ಡಿಕೆಶಿ ಸೇರಿ ಕಾಂಗ್ರೆಸ್ ಸೂಚಿಸುವವರ ಸಂಪುಟಕ್ಕೆ  ಸೇರಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನಿರ್ಧಾರ
ಮೈಸೂರು

ಡಿಕೆಶಿ ಸೇರಿ ಕಾಂಗ್ರೆಸ್ ಸೂಚಿಸುವವರ ಸಂಪುಟಕ್ಕೆ  ಸೇರಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನಿರ್ಧಾರ

June 5, 2018

ಬೆಂಗಳೂರು: ಮಾಜಿ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಸೇರಿ ದಂತೆ ಕಾಂಗ್ರೆಸ್ ಹೆಸ ರಿಸಿರುವ ಎಲ್ಲರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಆದರೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಅವರ ಸಂಘಟನೆ ಮತ್ತು ಹಿರಿಯತನಕ್ಕೆ ಅವರಿಗೆ ಸಂಪುಟ ದಲ್ಲಿ ಉತ್ತಮ ಖಾತೆ ಗೌರವ ನೀಡುವ ಬಗ್ಗೆ ನಾಯಕರಲ್ಲಿ ಅಪಸ್ವರ ಇಲ್ಲ. ಆದರೆ ನೋಟು ಅಮಾನ್ಯೀಕರಣ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶ ಕ್ಕಾಗಿ ಶಿವಕುಮಾರ್ ಮಂತ್ರಿಯಾದ ತಕ್ಷಣ ಸಿಬಿಐ ಬಂಧಿಸಿದರೆ ಇಡೀ ರಾಷ್ಟ್ರವ್ಯಾಪಿ ಕಪ್ಪು ಚುಕ್ಕಿ ಇಟ್ಟಂತಾಗುತ್ತದೆ ಎಂಬ ಭಯ ಆ ಪಕ್ಷದ ವರಿಷ್ಠರ ಕಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜಕೀಯ ಉದ್ದೇಶಕ್ಕಾಗಿ ಎಂತಹ ಮಟ್ಟಕ್ಕಾದರೂ ಇಳಿಯಬಹುದು. ಕೇವಲ ಹತ್ತು ಲಕ್ಷ ರೂ. ನೋಟು ಬದಲಾವಣೆಯನ್ನು ಮುಂದಿಟ್ಟು ಕೊಂಡು ಶಿವಕುಮಾರ್ ಮೇಲೆ ಕ್ರಮ ತೆಗೆದುಕೊಂಡರೆ ಹೇಗೆ ಎಂಬ ಪ್ರಶ್ನೆ ಕಾಡಿದೆ. ಈ ಬಗ್ಗೆ ಪಕ್ಷದ ವರಿಷ್ಠರು ರಾಜ್ಯದ ನಾಯಕರೊಟ್ಟಿಗೂ ಸಮಾಲೋಚನೆ ನಡೆಸಿದ್ದಾರೆ. ಶಿವಕುಮಾರ್ ಅವರನ್ನು ಹೊರಗಿಡಲು ಸಾಧ್ಯವಿಲ್ಲ. ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪರಿಸ್ಥಿತಿಯು ಇಲ್ಲದಂತಾಗಿದೆ. ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕೊಡುವ ಬಗ್ಗೆಯು ಚಿಂತನೆ ಇದೆ. ಈ ಹುದ್ದೆ ದೊರೆತ ನಂತರವೂ ಅವರ ಬಂಧನವಾದರೆ ಪಕ್ಷಕ್ಕೆ ಭಾರೀ ಹಿನ್ನಡೆಯಾಗುತ್ತದೆ. ಬಿಸಿ ತುಪ್ಪವಾಗಿ ಪರಿಣಮಿಸಿರುವ ಶಿವಕುಮಾರ್ ಅವರಿಗೆ ಸ್ಥಾನಮಾನ ನೀಡುವ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಅವರೇ ನಾಳೆ ಮಧ್ಯಾಹ್ನದ ವೇಳೆಗೆ ತೀರ್ಮಾನ ಕೈಗೊಳ್ಳಬೇಕಾಗಿದೆ.

Translate »