ಮೈಸೂರಲ್ಲಿ ಸೆ.29, 30 ದಸರಾ ಗಾಳಿಪಟ ಉತ್ಸವ
ಮೈಸೂರು

ಮೈಸೂರಲ್ಲಿ ಸೆ.29, 30 ದಸರಾ ಗಾಳಿಪಟ ಉತ್ಸವ

September 27, 2018

ಮೈಸೂರು: ಸೆಪ್ಟೆಂಬರ್ 29 ಮತ್ತು 30ರಂದು ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ದಸರಾ ಗಾಳಿಪಟ ಉತ್ಸವವನ್ನು ಏರ್ಪಡಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೆಪ್ಟೆಂಬರ್ 29ರಂದು ಸಂಜೆ 4ರಿಂದ 7 ಗಂಟೆವರೆಗೆ ಹಾಗೂ ಸೆಪ್ಟೆಂಬರ್ 30ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಗಾಳಿಪಟ ಉತ್ಸವ ನಡೆಯಲಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು.

ನಾಡಕುಸ್ತಿ ಪಂದ್ಯಾವಳಿ: ಮೈಸೂರಿನ ದೊಡ್ಡಕೆರೆ ಮೈದಾ ನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಅ.10ರಿಂದ 15ರವರೆಗೆ ದಸರಾ ನಾಡಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಪಂದ್ಯಾವಳಿಗಾಗಿ ಸೆ.30ರಂದು ಬೆಳಿಗ್ಗೆ 10 ಗಂಟೆಗೆ ದಸರಾ ವಸ್ತು ಪ್ರದ ರ್ಶನ ಪ್ರಾಧಿಕಾರದ ಆವರಣದಲ್ಲಿರುವ ಬಿ.ವಿ.ಕಾರಂತ ರಂಗಮಂದಿರದಲ್ಲಿ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳ ಜೋಡಿ ಕಟ್ಟುವ ಕಾರ್ಯ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಕುಸ್ತಿಪಟುಗಳು ತಮ್ಮ ಇತ್ತೀಚಿನ 2 ಭಾವಚಿತ್ರ ಹಾಗೂ ಕುಸ್ತಿ ಸಮವಸ್ತ್ರದಲ್ಲಿರುವ 2 ಭಾವಚಿತ್ರಗಳನ್ನು ದಸರಾ ಕುಸ್ತಿ ಉಪ ಸಮಿತಿಯ ಗೋಕುಲಂ 4ನೇ ಹಂತ, ಕಾವೇರಿ ಭವನ ಸಂಕೀರ್ಣ ದಲ್ಲಿರುವ ಕಚೇರಿಗೆ ಹಾಜರುಪಡಿಸಬೇಕೆಂದು ಸಮಿತಿ ಕಾರ್ಯದರ್ಶಿ ಡಿ.ರವಿಕುಮಾರ್ ತಿಳಿಸಿ ದ್ದಾರೆ. ಹೆಚ್ಚಿನ ಮಾಹಿತಿಗೆ ದೂ. 0821-6554955 ಅನ್ನು ಸಂಪರ್ಕಿಸಬಹುದಾಗಿದೆ.

Translate »