ಅಗತ್ಯ ವಸ್ತುಗಳ ಖರೀದಿಗಾಗಿ ಮೈಸೂರಲ್ಲಿ  ಇಂದು ಲಾಕ್‍ಡೌನ್ ಸಡಿಲಿಕೆ
ಮೈಸೂರು

ಅಗತ್ಯ ವಸ್ತುಗಳ ಖರೀದಿಗಾಗಿ ಮೈಸೂರಲ್ಲಿ ಇಂದು ಲಾಕ್‍ಡೌನ್ ಸಡಿಲಿಕೆ

June 7, 2021

ಮೈಸೂರು, ಜೂ.6(ಎಂಕೆ)- ಮೈಸೂರು ಜಿಲ್ಲೆ ಯಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ನಿಯಂತ್ರಣ ಸಲುವಾಗಿ ಜಾರಿಗೊಳಿಸಿದ ಕಠಿಣ ಲಾಕ್‍ಡೌನ್ ನಿರ್ಬಂಧವನ್ನು ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲೆಂದು ಜೂನ್ 7ರ ಬೆಳಗ್ಗೆ 6ರಿಂದ 10ರವರೆಗೆ ಸಡಿಲಗೊಳಿಸಲಾಗಿದೆ.

ಹಣ್ಣು-ತರಕಾರಿ, ದಿನಸಿ ಮತ್ತಿತರೆ ಅಗತ್ಯ ವಸ್ತುಗಳನ್ನು ಖರೀದಿಸಲು ಜೂ. 7ರಿಂದ 14 ರವರೆಗೆ ವಾರದಲ್ಲಿ ಮೂರು ದಿನ (ಸೋಮ ವಾರ, ಬುಧವಾರ ಹಾಗೂ ಶುಕ್ರ ವಾರ) ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ವೇಳೆ ಜಿಲ್ಲೆಯಲ್ಲಿ ಸಾರ್ವಜನಿಕರು ಕೋವಿಡ್-19 ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸದಂತೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅವಶ್ಯಕ ವಸ್ತುಗಳಾದ ದಿನಸಿ, ಹಣ್ಣು, ತರ ಕಾರಿ ಅಂಗಡಿ ತೆರೆಯಲಷ್ಟೆ ಅನುಮತಿ ನೀಡ ಲಾಗಿದೆ. ಬೇರೆ ಅಂಗಡಿಗಳನ್ನು ತೆರೆಯಲು ಅವ ಕಾಶವಿಲ್ಲ. ಒಂದೊಮ್ಮೆ ನಿರ್ಬಂಧಿತ ಅಂಗಡಿ ಗಳನ್ನು ತೆರೆದು ವ್ಯಾಪಾರ ಮಾಡಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಅಂಗಡಿ ಮುಚ್ಚಿಸಿ, ಪರ ವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗು ವುದು. ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಓಡಾಡಬಾರದು. ದಿನಸಿ, ಹಣ್ಣು, ತರಕಾರಿ ಖರೀದಿಗೆ ದೂರದ ಅಂಗಡಿಗಳಿಗೆ ಹೋಗದೆ, ಮನೆ ಸಮೀಪದ ಅಂಗಡಿಗಳಲ್ಲಷ್ಟೇ ಖರೀದಿ ಮಾಡಬೇಕು. ನಗರ ಪೊಲೀಸರು ವಿವಿಧೆಡೆ ವಾಹನ ತಪಾಸಣೆ ನಡೆಸಲಿದ್ದು, ಅನಗತ್ಯ ಓಡಾಟ ಕಂಡುಬಂದರೆ ವಾಹನಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೋವಿಡ್-19 ಮಾರ್ಗಸೂಚಿ ಕಡ್ಡಾಯ ಪಾಲನೆ ಮಾಡಿ ಸೋಂಕು ನಿಯಂತ್ರಣದಲ್ಲಿ ನಗರ ಪೊಲೀಸರಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Translate »