ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಸೇವೆಗೆ ಶೇ.2 ಟಿಡಿಎಸ್ ಕಟಾಯಿಸಿ ಸರ್ಕಾರಕ್ಕೆ ಕಟ್ಟಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಸೇವೆಗೆ ಶೇ.2 ಟಿಡಿಎಸ್ ಕಟಾಯಿಸಿ ಸರ್ಕಾರಕ್ಕೆ ಕಟ್ಟಲು ಅಧಿಕಾರಿಗಳಿಗೆ ಸೂಚನೆ

September 27, 2018

ಮೈಸೂರು: ವಾಣಿಜ್ಯ ತೆರಿಗೆ ಇಲಾಖೆ, ವಿಭಾಗೀಯ ಸರಕು ಮತ್ತು ಸೇವಾ ಕಚೇರಿ ಹಾಗೂ ಜಿಲ್ಲಾ ಖಜಾನೆ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸರಕು ಮತ್ತು ಸೇವಾ ಕಾಯ್ದೆ 2017ರಡಿ ಬಟವಾಡೆ ಅಧಿಕಾರಿಗಳು ತೆರಿಗೆ (ಟಿಡಿಎಸ್) (TDS- Tax deducted at source) ಕಟಾಯಿಸುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿ ಗಳಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು.

ಸಿಪಿಡಬ್ಲ್ಯೂಡಿ, ಪಿಡಬ್ಲ್ಯೂಡಿ, ಶಿಕ್ಷಣ, ಜಿಲ್ಲಾ ಪಂಚಾ ಯತ್, ಮುಡಾ, ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತರಬೇತಿ ಯಲ್ಲಿ ಪಾಲ್ಗೊಂಡಿದ್ದರು. ಜಿಎಸ್‍ಟಿ ಹೊಸ ಕಾಯ್ದೆ ಟಿಡಿಎಸ್ ಮಾಡಿರುವ ಬಗ್ಗೆ ಬಟವಾಡೆ ಅಧಿಕಾರಿಗಳಿಗೆ ತರಬೇತಿ ಆಯೋಜಿಸಲು ವಾಣಿಜ್ಯ ತೆರಿಗೆ ಆಯುಕ್ತರು ಅತೀ ಹೆಚ್ಚು ಉತ್ಸುಕತೆಯಿಂದ ಸೂಚಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಾ ಗಾರ ನಡೆಸಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಯಿತು.

ಟಿಡಿಎಸ್ ಎಂಬುದು ಜಿಎಸ್‍ಟಿ ಕಾನೂನಿನ ಅಡಿಯಲ್ಲಿ ಬರುತ್ತದೆ. ಇದು ಹಳೇ ಕಾಯ್ದೆ. ಆದರೆ ಅದಕ್ಕೆ ಹೊಸ ರೂಪ ಕೊಡಲಾಗಿದೆ ಅಷ್ಟೆ. ಕೇಂದ್ರದಿಂದ ಕಟ್ಟುನಿಟ್ಟಿನ ಆದೇಶ ವಿದ್ದು, ಟಿಡಿಎಸ್ ಮಾಡದಿದ್ದರೆ ಅಧಿಕಾರಿಗಳು ದಂಡಕ್ಕೆ ಒಳ ಪಡುತ್ತಾರೆ. ಗುತ್ತಿಗೆ ಅಥವಾ ಯಾವುದೇ ಸೇವೆಯಾಗಿದ್ದರೂ ಅದು ರೂ.2.5 ಲಕ್ಷಕ್ಕಿಂತ ಹೆಚ್ಚಿನದಾಗಿದ್ದರೆ, ಅದಕ್ಕೆ ಎಸ್‍ಜಿ ಎಸ್‍ಟಿ ಶೇ.1 ಮತ್ತು ಸಿಜಿಎಸ್‍ಟಿ ಶೇ.1ರಷ್ಟು ಸೇರಿ ಒಟ್ಟು ಶೇ.2ರಷ್ಟು ಕಟಾಯಿಸಿ, ನಿಗದಿತ ಅವಧಿಯೊಳಗೆ ಅದನ್ನು ಸರ್ಕಾರಕ್ಕೆ ಕಟ್ಟಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ದುಗುಡ ಬಿಟ್ಟು ಟಿಡಿಎಸ್ ಕಟ್ಟಬೇಕು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಟಿಡಿಎಸ್ ಅಧಿಕಾರಿಗಳ ನೋಂದಣಿ ಮತ್ತು ಪಾವತಿ ವಿಧಾನ ಕುರಿತು ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಎಂ.ಡಿ.ಸುಮಾ, ಸಹಾಯಕ ಆಯುಕ್ತರಾದ ಎನ್.ದೀಪಾ, ಪ್ರತಿಭಾ, ಖಜಾನೆ ವಿಭಾಗದ ಮಹೇಶ್ ಅವರು ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಸುರಗಿಮಠ್, ಗುಂಡೂರಾವ್, ಡಾ.ಎಲ್. ಸತೀಶ್‍ಕುಮಾರ್, ಖಜಾನೆ ವಿಭಾಗದ ಮಹೇಶ್ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಸಹಾಯಕ ಆಯುಕ್ತ ಕೆ.ಎನ್. ಚಂದ್ರಶೇಖರಪ್ಪ, ಸಹಾಯಕ ಆಯುಕ್ತರಾದ ಶ್ರುತಿ ಚೇತನ್, ಬಾಲಸುಬ್ರಹ್ಮಣ್ಯ, ಎನ್.ವೈ.ಪ್ರಭುದೇವ್ ಇನ್ನಿತರರಿದ್ದರು.

Translate »