ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಬಡಾವಣೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ
ಮೈಸೂರು

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಬಡಾವಣೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

September 27, 2018

ಮೈಸೂರು: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಗೊರೂರು ಆಶ್ರಯ ಬಡಾ ವಣೆಯ 4 ಮತ್ತು 5ನೇ ಬ್ಲಾಕ್‍ನ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ, ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಕೃಷ್ಣರಾಜ ಕ್ಷೇತ್ರದ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಎಸ್.ಎ.ರಾಮದಾಸ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೈಸೂರು ವಿಭಾ ಗದ ಪ್ರಚಾರಕ ರಾಜೇಶ್ ಹಾಗೂ ಮೈಸೂರು ನಗರದ ಬಿಜೆಪಿ ಅಧ್ಯಕ್ಷ ಡಾ.ಬಿ.ಹೆಚ್. ಮಂಜುನಾಥ್ ಅವರು, ಸ್ವಚ್ಛತಾ ಅಭಿ ಯಾನ ಹಾಗೂ ಶುದ್ಧ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮ ದಾಸ್ ಮಾತನಾಡಿ, ಈ ಹಿಂದೆ ಗೊರೂರು ಆಶ್ರಯ ಬಡಾವಣೆಗಳಿಗೆ 2 ಬಾರಿ ಭೇಟಿ ನೀಡಿದ್ದೆ. ಈ ಬಡಾವಣೆಯಲ್ಲಿ ಒಟ್ಟು 8 ಬ್ಲಾಕ್ ಗಳಿವೆ. ಅವುಗಳಲ್ಲಿ 2,816 ಮನೆಗಳನ್ನು 7 ಬ್ಲಾಕ್‍ಗಳಲ್ಲಿ ಹಾಗೂ 826 ಮನೆಗಳನ್ನು ಮತ್ತೊಂದು ಬ್ಲಾಕ್‍ನಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಆಟೋ ಡ್ರೈವರ್‍ಗಳು, ಕೂಲಿ ಕಾರ್ಮಿಕರು ಸೇರಿದಂತೆ ಬಡತನ ರೇಖೆ ಗಿಂತ ಕಡಿಮೆ ಇರುವ ಕುಟುಂಬಗಳಿಗೆ ಮನೆಯನ್ನು ಕೇವಲ 25 ಸಾವಿರ ರೂಗೆ ವಿತರಿಸಲಾಗಿದೆ. ಆದರೆ ಈ ಮನೆಗಳನ್ನು ಕೆಲವರು 8ರಿಂದ 9 ಲಕ್ಷಕ್ಕೆ ಮಾರಿರು ವುದು ಶೋಚನೀಯ. ಈ ಬಡಾವಣೆಯಲ್ಲಿ ಅವಶ್ಯಕವಾಗಿದ್ದ ಕುಡಿಯುವ ನೀರಿನ ಸೌಲಭ್ಯ ವನ್ನು ಪಂಡಿತ್ ದೀನ್ ದಯಾಳ್ ಉಪಾ ಧ್ಯಾಯ ಅವರ ಜನ್ಮ ದಿನದಂದು 26 ಲಕ್ಷ ರೂ.ಗಳ ಯೋಜನೆಯನ್ನು ಮಂಜೂರಾತಿ ಮಾಡಲಾಗಿದೆ ಎಂದರು.

ಪ್ರಧಾನ ಮಂತ್ರಿಗಳ ಕನಸಿನ ಯೋಜನೆ ಯಾದ ಸ್ವಚ್ಛ ಭಾರತ್ ಯೋಜನೆಯಡಿ ಯಲ್ಲಿ ನಗರಪಾಲಿಕೆ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಸಹ ಏರ್ಪಡಿಸಿದ್ದು, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಸುಮಾರು 5 ವರ್ಷಗಳಿಂದ ಬೆಳೆದು ನಿಂತಿದ್ದ ಗಿಡಗಂಟೆ ಗಳನ್ನು ಗ್ಯಾಂಗ್‍ಮೆನ್‍ಗಳ ಜೊತೆ ಸೇರಿ ಕೊಂಡು ಕೀಳುವುದರೊಂದಿಗೆ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೈಸೂರು ವಿಭಾಗದ ಪ್ರಚಾರಕ ರಾಜೇಶ್,ಮೈಸೂರು ನಗರದ ಬಿಜೆಪಿ ಅಧ್ಯಕ್ಷ ಡಾ.ಬಿ.ಹೆಚ್.ಮಂಜು ನಾಥ್, ಪ್ರಧಾನ ಕಾರ್ಯದರ್ಶಿ ಮೈ.ಪು. ರಾಜೇಶ್, ಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಶಿವಕುಮಾರ್, ಎಂ.ಸಿ. ರಮೇಶ್, ಗೀತಾಶ್ರೀ ಯೋಗಾನಂದ್, ಚಂಪಕ, ಆರ್.ಶಾಂತಮ್ಮ ವಡಿವೇಲು, ಶಾರದಮ್ಮ ಈಶ್ವರ್, ಛಾಯಾದೇವಿ, ಕೆ.ಆರ್.ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ನೂರ್‍ಫಾತಿಮಾ ಸೇರಿದಂತೆ ಇನ್ನಿ ತರರು ಉಪಸ್ಥಿತರಿದ್ದರು.

Translate »