ಮೈಸೂರಲ್ಲಿತ್ಯಾಗ, ಬಲಿದಾನದ ಸಂಕೇತ, ಭಕ್ತಿ ಭಾವದ ಬಕ್ರೀದ್ ಆಚರಣೆ
ಮೈಸೂರು

ಮೈಸೂರಲ್ಲಿತ್ಯಾಗ, ಬಲಿದಾನದ ಸಂಕೇತ, ಭಕ್ತಿ ಭಾವದ ಬಕ್ರೀದ್ ಆಚರಣೆ

July 11, 2022

ಮೈಸೂರು, ಜು.10 (ಆರ್‍ಕೆಬಿ)- ತ್ಯಾಗ ಮತ್ತು ಬಲಿದಾನದ ಸಂಕೇತ ವಾದ ಬಕ್ರೀದ್ ಹಬ್ಬವನ್ನು ಮೈಸೂರಿನಲ್ಲಿ ಭಾನುವಾರ ಮುಸ್ಲಿಂ ಸಮುದಾಯದ ಬಾಂಧವರು ಭಕ್ತಿ ಭಾವದಿಂದ ಆಚರಿಸಿದರು. ಮೈಸೂರಿನ ತಿಲಕ್‍ನಗರದ ಈದ್ಗಾ ಮೈದಾನ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಆಲಂಗಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಭೆಗಳನ್ನು ನಿಷೇಧಿಸಿದ್ದರಿಂದ ಮೂರು ವರ್ಷಗಳಿಂದ ಹಬ್ಬ ಆಚರಿಸ ಲಾಗಿರಲಿಲ್ಲ. ಮಳೆ ಮತ್ತು ಚಳಿಯ ವಾತಾವರಣ ಇದ್ದುದರಿಂದ ಭಾನುವಾರ ಬೆಳಗ್ಗೆ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ವೇಳೆ ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿರಲಿಲ್ಲ. ಅಲ್ಲದೆ ಸಮುದಾಯದ ಸದಸ್ಯರು ವಿವಿಧ ಮಸೀದಿ ಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಆದ್ಯತೆ ನೀಡಿದರು. ಬೆಳಗ್ಗೆ 6.30ಕ್ಕೆ ಆರಂಭ ವಾದ ಪ್ರಾರ್ಥನೆಗಳು ಬೆಳಗ್ಗೆ 11 ಗಂಟೆಯವರೆಗೆ ನಡೆಯಿತು. ಈದ್ಗಾ ಮೈದಾನದಲ್ಲಿ ಮೈಸೂರು ಹಜರತ್ ಮೌಲಾನ ಸರ್ಖಾಜಿ ಮೊಹಮ್ಮದ್ ಉಸ್ಮಾನ್ ಷರೀಫ್ ಅವರು ಪ್ರಾರ್ಥನೆ ಸಲ್ಲಿಸಿದರು.

ಸರ್ವಶಕ್ತ ಅಲ್ಲಾಹನ ಸಲಹೆಯ ಮೇರೆಗೆ ಪ್ರವಾದಿ ಇಬ್ರಾಹಿಂ ಖಲೀ ಲುಲ್ಲಾ ಅವರು ತಮ್ಮ ಪ್ರೀತಿಯ ಪುತ್ರ ಪ್ರವಾದಿ ಇಸ್ಮಾಯಿಲ್ ಜಬೀ ಉಲ್ಲಾನನ್ನು ದೇವರಿಗೆ ತ್ಯಾಗ ಮಾಡಲು ನಿರ್ಧರಿಸಿ, ತಮ್ಮ ತ್ಯಾಗ ಮತ್ತು ಬಲಿದಾನದ ಮೂಲಕ ದೇವರನ್ನು ಒಲಿಸಿಕೊಂಡ ದ್ಯೋತಕವಾಗಿ ಈ ಹಬ್ಬ ಆಚರಿಸಲಾಗುತ್ತದೆ ಎಂದು ಅವರ ತ್ಯಾಗವನ್ನು ಸರ್ಖಾಜಿ ಸ್ಮರಿಸಿದರು.

ದೇಶದ ಕಲ್ಯಾಣಕ್ಕಾಗಿ ಮತ್ತು ಪ್ರತಿಯೊಬ್ಬರನ್ನು ಭಯಾನಕ ರೋಗ ಗಳಿಂದ ರಕ್ಷಿಸಲು ದೇವರಲ್ಲಿ ಪ್ರಾರ್ಥಿಸಿದರು. ಈ ಹಬ್ಬದ ಸಂದರ್ಭದಲ್ಲಿ ತಮ್ಮ ಆಹಾರವನ್ನು ಮೂರು ಭಾಗ ಮಾಡಿ, ಒಂದು ಭಾಗವನ್ನು ಸಂಬಂಧಿಗಳಿಗೆ, ಇನ್ನೊಂದು ಭಾಗ ಬಡವರಿಗೆ ಹಾಗೂ ಉಳಿದ ಮತ್ತೊಂದು ಭಾಗವನ್ನು ಸ್ವಂತಕ್ಕೆ ಬಳಸುವ ಮೂಲಕ ಭಕ್ತಿ ಪ್ರದರ್ಶಿ ಸಲಾಗುತ್ತದೆ. ಇದು ಸಮಾನತೆಯ ಸಂಕೇತವೂ ಹೌದು.

ಮೈಸೂರಿನ ರಾಜೀವ್‍ನಗರ, ಗೌಸಿಯಾನಗರದಲ್ಲಿರುವ ಈದ್ಗಾ ಮೈದಾನ ಗಳು ಮತ್ತು ನಗರದಾದ್ಯಂತ ಅಶೋಕ ರಸ್ತೆ, ಉದಯಗಿರಿ, ಭಾರತ್‍ನಗರ ಮತ್ತು ಇತರೆಡೆ ವಿವಿಧ ಮಸೀದಿಗಳಲ್ಲಿಯೂ ಪ್ರಾರ್ಥನೆ ಸಲ್ಲಿಸಲಾಯಿತು. ತಿಲಕ್‍ನಗರದ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಮಾಜಿ ಕಾಪೆರ್Çರೇಟರ್ ಸುಹೇಲ್ ಬೇಗ್, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಎಕ್ಬಾಲ್, ನಗರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೌಕತ್ ಅಲಿಖಾನ್, ಮಹಮ್ಮದ್ ಮುಮ್ತಾಜ್ ಅಹಮದ್, ಜಮೀಲ್ ಅಹ್ಮದ್ ಅಶ್ರಫಿ, ಮೌಲಾನಾ ಅಬ್ದುಲ್ ಸಲಾಂ ರಜ್ವಿ, ವಕ್ಫ್ ಅಧಿಕಾರಿ ಮುಷ್ತಾಕ್ ಅಹ್ಮದ್, ಶಬ್ನಮ್ ಸಯೀದ್, ಎಂ.ರಸೂಲ್ ಇನ್ನಿತರರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೆÇಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Translate »