ಕ್ರಿಮಿನಲ್ ಮೊಕದ್ದಮೆ ದಾಖಲು
ಚಾಮರಾಜನಗರ

ಕ್ರಿಮಿನಲ್ ಮೊಕದ್ದಮೆ ದಾಖಲು

September 27, 2018

ಕೊಳ್ಳೇಗಾಲ:  ಮಂಗಳವಾರ ಕೊಳ್ಳೇಗಾಲ ಟಿಎಪಿಸಿಎಂಎಸ್ ಗೋದಾಮಿಗೆ ಭೇೀಟಿ ನೀಡಿದ ವೇಳೆ 2261.58 ಕ್ವಿಂಟಾಲ್ ಅಕ್ಕಿ. 234.57ಕ್ವಿಂಟಾಲ್ ಬೇಳೆ, 530 ಕ್ವಿಂಟಾಲ್ ಸಕ್ಕರೆ, 15.813 ಲೀ. ತಾಳೆ ಎಣ್ಣೆ ವ್ಯತ್ಯಾಸವಾಗಿದ್ದು, ಟಿಎಪಿಸಿಎಂಎಸ್ ಪ್ರಭಾರ ವ್ಯವಸ್ಥಾಪಕ ಸಿದ್ದರಾಜು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ರಾಚಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ವೇಳೆ ಐನೂರು ಮೂವ ತ್ತೈದು ಕ್ವಿಂಟಾಲ್ ಸಕ್ಕರೆ ಹಾಳಾಗಿರುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ಅಲ್ಲಿನ ಸಿಬ್ಬಂದಿ ಸಕ್ಕರೆ ಹಳೆಯದಾಗಿದ್ದು ಹಾಳಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಲೋಪವಾಗಿರುವುದು ಕಂಡು ಬಂದ ಹಿನ್ನೆಲೆ ಗೋದಾಮಿಗೆ ಬೀಗ ಮುದ್ರೆ ಹಾಕಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಈ ಪ್ರಕರಣದಲ್ಲಿ ಟಿಎಪಿಸಿಎಂಎಸ್‍ನ ಒಬ್ಬ ಸಿಬ್ಬಂದಿ ಹೊರತುಪಡಿಸಿ ಆಹಾರ ಇಲಾಖೆಯ ಯಾವ ಅಧಿಕಾರಿಗಳು ಭಾಗಿಯಾಗಿಲ್ಲ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ವಹಿಸಲಾಗುವುದು ಎಂದರು. ಅವ್ಯವಹಾರ ನಡೆದಿರುವ ಹಿನ್ನೆಲೆ ಟಿಎಪಿಸಿಎಂಎಸ್ ನೀಡಿರುವ
ಠೇವಣಿ ಹಣ ಮುಟ್ಟು ಗೋಲಿಗೂ ಸಹಾ ಚಿಂತಿಸಲಾಗಿದೆ ಎಂದು ರಾಚಪ್ಪ ಹೇಳಿದರು.

Translate »