ಸ್ಟೋನ್ ಕ್ರಷರ್, ಕಟ್ಟಡ ಕಲ್ಲು ಉದ್ದಿಮೆದಾರರ ಸಮಸ್ಯೆ ಪರಿಹರಿಸಲು ಬಿಎಸ್‍ವೈ ಆಗ್ರಹ
ಮೈಸೂರು

ಸ್ಟೋನ್ ಕ್ರಷರ್, ಕಟ್ಟಡ ಕಲ್ಲು ಉದ್ದಿಮೆದಾರರ ಸಮಸ್ಯೆ ಪರಿಹರಿಸಲು ಬಿಎಸ್‍ವೈ ಆಗ್ರಹ

December 18, 2018

ಬೆಳಗಾವಿ:  ಸ್ಟೋನ್ ಕ್ರಷರ್ ಮತ್ತು ಕಟ್ಟಡ ಕಲ್ಲು ಉದ್ದಿಮೆದಾರರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿ ಯೂರಪ್ಪ ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕ್ರಷರ್ ಸಿ ಫಾರಂ 20 ವರ್ಷ ಅವಧಿಗೆ ಹಾಗೂ ಕಲ್ಲು ಗಣಿ ಗುತ್ತಿಗೆಯನ್ನು 30 ವರ್ಷ ಅವಧಿಗೆ ವಿಸ್ತರಿಸಬೇಕು, ಕಟ್ಟಡದ ಕಲ್ಲಿಗೆ ಎಂಡಿಪಿ ರದ್ದು, ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಕೊಂಡಸಕೊಪ್ಪದಲ್ಲಿ ಫೆಡರೇಶನ್ ಆಫ್ ಕರ್ನಾ ಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ ಅಸೋಷಿಯೇ ಶನ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿ ದರು. ಪಟ್ಟಾ ಲ್ಯಾಂಡ್‍ಗೆ ರಾಜಧನ ಪಾವತಿಸುವ ಅವಶ್ಯಕತೆ ಇಲ್ಲದ ಕಾರಣ, ಈಗಾಗಲೇ ಕಟ್ಟಡ ಕಲ್ಲು ಗಣಿ ಗುತ್ತಿಗೆ ಮತ್ತು ಎಂ ಸ್ಯಾಂಡ್ ಅರ್ಜಿಗಳನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡಿದರು. ವಿಧಾನಮಂಡಲ ಅಧಿವೇಶನದಲ್ಲಿ ಬೇಡಿಕೆಗಳನ್ನು ಪ್ರಸ್ತಾಪಿಸಲಾಗು ವುದು, ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಬದ್ಧನಾಗಿದ್ದೇನೆ ಎಂದು ಅವರು ಆಶ್ವಾಸನೆ ನೀಡಿದರು.

Translate »