ಎಂಆರ್‍ಸಿಯಲ್ಲಿ ಅಳವಡಿಸಿರುವ  ಆಟೋಮ್ಯಾಟಿಕ್ ಗೇಟ್‍ಗಳ ಉದ್ಘಾಟನೆ
ಮೈಸೂರು

ಎಂಆರ್‍ಸಿಯಲ್ಲಿ ಅಳವಡಿಸಿರುವ ಆಟೋಮ್ಯಾಟಿಕ್ ಗೇಟ್‍ಗಳ ಉದ್ಘಾಟನೆ

December 18, 2018

ಮೈಸೂರು: ಇದೇ ಮೊದಲ ಬಾರಿಗೆ ಮೈಸೂರು ರೇಸ್ ಕ್ಲಬ್ (ಎಂಆರ್‍ಸಿ) ಆವರಣದಲ್ಲಿ ಅಳವಡಿಸಿ ರುವ ಏಳು ಆಟೋಮ್ಯಾಟಿಕ್ ಗೇಟ್ ಗಳನ್ನು `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಇಂದು ಉದ್ಘಾಟಿಸಿದರು.

ಭದ್ರತಾ ದೃಷ್ಟಿ ಹಾಗೂ ಸಾರ್ವಜನಿಕರ ಪ್ರವೇಶ ನಿರ್ವಹಣೆ ಉದ್ದೇಶದಿಂದ ಸುಮಾರು 100 ವರ್ಷಗಳ ಇತಿಹಾಸವಿರುವ ಎಂಆರ್‍ಸಿಯಲ್ಲಿ ಇದೇ ಪ್ರಥಮ ಬಾರಿ ಈ ಕ್ರಮ ಕೈಗೊಂಡಿದ್ದು, ತಂತ್ರಜ್ಞಾನ ಬಳಸಿ ಅಳವಡಿಸಿರುವ ಅತ್ಯಾಧುನಿಕ ಗೇಟ್‍ಗಳ ಮೂಲಕ ಅನಧಿಕೃತ ವ್ಯಕ್ತಿಗಳು ನುಸುಳುವುದನ್ನು ತಡೆಯಬಹುದಾಗಿದೆ.

ಸಾರ್ವಜನಿಕರು ಪ್ರವೇಶಿಸುವ ಮುಖ್ಯ ದ್ವಾರದಲ್ಲಿ 3, ಗ್ರ್ಯಾಂಡ್‍ಸ್ಟ್ಯಾಂಡ್ ಬಳಿ 2, ಸ್ಟೇಬಲ್ ಎಂಟ್ರಿ ಮತ್ತು ಕಾರು ನಿಲು ಗಡೆ ಸ್ಥಳದಲ್ಲಿ ತಲಾ ಒಂದೊಂದು ಗಣಕೀ ಕೃತ ಆಟೋಮ್ಯಾಟಿಕ್ ಗೇಟ್‍ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರಿಗೆ ವಿತ ರಿಸುವ ಎಂಟ್ರಿ ಟಿಕೆಟ್‍ನಲ್ಲಿ ಸೀಕ್ರೆಟ್ ಬಾರ್ ಕೋಡ್ ಮುದ್ರಿಸಿದ್ದು, ಅದನ್ನು ಗೇಟ್‍ನಲ್ಲಿ ಸ್ಕ್ಯಾನಿಂಗ್ ಮಾಡಿದರೆ ಮಾತ್ರ ಬಾಗಿಲು ತೆರೆದುಕೊಳ್ಳುತ್ತದೆ. ಕ್ಲಬ್ ಸದಸ್ಯರು, ಸ್ಟೀವರ್ಡ್‍ಗಳು ಹಾಗೂ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಅಳವಡಿಸಲಾಗಿದ್ದು, ಅದ ರÀಲ್ಲಿ ಬೆರಳು ಒತ್ತಿದರೆ ಗೇಟ್ ತೆರೆದು ಕೊಳ್ಳುತ್ತದೆ. ನೂತನ ಈ ವ್ಯವಸ್ಥೆಯಿಂದ ಅಧಿಕೃತ ಟಿಕೆಟ್ ಖರೀದಿಸಿದವರು, ಎಂಆರ್‍ಸಿ ಪದಾಧಿಕಾರಿಗಳು, ಸದಸ್ಯರು, ಸ್ಟೀವರ್ಡ್‍ಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರೆಯವರು ಪಂದ್ಯ ವೀಕ್ಷಣೆಗೆ ನುಸುಳದಂತೆ ತಡೆಯಬಹು ದಾಗಿದೆ ಎಂದು ಎಂಆರ್‍ಸಿ ಕಾರ್ಯ ದರ್ಶಿ ಕೆ.ಜಿ. ಅನಂತರಾಜ ಅರಸ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಎಂಆರ್‍ಸಿ ಅಧ್ಯಕ್ಷ ಎಲ್.ವಿವೇಕಾ ನಂದ, ಮಾಜಿ ಅಧ್ಯಕ್ಷರಾದ ಬಿ.ಜಿ.ಮುತ್ತಪ್ಪ, ಹನುಮಾನ್ ಪ್ರಸಾದ್, ಸ್ಟೀವರ್ಡ್‍ಗಳಾದ ಹೆಚ್.ಕುಸುಮಾಕರ ಶೆಟ್ಟಿ, ಡಾ.ಎನ್.ನಿತ್ಯಾ ನಂದರಾವ್, ಸಮಿತಿ ಸದಸ್ಯರಾದ ಶಂಕರ್ ರಾವ್, ಸುರೇಶಕುಮಾರ್, ರಮೇಶ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.

Translate »