ಲೋಕಸಭಾ ಚುನಾವಣೆಗೆ ಸಜ್ಜಾಗಿ
ಮೈಸೂರು

ಲೋಕಸಭಾ ಚುನಾವಣೆಗೆ ಸಜ್ಜಾಗಿ

September 27, 2018

ಮೈಸೂರು:  ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಈಗಿನಿಂದಲೇ ಸಜ್ಜಾಗುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಬಿಎಸ್‍ಪಿ ಕಾರ್ಯಕರ್ತರಿಗೆ ಇಂದಿಲ್ಲಿ ಕರೆ ನೀಡಿದರು.

ಮೈಸೂರಿನ ವಿನೋಬ ರಸ್ತೆಯಲ್ಲಿ ಬಹುಜನ ಸಮಾಜ ಪಕ್ಷದ ಮೈಸೂರು ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ ರಾಜ್ಯಗಳ ರಾಜಕೀಯವನ್ನು ಗಮನಿಸಿದರೆ ನಾವೂ ಕೂಡ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕಿದೆ ಎಂದರು. ಚಾಮ ರಾಜನಗರ ಮತ್ತು ಮೈಸೂರು ಇವೆರಡೂ ನಮ್ಮ ಪಕ್ಷದ ಆಧಾರ ಸ್ತಂಭಗಳು. ಇದಕ್ಕಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನಿಸಿದ್ದು, ಸದ್ಯದಲ್ಲೇ ಅದರ ದಿನಾಂಕ ತಿಳಿಸಲಾಗುವುದು ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿ ಆಗಿತ್ತು. ಆದರೆ ಪಾಲಿಕೆ ಚುನಾವಣೆಯಲ್ಲಿ ಮೈತ್ರಿ ಇಲ್ಲದೆ ಎದುರಿಸಿ ಗೆಲುವು ಸಾಧಿಸಿದ್ದೇವೆ. ಇದೇ ಉತ್ಸಾಹವನ್ನು ಮುಂದಿಟ್ಟು ಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಲು ಸಿದ್ಧರಾಗೋಣ ಎಂದು ಹೇಳುವ ಮೂಲಕ ಕಾರ್ಯ ಕರ್ತರನ್ನು ಹುರಿದುಂಬಿಸಿದರು.

ಸಭೆಯಲ್ಲಿ ಮಹಾನಗರಪಾಲಿಕೆಗೆ ನೂತನವಾಗಿ ಚುನಾ ಯಿತರಾಗಿರುವ ಬಿಎಸ್‍ಪಿಯ ಪಲ್ಲವಿ ಉ.ಬೇಗಂ, ಪ್ರೊ.ಪಿ.ವಿ. ನಂಜರಾಜ ಅರಸ್, ಬಿಎಸ್‍ಪಿ ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ವಿಭಾಗೀಯ ಉಸ್ತುವಾರಿಗಳಾದ ಭೀಮನಹಳ್ಳಿ ಸೋಮೇಶ್, ರಾಹುಲ್, ಮೈಸೂರು ನಗರಾಧ್ಯಕ್ಷ ಬಸವರಾಜು, ಜಿಲ್ಲಾ ಕಾರ್ಯದರ್ಶಿ ಪ್ರಭುಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ಮಣ್ಣೆರಚುವವರಿಗೆ ಕಣ್ಣು ಮುಚ್ಚಿಕೊಂಡು ಕೈ ಮುಗಿಯಿರಿ
ಮಣ್ಣೆರಚುವವರಿಗೆ ಕಣ್ಣು ಮುಚ್ಚಿಕೊಂಡು ಕೈ ಮುಗಿಯಿರಿ. ತಾವು ಆಡಿದ `ಕಾಂಗ್ರೆಸ್ ಗಿಡ’ ಹೇಳಿಕೆ ಕುರಿತು ಸಚಿವ ಸಿ.ಪುಟ್ಟರಂಗಶೆಟ್ಟಿಯವರ ಹೇಳಿಕೆಗೆ ಕಾರ್ಯಕರ್ತರಿಗೆ ಸಮಾಧಾನದ ಪ್ರತಿಕ್ರಿಯೆ ನೀಡಿದವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್.

ಮೈಸೂರಿನ ವಿನೋಬ ರಸ್ತೆಯಲ್ಲಿ ಬಿಎಸ್‍ಪಿ ಮೈಸೂರು ಜಿಲ್ಲಾ ಕಚೇರಿಯನ್ನು ಉದ್ಘಾ ಟಿಸಿ, ಬಳಿಕ ಮಾತನಾಡಿದ ಅವರು, ಕೊಳ್ಳೇಗಾಲದ ಕಾರ್ಯಕ್ರಮವೊಂದರಲ್ಲಿ ತಾವು ಯಾವುದೇ ಕಲ್ಪನೆ ಇಲ್ಲದೆ ಆಡಿದ ಹೇಳಿಕೆ ಯೊಂದು ಇಷ್ಟೊಂದು ದೊಡ್ಡ ಅನಗತ್ಯ ಚರ್ಚೆಗೆ ಗ್ರಾಸವಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಹೇಳಿರುವ `ಕಾಂಗ್ರೆಸ್ ಗಿಡ’ ಎಂಬ ಹೇಳಿಕೆ ಬಗ್ಗೆ ಚಾಮರಾಜನಗರ ಜಿಲ್ಲಾ ಉಸ್ತು ವಾರಿ ಸಚಿವ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಅನ ಗತ್ಯವಾಗಿ ದೊಡ್ಡದು ಮಾಡಿದ್ದಾರೆ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಅವರಿಗೆ ಏಕವಚನ, ಬಹುವಚನದ ಅರ್ಥ ಗೊತ್ತಿಲ್ಲದೇ ಮಾತನಾಡಿರಬಹುದು. ಸಹೋದ್ಯೋಗಿ ಯನ್ನು ಏಕವಚನದಲ್ಲಿ ಮಾತನಾಡಿರಬಹುದೆಂದು ನನ್ನ ಅನಿಸಿಕೆ. ಈ ಬಗ್ಗೆ ಕಾರ್ಯಕರ್ತರಿಗೆ ಬೇಸರವೂ ಬೇಡ, ಪ್ರತಿಕ್ರಿಯೆಯೂ ಬೇಡ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮಂತ್ರಿ ಸ್ಥಾನ ತೆಗೆಯಲು ಸಿಎಂನಿಂದ ಮಾತ್ರ ಸಾಧ್ಯ: ಕಾಂಗ್ರೆಸ್, ಜೆಡಿಎಸ್, ಬಿಎಸ್‍ಪಿ ಸಮ್ಮಿಶ್ರ ಸರ್ಕಾರ ನಮ್ಮದು. ಜೆಡಿಎಸ್ ಜೊತೆಗೆ ಬಿಎಸ್‍ಪಿ ಸ್ಪರ್ಧೆ ಮಾಡಿದ್ದೆವು. ನಾನು ಮಂತ್ರಿಯಾಗಲು ಕೊಳ್ಳೇಗಾಲದ ಜನತೆ ಕಾರಣ. ಮಂತ್ರಿ ಮಾಡುವುದು ಸಿಎಂಗೆ ಸೇರಿದ ವಿಚಾರ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಆಶೀರ್ವಾದದಿಂದ ಸಚಿವನಾಗಿದ್ದೇನೆ. ನನ್ನನ್ನು ತೆಗೆಯಲು ಮುಖ್ಯಮಂತ್ರಿಯಿಂದ ಮಾತ್ರ ಸಾಧ್ಯವೇ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮಹೇಶ್ ಪ್ರತಿಕ್ರಿಯಿಸಿದರು.

ಕೊಳ್ಳೇಗಾಲದಲ್ಲಿ ನಡೆದ ಘಟನೆಯನ್ನು ವಿವರಿಸಿದ ಅವರು, ಸೆ.21ರಂದು ಕೊಳ್ಳೇಗಾಲದ ಮಂಜುನಾಥನಗರ ವಾರ್ಡ್‍ನಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಶಾಲೆ ತುಂಬಾ ಪಾರ್ಥೇನಿಯಂ ಗಿಡಗಳು ಬೆಳೆದಿದ್ದವು. ಸಹಜವಾಗಿ ಎಲ್ಲರೂ ಹೇಳು ವಂತೆ ಪಾರ್ಥೇನಿಯಂ ಗಿಡವನ್ನು `ಕಾಂಗ್ರೆಸ್ ಗಿಡ’ ಎಂದಿದ್ದು ನಿಜ. ಅದನ್ನು ಕಡಿ ಯುವ ಕೆಲಸ ಮಾಡಿದೆವು. ಆದರೆ ಹಾಗೇ ಹೇಳುವಾಗ ನನ್ನ ತಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಲ್ಪನೆಯೇ ಬಂದಿಲ್ಲ. ಹಾಗೇ ಉದ್ದೇಶಪೂರ್ವಕವಾಗಿಯೂ ಹೇಳಿದ್ದಲ್ಲ. ಆದರೆ ಇದನ್ನು ಮಾಧ್ಯಮಗಳು ತಪ್ಪಾಗಿ ಬಿಂಬಿಸಿದವು. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಷಯ ಅನಗತ್ಯ ಚರ್ಚೆಗೆ ಕಾರಣವಾಯಿತು ಎಂದರು. ಈ ವಿಚಾರದಲ್ಲಿ ನಮ್ಮ ಪಕ್ಷದ (ಬಿಎಸ್‍ಪಿ) ಕಾರ್ಯಕರ್ತರ ತಾಳ್ಮೆ ನಿಜಕ್ಕೂ ಅಭಿನಂದನೀಯ. ಇದೇ ತಾಳ್ಮೆ ಮುಂದೆಯೂ ಇರಲಿ. ಮಣ್ಣೆರಚುವವರಿಗೆ ಕಣ್ಣು ಮುಚ್ಚಿಕೊಂಡು ಕೈ ಮುಗಿಯಿರಿ ಎಂದು ಕಾರ್ಯಕರ್ತರಿಗೆ ಸಚಿವ ಎನ್.ಮಹೇಶ್ ತಿಳಿಸಿದರು.

ನನಗೆ ಪುಟ್ಟರಂಗಶೆಟ್ಟರ ಬಗ್ಗೆ ಗೌರವವಿದೆ: ನನಗೆ ಸಚಿವ ಪುಟ್ಟರಂಗಶೆಟ್ಟರ ಬಗ್ಗೆ ಗೌರವವಿದೆ. ನಾನೇನು ತಪ್ಪು ಮಾಡಿಲ್ಲ. ಇದನ್ನು ಇನ್ನಷ್ಟು ಎಳೆಯಲು ಹೋಗುವುದೂ ಇಲ್ಲ. ನಾನಿಲ್ಲಿ ಪ್ರತಿಕ್ರಿಯೆ ನೀಡುವಾಗಲೂ ಯಾವುದೇ ನೆಗೆಟಿವ್ ಮಾತನಾಡಿಲ್ಲ ಎಂದು ಸಚಿವ ಎನ್.ಮಹೇಶ್ ತಿಳಿಸಿದರು.

Translate »