋಪಿ ಪೊಲೀಸರ ವಶಕ್ಕೆ
ಮೈಸೂರು ಗ್ರಾಮಾಂತರ

ಅಕ್ರಮ ದಾಸ್ತಾನು: 5 ಟನ್ ಪಡಿತರ ಅಕ್ಕಿ, ಆರೋಪಿ ಪೊಲೀಸರ ವಶಕ್ಕೆ

May 17, 2020

ನಂಜನಗೂಡು, ಮೇ 16(ರವಿ)-ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನಿಸಿದ್ದ ನಗರದ ಅಂಗಡಿಯೊಂದರ ಮೇಲೆ ಶನಿವಾರ ದಾಳಿ ನಡೆಸಿದ ಪೊಲೀಸರು, 5 ಟನ್‍ನಷ್ಟು ಅಕ್ಕಿ ಸಮೇತ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ಸಿನಿಮಾರಸ್ತೆಯಲ್ಲಿರುವ ಯಾರಬ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿದ ಪೊಲೀಸರು ಮಾಲೀಕ ಸಿದ್ಧಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮೈಸೂರಿನ ಡಿಸಿಐಬಿ ಪೊಲೀಸರ ತಂಡ ನಂಜನಗೂಡು ಆಹಾರ ಇಲಾಖೆಯ ಸಿಬ್ಬಂದಿಯೊಂದಿಗೆ ಇಂದು ದಿಢೀರ್ ದಾಳಿ ನಡೆಸಿದಾಗ ಗೋದಾಮಿನಲ್ಲಿ ನೂರಾರು ಚೀಲದಲ್ಲಿ ಸುಮಾರು 5 ಟನ್ ಪ್ರಮಾಣದ ಪಡಿತರ ಅಕ್ಕಿ ದೊರೆತಿದೆ.

ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯನ್ನು ಕಡಿಮೆ ಬೆಲೆ ಖರೀದಿಸಿ, ಪಾಲಿಶ್ ಮಾಡಿಸಿದ ನಂತರ ಹೊರ ರಾಜ್ಯಕ್ಕೆ ಹೆಚ್ಚಿನ ಬೆಲೆಗೆ ಮಾರುತ್ತಿರುವುದಾಗಿ ಅಂಗಡಿ ಮಾಲೀಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಸದ್ಯ ಅಕ್ಕಿಯನ್ನು ವಶಕ್ಕೆ ಪಡೆದು ಗೋದಾವಿಗೆ ಬೀಗ ಜಡಿದಿದ್ದು, ವಿಚಾರಣೆ ಮುಂದುವರೆದಿದೆ.

ಕಾರ್ಯಾಚರಣೆಯಲ್ಲಿ ನಂಜನಗೂಡು ಪಟ್ಟಣ ಠಾಣೆ ಎಸ್‍ಐ ರವಿಕುಮಾರ್, ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ರವಿಕುಮಾರ್, ಸಂದೀಪ್‍ಗೌಡ, ಹರೀಶ್, ಸುನೀಲ್, ರಾಮಪ್ರಸಾದ್, ಚಿಕ್ಕಲಿಂಗು ಮತ್ತಿತರರಿದ್ದರು.

Translate »