ಪ್ರವಾಸೋದ್ಯಮ ರಾಯಭಾರಿಯಾಗಿ ಮೈಸೂರು ಸೇವೆ: ಯದುವೀರ್
ಮೈಸೂರು

ಪ್ರವಾಸೋದ್ಯಮ ರಾಯಭಾರಿಯಾಗಿ ಮೈಸೂರು ಸೇವೆ: ಯದುವೀರ್

September 27, 2018

ಮೈಸೂರು: ಪ್ರವಾಸೋದ್ಯಮ ಇಲಾಖೆಗೆ ರಾಯಭಾರಿ ಆಗಿರುವುದರಿಂದ ಮೈಸೂರು ನಗರಕ್ಕೆ ಮತ್ತಷ್ಟು ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಯುವರಾಜ ಯದುವೀರ್ ಸಂತಸಪಟ್ಟರು.

ಬುಧವಾರ ಅರಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲೇ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹಾಗಾಗಿ ದಕ್ಷಿಣ ಭಾರತವನ್ನು ಪ್ರವಾಸಿಗರ ತಾಣವಾನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು.

ಮೈಸೂರಿನ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿ ವೃದ್ಧಿಪಡಿಸಿ ಹೆಚ್ಚು ಪ್ರವಾಸಿಗರನ್ನು ಮೈಸೂರಿನತ್ತ ಸೆಳೆಯಲು ಶ್ರಮಿಸಬೇಕಾಗಿದೆ ಎಂದ ಅವರು, ನಾಡಿನ ಜನತೆಗೆ ವಿಶ್ವ ಪ್ರವಾಸೋದ್ಯಮದ ದಿನಾ ಚರಣೆಯ ಶುಭಾಶಯ ತಿಳಿಸಿದರು.

Translate »