ಹಾಲಿ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಅನುಕೂಲ ಆಗಲ್ಲ
ಮೈಸೂರು

ಹಾಲಿ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಅನುಕೂಲ ಆಗಲ್ಲ

October 9, 2022

ಮೈಸೂರು, ಅ. ೮(ಆರ್‌ಕೆ)-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದರಿಂದ ಯಾವ ಪಕ್ಷಕ್ಕೂ ಚುನಾವಣೆಯಲ್ಲಿ ಅನುಕೂಲ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿ ದ್ದಾರೆ. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದ ಅವರು, ಹಲವು ವರ್ಷಗಳ ಕಾಲ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿ ದ್ದವು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮೀಸ ಲಾತಿ ದೊರಕಿಸಿಕೊಟ್ಟಿದ್ದರಿಂದಾಗಿ ಎಂಎಲ್‌ಎ, ಎಂಪಿಗಳು ಮೀಸಲಾತಿ ಅವಕಾಶ ಪಡೆದು ವಿಧಾನಸಭೆ, ಲೋಕಸಭೆಗೆ ಪ್ರವೇಶ ಮಾಡಿದರು. ಆದರೆ ದೇವೇಗೌಡರನ್ನು ನೆನಪಿಸಿ ಕೊಳ್ಳುತ್ತಿಲ್ಲ ಎಂದರು. ರಾಜಕೀಯ ಲಾಭಕ್ಕಾಗಿ ಬಿಜೆಪಿ ಮೀಸಲಾತಿ ಹೆಚ್ಚಳಕ್ಕೆ ಕೈ ಹಾಕಿದೆ. ಅದು ಜೇನುಗೂಡಿಗೆ ಕೈ ಹಾಕಿದಂತೆ. ಅದರಿಂದ ಯಾವ ಪಕ್ಷಕ್ಕೂ ಅನುಕೂಲ ವಾಗುವುದಿಲ್ಲ ಎಂದ ಅವರು, ಸರ್ಕಾರವು ಸಾಧಕ-ಬಾಧಕಗಳನ್ನು ಅವಲೋಕಿಸಿ ಅನುಷ್ಠಾನಗೊಳಿಸಬೇಕು ಎಂದರು. ಮೀಸಲಾತಿ ಹೆಚ್ಚಳವಷ್ಟೇ ಅಲ್ಲ, ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆಯಿಂದಲೂ ನಮಗೆ ಎಫೆಕ್ಟ್ ಆಗುವುದಿಲ್ಲ. ಜೆಡಿಎಸ್ ಶಕ್ತಿ ಏನೆಂಬುದನ್ನು ಮುಂಬರುವ ಚುನಾ ವಣೆಯಲ್ಲಿ ತೋರಿಸುತ್ತೇವೆ. ಪಂಚರತ್ನ ಯೋಜನೆ ಮೂಲಕ ನಾಡಿನ ರೈತರು, ಬಡವರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರನ್ನು ಆರ್ಥಿಕ ಸಬಲರನ್ನಾಗಿ ಮಾಡುವ ಗುರಿ ನಮ್ಮದು ಎಂದು ಕುಮಾರಸ್ವಾಮಿ ನುಡಿದರು.

ಎಂಪಿ ಮಾಡಿದ್ದು ರೈಲು ಹೆಸರು ಬದಲಾವಣೆಗಲ್ಲ: ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಹೆಸರು ನಾಮಕರಣ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹರನ್ನು ಎಂಪಿ ಮಾಡಿರುವುದು ರೈಲುಗಳ ಹೆಸರು ಬದಲಾವಣೆ ಮಾಡಲು ಅಲ್ಲ, ಹಲವು ಜ್ವಲಂತ ಸಮಸ್ಯೆ ಗಳಿವೆ. ಪ್ರವಾಹ ಪೀಡಿತರು, ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ನೀಡಲಿ. ಇದ್ಯಾವುದೋ ರೈಲಿನ ಹೆಸರು ಬದಲಿಸಿರುವುದೇ ಸಾಧನೆಯಲ್ಲ ಎಂದು ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು. ಗುಬ್ಬಿ ಶಾಸಕ ಶ್ರೀನಿವಾಸ ಅವರು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಸಾಥ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ನಮ್ಮ ಪಕ್ಷದಲ್ಲೇ ಇಲ್ಲ. ಯಾರು ಯಾರಿಗೆ ಸಾಥ್ ನೀಡಿದರೂ ಜಾತ್ಯಾತೀತ ಜನತಾ ದಳಕ್ಕೆ ಹಿನ್ನಡೆಯಾಗುವುದಿಲ್ಲ. ಸಹಸ್ರಾರು ಕಾರ್ಯಕರ್ತರು ಪಕ್ಷಕ್ಕೆ ಸಾಥ್ ನೀಡುತ್ತಾರೆ ಎಂದು ನುಡಿದರು.

 

ಜೆಡಿಎಸ್‌ಗೆ ಜನರೇ ಶಕ್ತಿ ಕೊಡಬೇಕು

ಬೆಂಗಳೂರು: ಜೆಡಿಎಸ್ ಪಕ್ಷ ಉಳಿಸಲು ಜನರು ಶಕ್ತಿ ಕೊಡಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಬಸವನ ಗುಡಿ ಮೈದಾನದಲ್ಲಿಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾ ಡಿದ ಅವರು, ನನಗೆ ಇನ್ನು ಹೋರಾಟ ಮಾಡುವ ಶಕ್ತಿ ಇದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ, ಎಲ್ಲರೂ ಸೇರಿ ಪಕ್ಷ ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಜನರು ಪಕ್ಷಕ್ಕೆ ಶಕ್ತಿ ನೀಡಿ ಎಂದು ಪುನರುಚ್ಛರಿಸಿದರು. ಮುಂಬರುವ ಕಾರ್ಯಕಾರಿಣಿ ಸಭೆಯಲ್ಲೂ ಭಾಗಿಯಾಗ್ತೀನಿ. ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ, ಜೊತೆಗೆ ಹೇಳಿದ ಮೇಲೆ ನಾವು ಕಾರ್ಯಗತ ಮಾಡಲೇಬೇಕು, ಮುಸ್ಲಿಂರಿಗೆ
ಮೀಸಲಾತಿ ಅಂತ ಎಂದೂ ಹೇಳಿರಲಿಲ್ಲ. ಆದರೂ ನಮ್ಮ ಸರ್ಕಾರದಲ್ಲಿ ಮಾಡಿದೆ ಎಂದು ಹೇಳಿದರು. ನನ್ನ ಕಣ್ಣ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರೋದು ಸತ್ಯ. ಮತ್ತೆ ಕುಮಾರಸ್ವಾಮಿ ಸಿಎಂ ಆಗುತ್ತಾರೆ, ಇದು ನಡೆದೆ ನಡೆಯುತ್ತದೆ ಯಾರಿಗೂ ಸಂಶಯ ಬೇಡ. ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ, ಕೊನೆಯವರೆಗೂ ರಾಜ್ಯದ ನೆಲ ಜಲದ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ನಾನು ಸಿಎಂ ಆಗುವಾಗಲು ಹೋರಾಟ ಆಯ್ತು, ನಾನು ೯೦ರ ದಶಕದಲ್ಲಿ ಏಕಾಂಗಿ ಯಾಗಿ ಹೋರಾಟ ಮಾಡಿದೆ. ನಾನು ಸಿಎಂ ಆಗಿದ್ದಾಗ ರಾಜ್ಯದಲ್ಲಿ ೧೬ ಲೋಕಸಭಾ ಸ್ಥಾನ ಬಂತು. ಆಗ ಕೆಲವರು ಕುಮಾರಸ್ವಾಮಿ ಅವರನ್ನು ಹಠ ಮಾಡಿ ನೀವು ಲೋಕಸಭೆಗೆ ಹೋಗಿ ಅಂದ್ರು ಆಗ ಗೆದ್ದು ಬಂದರು ಎಂದು ವಿವರಿಸಿದರು.

Translate »