ನಾನು ಅದೃಷ್ಟದ ರಾಜಕಾರಣಿ
ಮೈಸೂರು

ನಾನು ಅದೃಷ್ಟದ ರಾಜಕಾರಣಿ

June 5, 2018
  • ಸಿಎಂ ಕುಮಾರಸ್ವಾಮಿ ಪುನರುಚ್ಛಾರ
  • ವ್ಯಾಸಂಗ ಮಾಡಿದ ನ್ಯಾಷನಲ್ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೀವನ ಮೆಲುಕು

ಬೆಂಗಳೂರು: ನಾನು ಅದೃಷ್ಟದ ರಾಜಕಾರಣ . ನಾಡಿನ ಜನತೆಯ ಸೇವಕ. ಆದರೆ ಆರೂವರೆ ಕೋಟಿ ಜನ ಆಯ್ಕೆ ಮಾಡಿದ ಸಿಎಂ ನಾನಲ್ಲ. ನಾನು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತೇನೋ ಗೊತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೇಗೆ ನಡೆಸಬೇಕೆಂಬುದು ಗೊತ್ತಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ.
ತಾವು ವಿದ್ಯಾಭ್ಯಾಸ ಮಾಡಿದ ನಗರದ ನ್ಯಾಷನಲ್ ಕಾಲೇಜಿ ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಬೆಂಬಲ ಇಲ್ಲ ಅಂದಿದ್ರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾನು ರಾಜಕೀಯ ಸಾಂದರ್ಭಿಕ ಶಿಶು ಎಂದಿದ್ದೆ. ಕಾಂಗ್ರೆಸ್ ಮುಲಾಜಿ ನಲ್ಲಿದ್ದೇನೆ ಎಂದಿದ್ದೆ. ಆದರೆ ಈ ಬಗ್ಗೆ ಟೀಕೆಗಳು ವ್ಯಕ್ತವಾಯ್ತು. ಹೌದು ನಾನು ಸಾಂದರ್ಭಿಕ ಶಿಶು, ಕಾಂಗ್ರೆಸ್ ಮುಲಾಜಿನಲ್ಲಿ ದ್ದೇನೆ ಎಂದು ಪುನರುಚ್ಚರಿಸಿದರು.

ಈ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಯುತ್ತದೆ. ನಾನು ಕಾಂಗ್ರೆಸ್‍ನ ಮುಲಾಜಿನಲ್ಲಿ ಇದ್ದೇನೆ ಎಂದು ಈ ಹಿಂದೆ ಹೇಳಿದ್ದೆ. ನಾನು ನೀಡಿದ ಹೇಳಿಕೆ ವಾಸ್ತವ.37 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದಿದ್ದೇನೆ ಎಂದಾದರೆ ನಾನು ಸಾಂದರ್ಭಿಕ ಶಿಶು ಅಲ್ಲವೇ? ಎಂದು ಎದುರಾಳಿಗಳಿಗೆ ತಿರುಗೇಟು ನೀಡಿದರು. 53 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ಅಂತ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಸಾಲ ಮನ್ನಾ ಮಾಡದಿದ್ದರೆ ಬಂದ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೇ ತೊಂದರೆ ಅಲ್ಲವೇ. ರಾಜ್ಯದ ರೈತರಿಗೆ ಸಾಲ ಮನ್ನಾ ಮಾಡುವುದಾಗಿ ನಾನು ಮಾತು ಕೊಟ್ಟಿದ್ದೇನೆ. ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿ ಹಾನಿ ಆಗದ ಹಾಗೇ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಆರ್.ಟಿ.ಇ ಕಾಯ್ದೆ ದುರುಪಯೋಗ ಆಗುತ್ತಿದೆ. ಸರ್ಕಾರದಿಂದ ಬರುವ ಆರ್‍ಟಿಇ ಹಣವನ್ನು ಶಾಲೆಗಳು ಪಡೆದುಕೊಳ್ಳುತ್ತಿವೆ. ಹಾಗೇ ಡೊನೇಷನ್ ಕೂಡ ಪಡೆದುಕೊಳ್ಳುತ್ತಿವೆ. 79-80ನೇ ಸಾಲಿನಲ್ಲಿ ನಾನು ಈ ಕಾಲೇಜಿನಲ್ಲಿ ವಿದ್ಯಾರ್ಥಿ ಆಗಿದ್ದೆ. ನ್ಯಾಷನಲ್ ಕಾಲೇಜು ಸಂಸ್ಥಾಪಕರಾದ ನರಸಿಂಹಯ್ಯ ಅವರು ಈ ಕಾಲೇಜು ಕಟ್ಟಲು ಸಾಕಷ್ಟು ಶ್ರಮಿಸಿದ್ದರು ಎಂದು ಸ್ಮರಿಸಿದರು. ನಾನು ಶೈಕ್ಷಣ ಕವಾಗಿ ಬೆಳೆದ ಪರಿಸರಕ್ಕೆ ಬಂದಿದ್ದು ತುಂಬಾ ಸಂತೋಷ ಆಗಿದೆ. ಈ ನ್ಯಾಷನಲ್ ಕಾಲೇಜ್‍ಗೆ ಬರಲು ರೋಮಾಂಚನ ಆಗುತ್ತೆ. ಇಲ್ಲಿಗೆ ಬಂದಾಗ ಸಂಸ್ಕೃತ ಶ್ಲೋಕ ಉಚ್ಚಾರ ಮಾಡಿದರು. ಈ ಸಂಸ್ಕೃತ ಶ್ಲೋಕ ನಮಗೆ ಒಂದು ಶಕ್ತಿ ನೀಡುತ್ತದೆ ಎಂದು ಹೇಳಿದರು.

ನಾನು ತುಂಬಾ ವೀಕ್ ಸ್ಟೂಡೆಂಟ್. ನನಗೆ ಈ ಕಾಲೇಜಿನಲ್ಲಿ ಸೀಟ್ ಸಿಕ್ಕಿದ್ದು ತುಂಬಾ ಸಂತೋಷ ಆಗಿತ್ತು. ನಾನು ಹಿಂದಿನ ಬೆಂಚ್‍ನಲ್ಲಿ ಕೂರುತ್ತಿದ್ದೆ. ಕಾರಣ, ಶಿಕ್ಷಕರು ಪ್ರಶ್ನೆ ಕೇಳುತ್ತಾರೆ ಅಂತ ಅವಿತುಕೊಳ್ಳುತ್ತಿದ್ದೆ ಎಂದು ಕುಮಾರಸ್ವಾಮಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ಟ್ಯಾಲೆಂಟ್ ಇರುತ್ತದೆ. ವಿದ್ಯಾರ್ಥಿಗಳು ಯಾವುದಕ್ಕೂ ಅಂಜದೇ ಮುಂದೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನನ್ನ ವಿದ್ಯಾರ್ಥಿ ಜೀವನದಲ್ಲಿ 20 ಗಂಟೆ ಓದಬೇಕಿತ್ತು. ಇಷ್ಟು ಓದಿದ್ದರೆ ಐಎಎಸ್ ಆಗುತ್ತಿದ್ದೆ. ಆದರೆ ಓದದೇ ಇರುವುದೇ ಒಳ್ಳೆಯದಾಯ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಾವು ಹೊಸ ಕಾರು ಖರೀದಿಸಿಲ್ಲ

ಹೊಸ ಕಾರು ಖರೀದಿಗೆ ನಾನು ಆದೇಶ ಹೊರಡಿಸಿಲ್ಲ. ಈ ಹಿಂದೆಯೇ ಆದೇಶ ನೀಡಲಾಗಿತ್ತು. ಕಳೆದ 10 ವರ್ಷಗಳಿಂದ ಆಡಳಿತ ಭದ್ರತೆ ಕುಸಿದಿದೆ. ಅದನ್ನು ನಾನು ಸರಿ ಮಾಡು ತ್ತೇನೆ. ನಾನು ಜನರ ಮುಖ್ಯಮಂತ್ರಿ. ರಾಜ್ಯದ ಜನರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಪೂರೈಸುತ್ತೇನೆ ಎಂದರು.

54 ಗಂಟೆ ಇದ್ದ ಮುಖ್ಯಮಂತ್ರಿ ಹೆಲಿಕಾಪ್ಟರ್‍ನಲ್ಲಿ ಯಾವುದೋ ಒಂದು ಗ್ರಾಮಕ್ಕೆ ಹೋಗಿದ್ದರು. ಆ ವಿಶೇಷ ವಿಮಾನದ 13 ಲಕ್ಷ ಬಿಲ್‍ನ ಫೈಲ್ ನನ್ನ ಕಚೇರಿಗೆ ಬಂದಿದೆ.
ನಾನು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ಹೋಗುವಾಗ ವಿಶೇಷ ವಿಮಾನ ತಯಾರು ಮಾಡಲು ನಮ್ಮ ಅಧಿಕಾರಿ ಹೇಳಿದರು. ನಾನು ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗಿ ಬರಲು 40 ಲಕ್ಷ ಖರ್ಚಾಗುತ್ತದೆ. ಅದರ ಬದಲು 70 ಸಾವಿರ ರೂ.ನಲ್ಲಿ

ದೆಹಲಿಗೆ ಹೋಗಿ ಬರಬಹುದು ಎಂದು ಹೇಳಿದೆ ಎಂದು ತಿಳಿಸಿದರು. ವಿಶೇಷ ವಿಮಾನ ಬಳಕೆ ಮಾಡುವುದನ್ನು ನಾನು ನಿರ್ಬಂಧಿಸಿದ್ದೇನೆ. ಈಗಾಗಲೇ ನನ್ನ ಸ್ವಂತ ಕಾರು ಬಳಸುತ್ತಿದ್ದು, ಕಾರಿನ ಖರ್ಚು ವೆಚ್ಚ ಕೂಡ ನಾನೇ ಭರಿಸುತ್ತಿದ್ದೇನೆ. ಈ ಸಮ್ಮಿಶ್ರ ಸರ್ಕಾರ ಯಾವ ರೀತಿ ಮ್ಯಾನೇಜ್ ಮಾಡೋದು ನಂಗೆ ಗೊತ್ತು. ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇನೆ. ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ನನ್ನದೇ ಆದ ಕಾರ್ಯಕ್ರಮ ಇದೆ. ಆ ಕಾರ್ಯಕ್ರಮದ ಮೂಲಕ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.

Translate »