ಪಂಜಿನ ಕವಾಯತು ಮೈದಾನದಲ್ಲಿ ಸಿದ್ಧತೆ
ಮೈಸೂರು

ಪಂಜಿನ ಕವಾಯತು ಮೈದಾನದಲ್ಲಿ ಸಿದ್ಧತೆ

September 27, 2018

ಮೈಸೂರು: ಮುಂದಿನ ತಿಂಗಳು ನಡೆಯುವ ದಸರಾ ಮಹೋತ್ಸವದ ಪಂಜಿನ ಕವಾಯಿತು ಸಿದ್ಧತೆಗೆ ಬೇಕಾದ ನವೀಕರಣ ಕಾಮಗಾರಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿ ಯಿಂದ ಆರಂಭಿಸಲಾಗಿದೆ ಎಂದು ಆಯುಕ್ತ ಪಿ.ಎಸ್. ಕಾಂತರಾಜು ತಿಳಿಸಿದರು.

`ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಆಯುಕ್ತರು, ಪಂಜಿನ ಕವಾಯಿತು ಮೈದಾನದಲ್ಲಿ 1ರಿಂದ 12 ಗೇಟಿನವರೆಗೂ ಮರದ ಸಹಾಯದಿಂದ ವಿವಿಧ ರೀತಿಯ ಪಾಸ್‍ವುಳ್ಳವರಿಗೆ ಆಸನ ವ್ಯವಸ್ಥೆ ಕಲ್ಪಿಸಬೇಕಾ ಗಿತ್ತು. ಈ ಸಮಸ್ಯೆಯನ್ನು ಬಹುತೇಕ ನಿವಾ ರಿಸಲು ಕಬ್ಬಿಣದ ಬಾರಿಕೇಡ್‍ಗಳನ್ನು ಅಳವ ಡಿಸಲಾಗುತ್ತಿದೆ ಎಂದರು. ಅಲ್ಲದೆ, ಪಂಜಿನ ಕವಾಯಿತು ಕಾರ್ಯಕ್ರಮ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತಿದ್ದ ವಿದ್ಯುತ್ ಘಟಕಕ್ಕೆ ತೆರೆ ಎಳೆದಿದ್ದು, ಇದಕ್ಕಾಗಿ ಪ್ರತ್ಯೇಕ ಕೊಠಡಿಯನ್ನೇ ನಿರ್ಮಾಣ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವ ವೀಕ್ಷಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಇ-ಶೌಚಾಲಯ ನಿರ್ಮಾಣ, ಭದ್ರತಾ ವ್ಯವಸ್ಥೆ, ವಿದ್ಯುತ್ ನಿರ್ವಹಣೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸ ಲಾಗುತ್ತಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಕೆಲ ಸಲಹೆ ಸೂಚನೆಗಳ ಮೇರೆಗೆ ನವೀಕರಣ ಕಾಮಗಾರಿ ನಡೆಯು ತ್ತಿದೆ. ಈ ಕಾಮಗಾರಿಗೆ ಅಂದಾಜು 27ರಿಂದ 42 ಲಕ್ಷದ ವರೆಗೆ ವೆಚ್ಚವಾಗುತ್ತಿದೆ ಎಂದು ಮಾಹಿತಿ ನೀಡಿದರು.

Translate »