ಮೈಸೂರು: ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾಮನಗರದವರೆಗಷ್ಟೇ ಸಂಚರಿಸುತ್ತಿದ್ದ ಟ್ರೈನ್ ನಂ. 66539 ಎಸ್‍ಬಿಸಿ-ರಾಮನಗರ ಮೆಮು ರೈಲಿನ ಸಂಚಾರ ವನ್ನು ವಾರದ 4 ದಿನ ಮೈಸೂರುವರೆಗೂ ವಿಸ್ತರಿಸಲು ನೈಋತ್ಯ ರೈಲ್ವೆ ವಲಯ ಸಿದ್ಧವಾಗಿದೆ.
ಈ ಸಂಬಂಧ ರೈಲ್ವೆ ಮಂಡಳಿಯ ಅನುಮತಿ ಕೋರಿ ಡಿ. 3ರಂದು ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೈಋತ್ಯ ರೈಲ್ವೆಯ ಈ ಪ್ರಸ್ತಾವನೆಗೆ ರೈಲ್ವೆ ಮಂಡಳಿಯಿಂದ ಒಪ್ಪಿಗೆ ದೊರೆತರೆ ಮೈಸೂರು-ಬೆಂಗಳೂರು ನಡುವಿನ ರೈಲು ಪ್ರಯಾಣಿಕರಿಗೆ ಮತ್ತೊಂದು ಹೆಚ್ಚುವರಿ ರೈಲು ದೊರೆತಂತಾಗಲಿ.
ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆಯ ವಲಯ ಪ್ರಧಾನ ಕಚೇರಿಯು ಈ ವಿಶೇಷ ಮೆಮು ರೈಲು ರಾಜ್ಯ ರಾಜಧಾನಿ ಮತ್ತು ಸಾಂಸ್ಕೃತಿಕ ರಾಜಧಾನಿ ನಡುವೆ ತಾತ್ಕಾಲಿಕವಾಗಿ ವಾರ ದಲ್ಲಿ 4 ದಿನ ಸಂಚರಿಸಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದೆ. ಈ ಮೆಮು ರೈಲು ಸದ್ಯ ಬೆಂಗಳೂರು (ಮೆಜೆಸ್ಟಿಕ್) ಮತ್ತು ರಾಮನಗರ ನಡುವೆ ವಾರದಲ್ಲಿ 6 ದಿನ ಸಂಚರಿಸುತ್ತಿದೆ.
ಈ ಪ್ರಸ್ತಾವನೆ ಪ್ರಕಾರ ಟ್ರೈನ್ ನಂ. 06575 ಎಸ್‍ಬಿಸಿ-ಮೈಸೂರು ಮೆಮು ಸ್ಪೆಷಲ್ ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಸಂಜೆ 7.55ಕ್ಕೆ ಬೆಂಗಳೂರಿನಿಂದ ಹೊರಟು ಮೈಸೂರಿನತ್ತ ಸಂಚರಿಸಿದರೆ, ಟ್ರೈನ್ ನಂ. 06576 ಮೈಸೂರು-ರಾಮನಗರ ಮೆಮು ಸ್ಪೆಷಲ್ ರೈಲು ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ (ರಾತ್ರಿ ಹೊರಟು) ಮೈಸೂರು ರೈಲು ನಿಲ್ದಾಣದಿಂದ/ರಾಮನಗರ ರೈಲು ನಿಲ್ದಾಣದವರೆಗೆ ಸಂಚರಿಸಲಿದೆ. ಅಲ್ಲಿಂದ ಟ್ರೈನ್ ನಂ. 66540 ರಾಮನಗರ-ಎಸ್‍ಬಿಸಿ ಎಂದು ಹೆಸರು ಬದಲಿಸಿಕೊಂಡು ಬೆಂಗಳೂರಿನವ ರೆಗೂ ಪ್ರಯಾಣ ಮುಂದುವರಿಸಲಿದೆ. ಅಲ್ಲದೇ ಟ್ರೈನ್ ನಂ. 06540 ರಾಮನಗರ-ಬೆಂಗಳೂರು ಮೆಮು ರೈಲು ಪ್ರತಿ ಭಾನು ವಾರ ರಾಮನಗರ-ಬೆಂಗಳೂರು ನಡುವೆ ಸಂಚಾರ ಆರಂಭಿ ಸಲಿದೆ ಎಂದು ನೈಋತ್ಯ ರೈಲ್ವೆಯು ಪ್ರಸ್ತಾವನೆಯಲ್ಲಿ ತಿಳಿಸಿದೆ.