ಕುರುಬಾರಹಳ್ಳಿ, ಆಲನಹಳ್ಳಿ, ಚೌಡಹಳ್ಳಿ ಸರ್ವೆ ನಂಬರ್‍ಗಳ ಭೂಮಿ ಸಂಬಂಧ ಹೈಕೋರ್ಟ್ ತೀರ್ಪು ಅನುಷ್ಠಾನಗೊಳಿಸಿ
ಮೈಸೂರು

ಕುರುಬಾರಹಳ್ಳಿ, ಆಲನಹಳ್ಳಿ, ಚೌಡಹಳ್ಳಿ ಸರ್ವೆ ನಂಬರ್‍ಗಳ ಭೂಮಿ ಸಂಬಂಧ ಹೈಕೋರ್ಟ್ ತೀರ್ಪು ಅನುಷ್ಠಾನಗೊಳಿಸಿ

July 23, 2020

ಮೈಸೂರು, ಜು.22(ಆರ್‍ಕೆಬಿ)- ಸರ್ಕಾರ, ಸಿದ್ದಾರ್ಥ ಬಡಾವಣೆ, ಕೆಸಿ ನಗರ, ಜೆಸಿ ನಗರ ಬಡಾವಣೆಗಳ ಭೂಮಿ ಹಸ್ತಾಂ ತರಕ್ಕೆ ತೋರಿಸುತ್ತಿರುವಷ್ಟೇ ಆಸಕ್ತಿಯನ್ನು ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41 ಹಾಗೂ ಚೌಡಹಳ್ಳಿ ಸರ್ವೆ ನಂ. 39ರ ಆಸ್ತಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಲು ತೋರ ಬೇಕು. ಅದು ಬಿಟ್ಟು ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮ ನವಿ ಸಲ್ಲಿಸಲು ಮುಂದಾದರೆ ಚಾಮುಂಡಿ ಬೆಟ್ಟ ತಪ್ಪಲಿನ ಇಡೀ ಭೂ ವಿವಾದ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಗಳ ಬಗ್ಗೆ ಚಾಮುಂಡಿ ತಪ್ಪಲಿನ ಭೂ ಮಾಲೀಕರ ಸಂಘ ಆತಂಕ ವ್ಯಕ್ತಪಡಿಸಿದೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತ ನಾಡಿದ ಸಂಘದ ಅಧ್ಯಕ್ಷ ಲತವಾಣೆ ಕೃಷ್ಣ, ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41 ಮತ್ತು ಚೌಡಹಳ್ಳಿ ಸರ್ವೆ ನಂ.39ರ ಜಮೀನುಗಳನ್ನು ಬಿ ಖರಾಬು ಎಂದು ಮೈಸೂರು ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿ ಆದೇಶ ನೀಡಿ ದ್ದರೂ, ಸರ್ಕಾರ ಈ ಮೂರು ಸರ್ವೆ ನಂಬರ್‍ಗಳ ಒಟ್ಟಾರೆ ಸಾವಿರಾರು ಎಕರೆ ಭೂಮಿ ಹೊರತಾಗಿ ಕೇವಲ ಮೂರು ಬಡಾವಣೆ ಒಳಗೊಂಡ 354.29 1/2 ಎಕರೆ ಪ್ರದೇಶದ ಜಮೀನುಗಳನ್ನು ಮಾತ್ರ ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಮುಂದಾಗಿದೆ. ಇದು ಹೈಕೋರ್ಟ್ ಆದೇಶವನ್ನು ಕಡೆಗಣಿಸಿ ದಂತಾಗಲಿದೆ ಎಂದು ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಜು.15ರಂದು ಮೈಸೂರಲ್ಲಿ ಕಂದಾಯ ಇಲಾಖೆಯ ಸುತ್ತೋಲೆ ಪ್ರದರ್ಶಿಸಿದ್ದು, ಇದರಲ್ಲಿ ಕೇವಲ ಕುರುಬಾರಹಳ್ಳಿ, ಆಲನ ಹಳ್ಳಿ ಸರ್ವೆ ನಂಬರ್‍ಗಳಲ್ಲಿ ನಿರ್ಮಿಸಲಾಗಿ ರುವ ಸಿದ್ದಾರ್ಥನಗರ, ಕೆಸಿ ನಗರ, ಜೆಸಿ ನಗರ ಬಡಾವಣೆಗಳ ಭೂಮಿ ಹಸ್ತಾಂತರ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ ದ್ದಾರೆ. ಆದರೆ ಹೈಕೋರ್ಟ್ ಆದೇಶಿಸಿರು ವಂತೆ ಕುರುಬಾರಹಳ್ಳಿ, ಆಲನಹಳ್ಳಿ, ಚೌಡ ಹಳ್ಳಿ ಸರ್ವೆ ನಂಬರ್‍ಗಳ ಭೂಮಿಯನ್ನು ಬಿ-ಖರಾಬಿನಿಂದ ಕೈಬಿಡುವ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿ ಸಿಲ್ಲ. ಹೈಕೋರ್ಟ್ ಆದೇಶದನ್ವಯ 2000 ಎಕರೆ ಜಮೀನಿನ ಪೈಕಿ ಕೇವಲ ಬಡಾವಣೆಗಳಿಗೆ ಸಂಬಂಧಿಸಿದ 354.29 1/2 ಎಕರೆ ಜಮೀನನ್ನು ಹಸ್ತಾಂತರ ಮಾಡುವ ಕುರಿತು ಸುತ್ತೋಲೆ ಹೊರಡಿಸಿ, ಹೈಕೋರ್ಟ್ ಆದೇಶವನ್ನು ಕಡೆಗಣಿಸು ತ್ತಿದ್ದಾರೆ ಎಂದು ದೂರಿದರು.

ಅಂದಿನ ಜಿಲ್ಲಾಧಿಕಾರಿಗಳು ಖಾಸಗಿ ಜಮೀನುಗಳನ್ನು ಬಿ ಖರಾಬು ಎಂದು ಘೋಷಿಸಿದ್ದರ ವಿರುದ್ಧ ಚಾಮುಂಡಿ ತಪ್ಪ ಲಿನ ಭೂ ಮಾಲೀಕರ ಸಂಘದ ಸದಸ್ಯರು ಆದ 70ಕ್ಕೂ ಹೆಚ್ಚು ಮಂದಿ ಆಸ್ತಿಗಳ ಮಾಲೀಕರು ಹೈಕೋರ್ಟ್‍ನಲ್ಲಿ ಪ್ರತ್ಯೇಕವಾಗಿ ದಾವೆ ಹೂಡಿದ್ದರು. ಎಲ್ಲಾ ದಾವೆಗಳನ್ನು ಒಗ್ಗೂಡಿಸಿ, ವಿಚಾರಣೆ ನಡೆಸಿದ ಹೈಕೋರ್ಟ್ ಭೂ ಮಾಲೀಕರ ಪರವಾಗಿ ತೀರ್ಪು ನೀಡಿದೆ. ಆದರೆ ಕಂದಾಯ ಇಲಾಖೆ ಹೈಕೋರ್ಟ್ ತೀರ್ಪನ್ನು ಕಡೆ ಗಣಿಸಿ, ಕೇವಲ ಮೂರು ಬಡಾವಣೆ ಗಳಿರುವ 354.29 1/2 ಎಕರೆ ಭೂಮಿ ಯನ್ನಷ್ಟೇ ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸುವ ಕುರಿತು ಸುತ್ತೋಲೆ ಹೊರ ಡಿಸಿರುವುದನ್ನು ಅವರು ಪ್ರಶ್ನಿಸಿದರು.
ಹೈಕೋರ್ಟ್ ತೀರ್ಪಿನಲ್ಲಿ ಸಂವಿಧಾನದ 363ನೇ ವಿಧಿಯಡಿ 1950ರಲ್ಲಿ ತಮ್ಮ ಸಂಸ್ಥಾನವನ್ನು ಭಾರತ ದೇಶದಲ್ಲಿ ವಿಲೀನ ಗೊಳಿಸುವ ಸಂದರ್ಭದಲ್ಲಿ ಮಹಾರಾಜರು ಅಂದಿನ ಭಾರತ ಸರ್ಕಾರದೊಂದಿಗೆ ಮಾಡಿ ಕೊಂಡ ಒಪ್ಪಂದದಂತೆ ಖಾಸಗಿ ಆಸ್ತಿಗಳನ್ನು ಹೊಂದುವ, ಅವನ್ನು ವಿಕ್ರಯಿಸುವ ಅಧಿ ಕಾರವನ್ನು ಎತ್ತಿ ಹಿಡಿಯಲಾಗಿದೆ. ಅಲ್ಲದೆ, ಸುಪ್ರೀಂಕೋರ್ಟ್ ಕಾಶ್ಮೀರ ಮಹಾ ರಾಜರು-ಹಲ್ಕಾರ್ ರಾಜ್ಯಗಳು, ಡಾ.ಕರಣ್ ಸಿಂಗ್-ಜಮ್ಮು ಕಾಶ್ಮೀರ ರಾಜ್ಯ ಹಾಗೂ ಮಧ್ಯಪ್ರದೇಶ ರಾಜ್ಯ-ಉಷಾದೇವಿ ಪ್ರಕ ರಣಗಳಲ್ಲಿ ನೀಡಿರುವ ತೀರ್ಪುಗಳನ್ನು ಉಲ್ಲೇಶಿಸಿ ಹೈಕೋರ್ಟ್ ಭೂ ಮಾಲೀ ಕರ ಪರವಾಗಿ ತೀರ್ಪು ನೀಡಿದೆ. ಹೈಕೋರ್ಟ್ ಸತತ ಐದು ವರ್ಷಗಳಿಗೂ ಹೆಚ್ಚು ಕಾಲ ಪ್ರಕರಣದ ಎಲ್ಲಾ ಅಂಶ ಗಳನ್ನು ಗಂಭೀರವಾಗಿ ಪರಾಮರ್ಶೆ ಮಾಡಿ ನೀಡಿರುವ ತೀರ್ಪನ್ನು ಅನುಷ್ಟಾನಗೊಳಿ ಸಲು ಸರ್ಕಾರ ವಿಳಂಬ ಹಾಗೂ ತಾರ ತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋ ಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಮನು, ರಾಘವೇಂದ್ರ ಮೂರ್ತಿ, ವಕೀಲ ವಿನಯ್ ಇದ್ದರು.

Translate »