ಸೌದಿ ಅರೇಬಿಯಾ ಪಠ್ಯದಲ್ಲಿ ರಾಮಾಯಣ, ಮಹಾಭಾರತ ವಿದೇಶಿ ವಿದ್ಯಾರ್ಥಿಗಳಿಂದಲೂ ಭಾರತೀಯ ಸಂಸ್ಕೃತಿ ಅಧ್ಯಯನ
ಮೈಸೂರು

ಸೌದಿ ಅರೇಬಿಯಾ ಪಠ್ಯದಲ್ಲಿ ರಾಮಾಯಣ, ಮಹಾಭಾರತ ವಿದೇಶಿ ವಿದ್ಯಾರ್ಥಿಗಳಿಂದಲೂ ಭಾರತೀಯ ಸಂಸ್ಕೃತಿ ಅಧ್ಯಯನ

April 24, 2021

ರಿಯಾದ್: ಸೌದಿ ಅರೇಬಿಯಾದ ಶಿಕ್ಷಣ ಕ್ಷೇತ್ರದಲ್ಲಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮಹತ್ವದ ಬದಲಾವಣೆಯನ್ನು ತಂದಿ ದ್ದಾರೆ. ವಿಷನ್ 2030 ಅಡಿ ಯಲ್ಲಿ ಪ್ರಿನ್ಸ್ ಮೊಹಮ್ಮದ್, ಸೌದಿ ರಾಷ್ಟ್ರದ ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಜ್ಞಾನ ತುಂಬಲು ಮುಂದಾಗಿದ್ದಾರೆ.

ಈ ಪ್ರಯೋಗದ ಭಾಗ ವಾಗಿ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನೂ ಅಭ್ಯಸಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಇರುವ ಜ್ಞಾನವನ್ನು ಹೆಚ್ಚಿಸಲು ಹಾಗೂ ಭಾರತೀಯ ಸಂಸ್ಕೃತಿ ಗಳಾದ ಯೋಗ ಹಾಗೂ ಆಯುರ್ವೇದದ ಬಗ್ಗೆಯೂ ಗಮನ ನೀಡಲಾಗಿದೆ.

ಸೌದಿ ಅರೇಬಿಯಾ ಪಠ್ಯಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನು ಸೇರಿಸುವುದರ ಜೊತೆಗೆ ವಿಷನ್ 2030 ಭಾಗವಾಗಿ ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ಇದೆ. ಪಠ್ಯಕ್ರಮದ ವಿಚಾರದ ಕುರಿತಾಗಿ ಟ್ವಿಟರ್‍ನಲ್ಲಿ ನೌಫ್ ಅಲ್ ಮರ್ವಾಲ್ ಎಂಬುವರು ಹೊಸ ಪಠ್ಯಕ್ರಮದ ಮಾಹಿತಿಯನ್ನು ಶೇರ್ ಮಾಡಿದ್ದಾರೆ.

ಸೌದಿ ಅರೇಬಿಯಾ ನ್ಯೂ ವಿಷನ್ 2030 ಅಡಿಯಲ್ಲಿ ಹೊಸ ಪಠ್ಯಕ್ರಮಗಳು ಅಂತರ್ಗತ, ಉದಾರ ಹಾಗೂ ಸಂಸ್ಕೃತಿ ಬಗ್ಗೆ ಜ್ಞಾನವುಳ್ಳ ವಿದ್ಯಾರ್ಥಿಗಳನ್ನು ನಿರ್ಮಿಸು ತ್ತದೆ. ಈ ಟ್ವಿಟರ್ ಬಳಕೆದಾರ ತಮ್ಮ ಪುತ್ರನ ಹೊಸ ಪಠ್ಯ ಕ್ರಮದ ಫೆÇೀಟೋಗಳನ್ನು ಶೇರ್ ಮಾಡಿದ್ದಾರೆ. ಇದು ನನ್ನ ಪುತ್ರನ ಇಂದಿನ ಪರೀಕ್ಷಾ ವಿಷಯದ ಸ್ಕ್ರೀನ್ ಶಾಟ್ ಆಗಿದೆ, ಸಮಾಜ ಅಧ್ಯಯನದ ಈ ಪುಸ್ತಕದಲ್ಲಿ ಹಿಂದೂ, ಬೌದ್ಧ, ರಾಮಾಯಣ, ಕರ್ಮ, ಮಹಾಭಾರತ ಹಾಗೂ ಧರ್ಮಕ್ಕೆ ಸಂಬಂಧಿಸಿದ ಪಠ್ಯ ಕ್ರಮವಿದೆ. ಆತನ ಓದಿಗೆ ಸಹಾಯ ಮಾಡಲು ಖುಷಿಯಾಗುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ.

ಮೈಸೂರಿನ ಮುನೇಶ್ವರನಗರದಲ್ಲಿರುವ ಬಸವ ಜ್ಞಾನ ಪೀಠದ ಮಾತೆ ಬಸವಾಂಜಲಿ ಅವರು ಲಿಂಗಾಯತ ಗೌಡ ಸಮುದಾಯದ ಸದಸ್ಯತ್ವ ಪಡೆದು, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಹಾಸಭಾ ಅಧ್ಯಕ್ಷರಾದ ಆಲನಹಳ್ಳಿ ಪುಟ್ಟಸ್ವಾಮಿ, ರಾಜ್ಯ
ಕಾರ್ಯದರ್ಶಿ ಕೇಬಲ್ ಮಹೇಶ್, ಇನ್ನಿತರ ಮುಖಂಡರು ಹಾಜರಿದ್ದರು.

Translate »