ಬೆಂಗಳೂರು, ಜು.16- ರಾಜ್ಯದಲ್ಲಿ ಗುರುವಾರ ಕೊರೊನಾ ಆರ್ಭಟಿಸಿದ್ದು, ಒಂದೇ ದಿನ 4169 ಮಂದಿಗೆ ಸೋಂಕು ಪತ್ತೆಯಾಗಿದ್ದು, 104 ಮಂದಿ ಮೃತಪಟ್ಟಿ ದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 51422 ಹಾಗೂ ಮೃತರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿಂದು 2344 ಮಂದಿ ಸೋಂಕಿಗೆ ತುತ್ತಾಗಿದ್ದು, 70 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 25 288ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 507 ಆಗಿದೆ. ಇಂದು 1263 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡು ಗಡೆಯಾಗಿದ್ದು, ಈವರೆಗೆ 19729 ಮಂದಿ ಗುಣಮುಖರಾದಂತಾಗಿದೆ. ರಾಜ್ಯದ 30655 ಸಕ್ರಿಯ ಸೋಂಕಿತರ ಪೈಕಿ 539 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರೆಲ್ಲರನ್ನೂ ತುರ್ತು ನಿಗಾ ಘಟಕ ದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 238, ಧಾರವಾಡ 176, ವಿಜಯ ಪುರ 144, ಮೈಸೂರು 130, ಕಲಬುರಗಿ 123, ಉಡುಪಿ 113, ರಾಯಚೂರು 101, ಬೆಳಗಾವಿ 92, ಉತ್ತರ ಕನ್ನಡ 79, ಚಿಕ್ಕ ಬಳ್ಳಾಪುರ 77, ಬೀದರ್ 53, ಶಿವಮೊಗ್ಗ 46, ಬಳ್ಳಾರಿ ಮತ್ತು ಗದಗ ತಲಾ 44, ಕೋಲಾರ 43, ಬಾಗಲಕೋಟೆ 39, ಯಾದಗಿರಿ 34, ಕೊಪ್ಪಳ 32, ಹಾಸನ ಮತ್ತು ಬೆಂಗಳೂರು ಗ್ರಾಮಾಂತರ 31, ಚಿಕ್ಕಮಗಳೂರು 30, ದಾವಣಗೆರೆ 25, ಚಿತ್ರದುರ್ಗ 21, ಕೊಡಗು 18, ಚಾಮರಾಜ ನಗರ ಮತ್ತು ಹಾವೇರಿ 13, ತುಮಕೂರು 12, ಮಂಡ್ಯ 11, ರಾಮನಗರದಲ್ಲಿ 4 ಪ್ರಕರಣ ದಾಖಲಾಗಿದೆ. ಸೋಂಕಿತರ ಪ್ರಥಮ ಸಂಪ ರ್ಕದ 51615 ಮತ್ತು ದ್ವಿತೀಯ ಸಂಪರ್ಕದ 46206 ಮಂದಿ ಸೇರಿದಂತೆ ಒಟ್ಟು 97821 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
