ಮೈಸೂರು, ಜು.16- ಮೈಸೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಗುರುವಾರ ಐವರು ಗರ್ಭಿಣಿಯರು ಸೇರಿ 130 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 1320ಕ್ಕೆ ಏರಿಕೆಯಾಗಿದೆ. ಮೂವರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇಂದು 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 531 ಮಂದಿ ಗುಣಮುಖರಾದಂತಾಗಿದೆ. ಉಳಿದ 739 ಸಕ್ರಿಯ ಸೋಂಕಿತರ ಪೈಕಿ 230 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 77 ಮಂದಿ ಕೋವಿಡ್ ಡೆಡಿಕೇಟೆಡ್ ಹೆಲ್ತ್ ಕೇರ್‍ನಲ್ಲಿ, 105 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 81 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 246 ಮಂದಿ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ.
ಇಂದು ಪತ್ತೆಯಾದ ಸೋಂಕಿತರು ವಾಸಿಸುತ್ತಿದ್ದ ಮೈಸೂರಿನ ನಾಯ್ಡು ನಗರ ಮುಖ್ಯ ರಸ್ತೆ, ಬನ್ನಿಮಂಟಪ ಎಂಐಜಿ ಹುಡ್ಕೋ ವಾಟರ್ ಟ್ಯಾಂಕ್ ಹತ್ತಿರ, ಹೂಟಗಳ್ಳಿ ಕೆಹೆಚ್‍ಬಿ ಕಾಲೋನಿಯ ಎಂಐಜಿ ಗ್ರೂಪ್-4, ಅಶೋಕ ರಸ್ತೆ 22ನೇ ವೆÀಸ್ಟ್ ಕ್ರಾಸ್, ಚಾಮರಾಜ ಮೊಹಲ್ಲಾ ಸೋನಾರ್ ಬೀದಿ, ಯಾದವಗಿರಿ ದೋಬಿ ಘಾಟ್ ಹತ್ತಿರ `ಸಿ’ ಬ್ಲಾಕ್ `ಜಿ’ ಮುಖ್ಯರಸ್ತೆ, ಇಟ್ಟಿಗೆಗೂಡಿನ ಮಾನಸರ ರಸ್ತೆ, ಮಂಡಿಮೊಹಲ್ಲಾದ ಪುಲಿಕೇಶಿ ರಸ್ತೆ, ಗಾಂಧಿನಗರ 1ನೇ ಮುಖ್ಯರಸ್ತೆಯ 11ನೇ ಕ್ರಾಸ್, ವಿದ್ಯಾ ರಣ್ಯಪುರಂ 1ನೇ ಮುಖ್ಯರಸ್ತೆ 2ನೇ ಕ್ರಾಸ್, ಸುಭಾಷ್ ನಗರ 5ನೇ ಕ್ರಾಸ್, ಮಹದೇವಪುರ ರಸ್ತೆ ಉದಯಗಿರಿ ಪೊಲೀಸ್ ಠಾಣೆ ಮುಂಭಾಗ, ಸುಭಾಷ್ ನಗರ ಟ್ಯಾಂಕ್ ರಸ್ತೆ, ಕೆಸರೆ 2ನೇ ಹಂತದ 7ನೇ ಕ್ರಾಸ್, ಸಂಕ್ರಾಂತಿ ವೃತ್ತ, ಕ್ಯಾತಮಾರನಹಳ್ಳಿ ಟೆಂಟ್ ರಸ್ತೆ 6ನೇ ಕ್ರಾಸ್, ಹೆಬ್ಬಾಳ್ 8ನೇ ಮುಖ್ಯರಸ್ತೆ 11ನೇ ಕ್ರಾಸ್, ಚಾಮರಾಜ ಮೊಹಲ್ಲಾ ಕುರುಬರ ಬೀದಿ 2ನೇ ಕ್ರಾಸ್, ಸಿದ್ದಾರ್ಥನಗರ ಜ್ಞಾನಮಾರ್ಗ 5ನೇ ಮುಖ್ಯರಸ್ತೆ 5ನೇ ಕ್ರಾಸ್, ಲೋಕನಾಯಕನಗರ ಸಂಜೀವಿನ ಸರ್ಕಲ್ ಹತ್ತಿರ 5ನೇ ಕ್ರಾಸ್, ಕೈಲಾಸಪುರಂ 4ನೇ ಕ್ರಾಸ್, ಲಷ್ಕರ್ ಮೊಹಲ್ಲಾ ಮೊಹಮ್ಮದ್ ಸೇಠ್ ಬ್ಲಾಕ್, ಜೆ.ಪಿ.ನಗರ ಜನತಾ ಬಡಾವಣೆ, ಗದ್ದಿಗೆ ರಸ್ತೆ ಎಸ್‍ಬಿಎಂ ಬಡಾವಣೆ, ನಜರ್‍ಬಾದ್ ಪೊಲೀಸ್ ವಸತಿ ಗೃಹ 2ನೇ ಕ್ರಾಸ್, ಜಲಪುರಿ ಪೊಲೀಸ್ ವಸತಿ ಗೃಹ ಬಿ ಬ್ಲಾಕ್, ಕುಂಬಾರಕೊಪ್ಪಲು ಮಹದೇಶ್ವರ ಬಡಾವಣೆ 1ನೇ ಕ್ರಾಸ್, ಕೆಸರೆ 1ನೇ ಹಂತ 2ನೇ ಕ್ರಾಸ್, ರಾಮನುಜ ರಸ್ತೆ ರಾಮಚಂದ್ರ ಅಗ್ರಹಾರ 3ನೇ ಕ್ರಾಸ್, ಜೆ.ಸಿ.ನಗರ ಚಾಮುಂಡಿಬೆಟ್ಟದ ರಸ್ತೆ 8ನೇ ಕ್ರಾಸ್, ಕಲ್ಯಾಣಗಿರಿ, ಕುಂಬಾರಕೊಪ್ಪಲು 2ನೇ ಮುಖ್ಯರಸ್ತೆ 7ನೇ ಕ್ರಾಸ್, ಮಹದೇಶ್ವರ ಬಡಾವಣೆ 10ನೇ ಕ್ರಾಸ್, ಶಾಂತಿ ನಗರ 11ನೇ ಕ್ರಾಸ್, ತ್ರಿವೇಣಿ ಸರ್ಕಲ್ ಹತ್ತಿರ ಇಡಬ್ಲ್ಯೂಎಸ್ 2ನೇ ಕ್ರಾಸ್, ವಿದ್ಯಾರಣ್ಯಪುರÀಂ ಬೆಸ್ತರ ಬ್ಲಾಕ್ 2ನೇ ಕ್ರಾಸ್, ಹೆಬ್ಬಾಳ್ ಮುಖ್ಯರಸ್ತೆ 3ನೇ ಕ್ರಾಸ್, ಕಾವೇರಿ ಸರ್ಕಲ್ 18ನೇ ಕ್ರಾಸ್, ಶಾಂತಿ ನಗರ 14ನೇ ಕ್ರಾಸ್, ಸಾಡೇ ರಸ್ತೆ 4ನೇ ಕ್ರಾಸ್, ಮಂಡಿ ಮೊಹಲ್ಲಾ ಎಂ.ಹೆಚ್.ರಸ್ತೆ, ಶಾಂತಿ ನಗರ 1ನೇ ಮುಖ್ಯರಸ್ತೆ 3ನೇ ಕ್ರಾಸ್, ಭವ್ಯ ಭಾರತ ಬಡಾವಣೆ 2ನೇ ಹಂತ, ಹೊಸ ಬಂಬೂ ಬಜಾರ್ 2ನೇ ಕ್ರಾಸ್, ಸರಸ್ವತಿಪುರಂ 4ನೇ ಮುಖ್ಯರಸ್ತೆ 3ನೇ ಕ್ರಾಸ್, ಸಜ್ಜಾದ್ ಅಲಿ ಬೀದಿ 1ನೇ ಕ್ರಾಸ್, ಬಿಎಂಶ್ರೀ ನಗರ 11ನೇ ಕ್ರಾಸ್, ಮಂಡಿ ಮೊಹಲ್ಲಾ ದೊಡ್ಡ ವಕ್ಕಲಗೇರಿ 4ನೇ ಕ್ರಾಸ್, ಹೆಬ್ಬಾಳ್ 1ನೇ ಹಂತ 7ನೇ ಡಿ ರಸ್ತೆ, ಹಳ್ಳಿ ಬೋಗಾದಿ 10ನೇ ಕ್ರಾಸ್, ಮೇಟಗಳ್ಳಿ ಜಯದೇವನಗರ 5ನೇ ಕ್ರಾಸ್, ಕಲ್ಯಾಣಗಿರಿ ನಗರ ಕೆಹೆಚ್‍ಬಿ ಕಾಲೋನಿ ಎಂಐಜಿ 2ನೇ ಕ್ರಾಸ್, ಎನ್.ಆರ್.ಮೊಹಲ್ಲಾ ಎಬಿ ಕ್ರಾಸ್, ಸಿದ್ದಿಖಿ ನಗರ, ಗಾಂಧಿ ನಗರ ಎಂ.ಸಿ.ಕಾಲೋನಿ 7ನೇ ಕ್ರಾಸ್, ಹುಣಸೂರಿನ ಮುಸ್ಲಿಂ ಬ್ಲಾಕ್, ಗರ್ಗೇಶ್ವರಿ ನ್ಯೂ ಕಾಲೋನಿ, ಇಲವಾಲದ ವೀರಪ್ಪನ ಕೊಪ್ಪಲು ಮತ್ತು ಈರಪ್ಪ ಕೊಪ್ಪಲು, ಕೂರ್ಗಳ್ಳಿಯ ಮೇಗಳ ಕೊಪ್ಪಲು, ಜಯಪುರ ಹೋಬಳಿ ಉದ್ಬೂರು, ನಂಜನಗೂಡು ತಾಲೂಕು ಹೊಸಕೋಟೆ, ಶಂಕರಪುರ ಸೇರಿದಂತೆ 96 ಪ್ರದೇಶಗಳನ್ನು ಹೊಸ ಕಂಟೇನ್ಮೆಂಟ್ ಜೋನ್‍ಗಳಾಗಿ ಜಿಲ್ಲಾಡಳಿತ ಘೋಷಿಸಿದೆ.