ಮನೆಮನೆಯಲ್ಲಿ ಯೋಗದಲ್ಲಿ ಅಂಗವಿಕಲರೂ ಪಾಲ್ಗೊಳ್ಳುವ ಯೋಗ
ಮೈಸೂರು

ಮನೆಮನೆಯಲ್ಲಿ ಯೋಗದಲ್ಲಿ ಅಂಗವಿಕಲರೂ ಪಾಲ್ಗೊಳ್ಳುವ ಯೋಗ

September 27, 2018

ಮೈಸೂರು:  ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ 6 ದಿನಗಳ ಕಾಲ ಯೋಗ ದಸರಾವನ್ನು ಹಮ್ಮಿಕೊಂಡಿದ್ದು, ಮೈಸೂರಿನ ಮನೆ ಮನೆಯಲ್ಲಿ ಯೋಗ ದಸರಾ ಪರಿಕಲ್ಪನೆ ಯೊಂದಿಗೆ ಮೊದಲ ಬಾರಿಗೆ ಅಂಗವಿಕಲ ರಿಗೂ ಅವಕಾಶ ಕಲ್ಪಿಸಲಾಗಿದೆ.

ಮೈಸೂರಿನ ಪ್ರಮುಖ ಐದು ಯೋಗ ಸಂಸ್ಥೆಗಳಾದ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಎಸ್‍ಎಸ್ ಸಂಸ್ಥೆ, ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ ಫೌಂಡೇಷನ್ ಮತ್ತು ಬಾಬಾ ರಾಮ ದೇವ ಪತಂಜಲಿ ಯೋಗ ಸಮಿತಿಗಳ ಸಹಕಾರದೊಂದಿಗೆ ನಗರದ ಹತ್ತು ಕಡೆ ದಸರಾ ಯೋಗ ಪ್ರದರ್ಶನವನ್ನು ಆಯೋ ಜನೆ ಮಾಡಲಾಗಿದೆ ಎಂದು ಯೋಗಾ ದಸರಾ ಉಪಸಮಿತಿಯ ಉಪ ವಿಶೇಷಾಧಿ ಕಾರಿಯೂ ಆದ ಭೂ ದಾಖಲೆಗಳ ಉಪ ನಿರ್ದೇಶಕಿ ಕೆ.ರಮ್ಯಾ ತಿಳಿಸಿದರು.

ಅ.10 ರಿಂದ 16 ರವರೆಗೆ ನಡೆಯುವ ಯೋಗ ದಸರಾವನ್ನು ವಿಶೇಷವಾಗಿ ಆಚ ರಿಸುವ ದೃಷ್ಟಿಯಿಂದ ವಿವಿಧ ಯೋಜನೆ ಗಳನ್ನು ಹಾಕಿಕೊಳ್ಳಲಾಗಿದೆ. ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದ ಮೊದಲ ಬಾರಿ ಮನೆ ಮನೆಗೆ ಯೋಗ ಪರಿಕಲ್ಪನೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಯೋಗವನ್ನು ಹೇಳಿಕೊಡಲಾಗುವುದು. ಇದಕ್ಕಾಗಿ ವಿವಿಧ ಯೋಗ ಸಂಸ್ಥೆಗಳು ಕೈ ಜೋಡಿಸುತ್ತಿವೆ ಎಂದು ಹೇಳಿದರು.

ಮನೆ ಮನೆಗೆ ಯೋಗ ದಸರಾ: ಮೈಸೂ ರಿನ ಜನತೆಯಲ್ಲಿ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಮನೆ ಮನೆಗೆ ಯೋಗ ದಸರಾ ಎಂಬ ವಿಶೇಷ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರಮುಖ 10 ಉದ್ಯಾನವನಗಳಾದ ಸರಸ್ವತಿ ಪುರಂನಲ್ಲಿರುವ ಜವರೇಗೌಡ ಪಾರ್ಕ್, ಜೆ.ಪಿ.ನಗರದ ಪುಟ್ಟರಾಜು ಗವಾಯಿ ಸ್ಟೇಡಿಯಂ, ಕುವೆಂಪುನಗರದ ಸೌಗಂ ಧಿಕ, ತಪೋನÀಂದನ ಮತ್ತು ಲವಕುಶ ಪಾರ್ಕ್ ಗಳು, ಯಾದವಗಿರಿಯ ಚೆಲುವಾಂಬ ಪಾರ್ಕ್, ಗೋಕುಲಂನ 3ನೇ ಹಂತದಲ್ಲಿ ರುವ ಪಾರ್ಕ್, ವಿಜಯನಗರದ ಯೋಗಾನರ ಸಿಂಹ ಸ್ವಾಮಿ ದೇವಸ್ಥಾನ ಪಾರ್ಕ್, ವಿಜಯ ನಗರ ಪೊಲೀಸ್ ಠಾಣೆ ಸಮೀಪದ ಉದ್ಯಾ ನವನ ಮತ್ತು ವಿಜಯನಗರ 4ನೇ ಹಂತದ ಮರಿಮಲ್ಲಪ್ಪ ಶಾಲೆಯ ಸಮೀಪದಲ್ಲಿ ಅ.12ರಿಂದ 16ರವರೆಗೆ ಪ್ರತಿ ದಿನ ಬೆಳಿಗ್ಗೆ 6ರಿಂದ 7 ಗಂಟೆಯವರೆಗೆ 5 ದಿನಗಳು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮ ಕ್ಕಾಗಿ ಸ್ವಯಂ ಸೇವಕರು ಪ್ರತಿ ಮನೆ ಮನೆಗೂ ತೆರಳಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಿದ್ದಾರೆ. ಪ್ರತಿ ಸ್ಥಳದಲ್ಲಿ ಸುಮಾರು 200ರಿಂದ 300 ಮಂದಿ ಯನ್ನು ಸೇರಿಸಲು ನಿರ್ಧರಿಸಲಾಗಿದೆ.

ಯೋಗ ಚಾರಣ ಮತ್ತು ದುರ್ಗಾ ನಮ ಸ್ಕಾರ: ಅ.13ರಂದು ಬೆಳಿಗ್ಗೆ 6ರಿಂದ 8ರವ ರೆಗೆ ಸುಮಾರು 1 ಸಾವಿರ ಯೋಗ ಪಟು ಗಳಿಂದ ಚಾಮುಂಡಿ ಬೆಟ್ಟವನ್ನು ಹತ್ತುವ ಮುಖಾಂತರ ಯೋಗ ಚಾರಣ ಮಾಡ ಲಾಗುವುದು. ನಂತರ 7 ಗಂಟೆಗೆ ಬೆಟ್ಟದ ಆವರಣದಲ್ಲಿ ದುರ್ಗಾ ನಮಸ್ಕಾರ ಯೋಗ ವನ್ನು ನಾಡಿನ ಅಧಿದೇವತೆ ಚಾಮುಂಡೇ ಶ್ವರಿಗೆ ನಮನ ಸಲ್ಲಿಸಲಾಗುವುದು ಎಂದರು.
ದಸರಾ ಯೋಗೋತ್ಸವ: ಅ.14 ರಂದು ಬೆಳಿಗ್ಗೆ 7ರಿಂದ 8 ಗಂಟೆವರೆಗೆ ಅರಮನೆ ಆವರಣದಲ್ಲಿ ಸುಮಾರು 2000 ಯೋಗ ಪಟುಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರವನ್ನು ನಡೆಸಲಾಗುವುದು.

ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ: ಪ್ರತಿ ವರ್ಷದಂತೆ ಅ.14ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗೂ ದಸರಾ ವಸ್ತು ಪ್ರದ ರ್ಶನ ಆವರಣದಲ್ಲಿರುವ ಪಿ. ಕಾಳಿಂಗರಾವ್ ಸಭಾಂಗಣ ರಾಜ್ಯಮಟ್ಟದ ದಸರಾ ಯೋಗಾ ಸನ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಜತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪ ಡಿಸಲಾಗಿದೆ. ಈ ಬಾರಿ ರಾಜ್ಯದ ವಿವಿಧೆಡೆ ಯಿಂದ ಸುಮಾರು 800 ಯೋಗಪಟು ಗಳು ಭಾಗವಹಿಸಲಿದ್ದು, 16 ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರದೊಂದಿಗೆ ಪ್ರಥಮ ಸ್ಥಾನಕ್ಕೆ 2000 ರೂ. ದ್ವಿತೀಯ ಸ್ಥಾನಕ್ಕೆ 1.500 ರೂ ಮತ್ತು ತೃತೀಯ ಸ್ಥಾನಕ್ಕೆ 1000 ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

Translate »