ನಾನು ರಾಜಕೀಯಕ್ಕೆ ಬರಲ್ಲ: ಯದುವೀರ್
ಕೊಡಗು

ನಾನು ರಾಜಕೀಯಕ್ಕೆ ಬರಲ್ಲ: ಯದುವೀರ್

January 29, 2019

ಮಡಿಕೇರಿ: ರಾಜಕೀಯ ರಂಗಕ್ಕೆ ಕಾಲಿಡುವುದಿಲ್ಲ ಎಂಬ ತನ್ನ ನಿರ್ಧಾರ ಅಚಲವಾಗಿದ್ದು, ಜನಸೇವೆಗೆ ಸಾಮಾಜಿಕ ಚಟುವಟಿಕೆಗಳ ಮೂಲಕ ಮುಂದಾಗುವುದಾಗಿ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಡಿಕೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಯದುವೀರ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ಶಾ ಚುನಾವಣೆಗೆ ಮುನ್ನ ಮೈಸೂರು ರಾಜಮನೆತನದ ಮುಖಂಡರನ್ನು ಭೇಟಿಯಾಗುವೆ ಎಂಬ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯದುವೀರ್, ತಾನು ಖಂಡಿತಾ ರಾಜಕೀಯಕ್ಕೆ ಬರಲಾರೆ ಎಂದರು.

ಪ್ರಕೃತಿ ವಿಕೋಪ ಪೀಡಿತ ಕೊಡಗಿನ ಗತವೈಭವ ಮರುಕಳಿಸುವ ನಿಟ್ಟಿನಲ್ಲಿ ಮೈಸೂರು ಪ್ರಾಂತ್ಯದ ಪ್ರವಾಸೋದ್ಯಮ ರಾಯಭಾರಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಯೋಚನೆಯಿದ್ದು, ಪ್ರವಾಸೋದ್ಯಮ ಇಲಾಖೆಯೊಂದಿಗೆ ಈಗಾಗಲೇ ಮಾತುಕತೆ ನಡೆದಿದೆ ಎಂದೂ ಯದುವೀರ ಹೇಳಿದರು.

ಕೊಡಗಿನಲ್ಲಿ ಪ್ರಕೃತಿ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಿ ನಂತರ ಅಭಿವೃದ್ಧಿ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ಅಭಿವೃದ್ಧಿಯೊಂದಿಗೆ ಆರ್ಥಿಕತೆಯ ಬೆಳವಣಿಗೆಯೂ ಮುಖ್ಯವಾಗಬೇಕಾಗುತ್ತದೆ ಎಂದು ಯದುವೀರ ಅಭಿಪ್ರಾಯಪಟ್ಟರು. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗಬೇಕಾಗಿದೆ ಎಂದು ಅವರು ಹೇಳಿದರು.

Translate »