ಶಾಲಾಪೂರ್ವ ಶಿಕ್ಷಣ ಜಾರಿ
News

ಶಾಲಾಪೂರ್ವ ಶಿಕ್ಷಣ ಜಾರಿ

September 14, 2022

ಬೆಂಗಳೂರು, ಸೆ. 13(ಕೆಎಂಶಿ)- ಪ್ರಸಕ್ತ ಸಾಲಿನಲ್ಲಿ ರಾಜ್ಯದ 20 ಸಾವಿರ ಅಂಗನ ವಾಡಿಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಶಾಲಾಪೂರ್ವ ಶಿಕ್ಷಣ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಆಚಾರ್ ಹಾಲಪ್ಪ ಬಸಪ್ಪ ವಿಧಾನಪರಿಷತ್‍ನಲ್ಲಿಂದು ಹೇಳಿದರು.

ವಿಧಾನಪರಿಷತ್‍ನಲ್ಲಿ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮಗಳನ್ನು ಜಾರಿ ಮಾಡ ಲಾಗುವುದು ಎಂದರು. ನೂತನ ಶಿಕ್ಷಣ ನೀತಿಯನ್ವಯ ಶಾಲಾ ಪೂರ್ವ ಶಿಕ್ಷಣಕ್ಕೆ ಪಠ್ಯಕ್ರಮ ರೂಪಿಸಲು ಈಗಾಗಲೇ ಆರು ಸಮಿತಿಗಳನ್ನು ರಚಿಸಲಾಗಿದೆ. ಆ ಸಮಿತಿ ಗಳ ಶಿಫಾರಸು ಆಧರಿಸಿ ಪಠ್ಯಕ್ರಮ ಸೇರಿ ಇತರ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಸದರಿ ಪಠ್ಯ ಕ್ರಮ ಬೋಧನೆಗಾಗಿ ಕಾರ್ಯ ಕರ್ತರಿಗೆ ಅಗತ್ಯ ತರಬೇತಿ ನೀಡಲಾಗು ವುದು ಎಂದು ಹೇಳಿದರು. ಈ ವರ್ಷ ರಾಜ್ಯದ 20 ಸಾವಿರ ಅಂಗನವಾಡಿಗಳಲ್ಲಿ ಎನ್‍ಇಪಿ ಅನುಸಾರ ಶಾಲಾಪೂರ್ವ ಶಿಕ್ಷಣವನ್ನು ಜಾರಿ ಮಾಡಲಾಗುವುದು. ತದನಂತರ ಅಗತ್ಯವಿದ್ದರೆ ಕಾರ್ಯಕರ್ತರಿಗೆ ಆರು ತಿಂಗಳಿನಿಂದ 1 ವರ್ಷದ ಡಿಫೆÇ್ಲೀಮಾ ತರಬೇತಿ ನೀಡಲಾಗುವುದು. ಎನ್‍ಇಪಿ ಪಠ್ಯಕ್ರಮ ಬೋಧ ನೆಗೆ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳುವುದಿಲ್ಲ ಎಂದರು. ರಾಜ್ಯ ಸರ್ಕಾರ ಸದ್ಯಕ್ಕೆ ಎನ್‍ಇಪಿ ಜಾರಿ ಮಾಡಿಲ್ಲ, ತರ ಬೇತಿ ಸೇರಿ ಅಗತ್ಯವಾದ ಪೂರ್ವ ತರಬೇತಿ ನಡೆಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾ ಗುವುದು. ಅದಕ್ಕಾಗಿಯೇ ಸಮಿತಿ ರಚಿಸ ಲಾಗಿದೆ. ಕೇಂದ್ರ ಸರ್ಕಾರವೇ ಶೀಘ್ರ ಶಾಲಾ ಪೂರ್ವ ಶಿಕ್ಷಣವನ್ನು ಘೋಷಣೆ ಮಾಡ ಲಿದೆ ಎಂದರು. ರಾಜ್ಯದ ಅಂಗನವಾಡಿಗಳ ಮೂಲ ಸೌಲಭ್ಯ ಅಭಿವೃದ್ಧಿಗೆ ಹಲವು ಯೋಜನೆಗಳ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ.
ಬಜೆಟ್‍ನಲ್ಲಿ 1877 ಹೊಸ ಅಂಗನವಾಡಿ ಕಟ್ಟಡಗಳನ್ನು ಘೋಷಿಸಲಾಗಿದೆ. ಮುಖ್ಯಮಂತ್ರಿ 4780 ಹೊಸ ಅಂಗನವಾಡಿಗಳನ್ನು ಘೋಷಣೆ ಮಾಡಿದ್ದಾರೆ. 48 ವರ್ಷ ಮೇಲ್ಪಟ್ಟವರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದ 66,361 ಅಂಗನವಾಡಿಗಳ ಪೈಕಿ 20 ಸಾವಿರ ಅಂಗನವಾಡಿಗಳಲ್ಲಿ ಪಿಯುಸಿ ವರೆಗೂ ಕಲಿತವರಿದ್ದಾರೆ. ಎಸ್‍ಎಸ್‍ಎಲ್‍ಸಿ ಕಲಿತವರಿಗೆ ಅಗತ್ಯ ತರಬೇತಿ ನೀಡಲಾಗು ವುದು. ಬಿಜೆಪಿಯ ಪ್ರಾಣೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 18 ವರ್ಷದೊಳ ಗಿನ ಎಚ್‍ಐವಿ ಪೀಡಿತ ಮಕ್ಕಳ ಆರೈಕೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲಾ ಆಸ್ಪತ್ರೆಗಳ ಎಟಿಆರ್ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೋಂಕಿತ ಮಕ್ಕಳ ವಿಶೇಷ ಪಾಲನೆಗೆ ಮಾಸಿಕ ಒಂದು ಸಾವಿರ ರೂ. ನೀಡಲಾಗುತ್ತಿದೆ ಎಂದರು.

Translate »