ಮೈಸೂರಲ್ಲಿ `ಹಸಿರು’ ಪಟಾಕಿಯೇ ಮಾರುತ್ತಿದ್ದೇವೆ: ಪಟಾಕಿ ಮಾರಾಟಗಾರರ ಸ್ಪಷ್ಟನೆ
ಮೈಸೂರು

ಮೈಸೂರಲ್ಲಿ `ಹಸಿರು’ ಪಟಾಕಿಯೇ ಮಾರುತ್ತಿದ್ದೇವೆ: ಪಟಾಕಿ ಮಾರಾಟಗಾರರ ಸ್ಪಷ್ಟನೆ

November 13, 2020

ಮೈಸೂರು,ನ.12(ಎಂಟಿವೈ)- ಬೆಳಕಿನ ಹಬ್ಬ ದೀಪಾವಳಿಗಾಗಿ ಮೈಸೂರಲ್ಲಿ ಈ ಬಾರಿ ಸಂಪೂರ್ಣವಾಗಿ ಪರಿಸರ ಸ್ನೇಹಿ `ಹಸಿರು’ ಪಟಾಕಿಯನ್ನೇ ಮಾರಾಟ ಮಾಡುತ್ತಿರುವು ದಾಗಿ ಹೆಬ್ಬಾಳು ಕೈಗಾರಿಕಾ ಪ್ರದೇಶದ ಪಟಾಕಿ ಮಾರಾಟಗಾರರ ಸಂಘ ಸ್ಪಷ್ಟಪಡಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೆಬ್ಬಾಳು ಕೈಗಾರಿಕಾ ಪ್ರದೇಶದ ಪಟಾಕಿ ಮಾರಾಟಗಾರರ ಸಂಘದ ಪದಾಧಿಕಾರಿ ಗಳಾದ ಮಣಿಕಾಂತ, ಹರೀಶ್, ರವಿ, ಆನಂದ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೊದಲು ಪಟಾಕಿ ನಿಷೇ ಧಿಸಿ ಆದೇಶ ಹೊರಡಿಸಿತ್ತು. ಬಳಿಕ ನ.16 ವರೆಗೆ `ಹಸಿರು ಪಟಾಕಿ’ ಮಾರಾಟ ಮಾಡಲು ಅವಕಾಶ ನೀಡಿದೆ. ಆದರೆ ಜನರಲ್ಲಿ ಹಸಿರು ಪಟಾಕಿ ಬಗ್ಗೆ ಗೊಂದಲವಿದೆ. ಮಳಿಗೆಗೆ ಬಂದು ಹಸಿರು ಪಟಾಕಿ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಪಟಾಕಿ ಪೊಟ್ಟ ಣದ ಮೇಲೆ `ಹಸಿರು ಪಟಾಕಿ’ ಎಂದು ಸ್ಟಿಕ್ಕರ್ ಇರುವ ಬಗ್ಗೆ ಕೇಳುತ್ತಾರೆ. ಆದರೆ ಹೋಲ್‍ಸೇಲ್‍ನಲ್ಲಿ ತರುವ ದೊಡ್ಡ ದೊಡ್ಡ ಬಾಕ್ಸ್ ಮೇಲಷ್ಟೇ `ಹಸಿರು ಪಟಾಕಿ’ ಎಂಬ ಸ್ಟಿಕ್ಕರ್ ಇರುತ್ತದೆ. ಬಿಡಿ ಬಿಡಿಯಾಗಿ ಪಟಾಕಿ ಖರೀದಿಸುವವರಿಗೆ ಪಟಾಕಿ ಸ್ಟಿಕ್ಕರ್ ಇರುವಿಕೆ ಕಾಣುವುದಿಲ್ಲ. ಇದರಿಂದ ಕೆಲವರಲ್ಲಿ ಗೊಂದಲ ನಿರ್ಮಾಣವಾಗುತ್ತಿದೆ ಎಂದರು.

ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಪರಿಸರ ಕಾಳಜಿ ಯುಳ್ಳವರು 2017ರಲ್ಲಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದ ನ್ಯಾಯಾ ಲಯವು ಅಧ್ಯಯನ ನಡೆಸಿ ವರದಿ ನೀಡು ವಂತೆ ಆದೇಶಿಸಿತ್ತು. ಈ ಆದೇಶದ ಅನು ಸಾರ ದೆಹಲಿಯಲ್ಲಿ ಒಂದು ವರ್ಷ ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಿ, ದಿನಕ್ಕೆ ಐದು ಬಾರಿ ನಿಗದಿತ ಸಮಯದಲ್ಲಿ ವಾತಾವರಣ ದಲ್ಲಿರುವ ಗಾಳಿಯ ಸ್ಯಾಂಪಲ್ ಪಡೆದು ಪರೀಕ್ಷೆಗೊಳಪಡಿಸಲಾಗಿತ್ತು. ನಂತರ ದೀಪಾವಳಿ ಸಂದರ್ಭ ಪಟಾಕಿ ಸಿಡಿಯುವ ಸಂದರ್ಭದಲ್ಲಿ ಮತ್ತೆ ದಿನಕ್ಕೆ 5 ಬಾರಿ ಗಾಳಿ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲಾ ಯಿತು. ಎರಡೂ ಫಲಿತಾಂಶವನ್ನು ತುಲನೆ ಮಾಡಿ ನೋಡಿದಾಗ ವಾಯುಮಾಲಿನ್ಯ ದಲ್ಲಿ ಶೇ.96ರಷ್ಟು ವಾಹನಗಳ ಹೊಗೆ ಹಾಗೂ ಕಟ್ಟಡಗಳ ನಿರ್ಮಾಣದ ದೂಳಿ ನಿಂದಾಗುತ್ತದೆ. ಶೇ.4ರಷ್ಟು ಪಟಾಕಿ ಸಿಡಿತ ದಿಂದ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ಖಚಿತವಾಯಿತು. ಇದನ್ನು ಮನ ಗಂಡ ಸುಪ್ರಿಂಕೋರ್ಟ್ ಪಟಾಕಿ ನಿಷೇಧಿ ಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡುವುದರೊಂ ದಿಗೆ ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಗಾಗಿ `ಹಸಿರು’ ಪಟಾಕಿ ತಯಾರಿಕೆ ಬಗ್ಗೆ ಆದೇಶಿಸಿದೆ. ಈ ಆದೇಶದ ಅನುಸಾರ 2019ರಿಂದಲೇ ಪಟಾಕಿ ತಯಾರಿಕಾ ಸಂಸ್ಥೆಯಲ್ಲಿಯೇ ಹಸಿರು ಪಟಾಕಿ ತಯಾರಿಸಲಾಗುತ್ತಿದೆ ಎಂದರು.

ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ತಯಾರಿಸುವ ದೊಡ್ಡ ಸಂಸ್ಥೆಗಳು ತ್ವರಿತ ಗತಿಯಲ್ಲಿ ಪಟಾಕಿ ಬಾಕ್ಸ್‍ಗಳ ಮೇಲೆ ‘ಗ್ರೀನ್ ಪಟಾಕಿ’ ಎಂಬ ಲೇಬಲ್ ಅಂಟಿಸು ವುದಕ್ಕೆ ಕ್ರಮ ಕೈಗೊಳ್ಳುತ್ತವೆ. ಆದರೆ ಚಿಕ್ಕ ಚಿಕ್ಕ ಸಂಸ್ಥೆಗಳಲ್ಲಿ ತಯಾರಿಸಲಾಗುವ ಪಟಾಕಿಗಳ ದೊಡ್ಡ ಬಾಕ್ಸ್‍ಗಳ ಮೇಲಷ್ಟೇ ಹಸಿರು ಪಟಾಕಿ ಲೇಬಲ್ ಹಾಕಲಾಗು ತ್ತಿದೆ. ದೊಡ್ಡ ಪ್ಯಾಕ್‍ಗಳನ್ನು ಬಿಚ್ಚಿ ಬಿಡಿ ಬಿಡಿಯಾಗಿ ಮಾರಾಟ ಮಾಡುವಾಗ ಎಲ್ಲ ಸಣ್ಣ ಬಾಕ್ಸ್‍ಗಳ ಮೇಲೆ ಹಸಿರು ಪಟಾಕಿ ಲೇಬಲ್ ಇಲ್ಲದ ಕಾರಣ ಜನರು ಗೊಂದಲ ಕ್ಕೀಡಾಗಬಾರದು. ಮೈಸೂರಲ್ಲಿ ಯಾವುದೇ ಮಾರಾಟ ಮಳಿಗೆಗಳಲ್ಲೂ ಹಸಿರು ಪಟಾಕಿ ಹೊರತುಪಡಿಸಿ, ಸಾಮಾನ್ಯ ಪಟಾಕಿ ಮಾರಾಟಕ್ಕೆ ಇಟ್ಟಿಲ್ಲ ಎಂದು ತಿಳಿಸಿದರು.

Translate »