ಕೇಂದ್ರದ ಹೊಸ ನಿಯಮಾವಳಿಗೆ ಕೇಬಲ್ ಟಿವಿ ಆಪರೇಟರ್ಸ್ ಆಕ್ರೋಶ
ಮೈಸೂರು

ಕೇಂದ್ರದ ಹೊಸ ನಿಯಮಾವಳಿಗೆ ಕೇಬಲ್ ಟಿವಿ ಆಪರೇಟರ್ಸ್ ಆಕ್ರೋಶ

December 18, 2018

ಮೈಸೂರು:  ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿ ಕಾರದ (ಟ್ರಾಯ್) ಮೂಲಕ ಅವೈಜ್ಞಾನಿಕ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿ ಗೊಳಿಸಲು ಮುಂದಾಗಿದ್ದು, ಇದರಿಂದ ಕೇಬಲ್ ಟಿವಿ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಕೇಬಲ್ ಟಿವಿ ಆಪ ರೇಟರ್ಸ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಮೈಸೂರು ಜಿಲ್ಲಾ ನ್ಯಾಯಾಲಯದ ಎದು ರಿನ ಪಾರ್ಕ್‍ನಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಸಭೆಯಲ್ಲಿ ನೂರಾರು ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದ ಕೇಬಲ್ ಟಿವಿ ಆಪ ರೇಟರ್ಸ್‍ಗಳು, ಟ್ರಾಯ್‍ನ ಹೊಸ ನಿಯಮ ಗಳ ಪ್ರಕಾರ ಪ್ರತಿ ಚಾನಲ್‍ಗೂ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರು ಕೇಬಲ್ ವ್ಯವಸ್ಥೆಯಿಂದಲೇ ದೂರ ಸರಿಯುವ ಅಪಾಯವಿದ್ದು, ಕೇಬಲ್ ಟಿವಿ ಉದ್ಯಮ ಅವಲಂಬಿಸಿರುವವರು ನಿರುದ್ಯೋಗಿ ಗಳಾಗಲಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಮಾತನಾಡಿದ ಅಸೋಸಿ ಯೇಷನ್ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಸುಮಾರು 28 ವರ್ಷ ಗಳಿಂದ ಕೇಬಲ ಟಿವಿ ಉದ್ಯಮ ಗ್ರಾಹಕರ ವಿಶ್ವಾಸದೊಂದಿಗೆ ಉತ್ತಮವಾಗಿ ನಡೆದು ಕೊಂಡು ಬಂದಿದೆ. ಆದರೆ ಕೇಂದ್ರ ಸರ್ಕಾ ರದ ಹೊಸ ನಿಯಮಗಳಿಂದ ಕೇಬಲ್ ಟಿವಿ ಗ್ರಾಹಕರು ದುಬಾರಿ ಬೆಲೆ ತೆರಬೇಕಾ ಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯ ಕೇಬಲ್ ಟಿವಿ ವ್ಯವಸ್ಥೆಯಲ್ಲಿ ಗ್ರಾಹಕ ರಿಗೆ 250 ರೂ.ನಿಂದ 350 ರೂ.ನಲ್ಲಿ 600ರಿಂದ 800 ಚಾನಲ್‍ಗಳನ್ನು ವೀಕ್ಷಿ ಸಲು ಅವಕಾಶವಿದೆ. ಆದರೆ ಈ ಹೊಸ ಟ್ರಾಯ್ ನಿಯಮದಿಂದ ಒಂದೊಂದು ಚಾನಲ್ ವೀಕ್ಷಣೆಗೂ ಗ್ರಾಹಕರು ಹಣ ಪಾವತಿ ಮಾಡಬೇಕಾಗುತ್ತದೆ. ಹೊಸ ನಿಯಮ ಜಾರಿಗೊಂಡರೆ ಸಾಮಾನ್ಯ ಜನತೆ ಕೇಬಲ್ ಟಿವಿ ಆಪರೇಟರ್‍ಗಳೇ ಹೆಚ್ಚು ಹಣ ವಸೂಲಿ ಮಾಡುತ್ತಾರೆ ಎಂದು ಭಾವಿಸುವುದೇ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು.

ಅಧಿಕ ಹೊರೆಯಿಂದ ಉದ್ಯಮಕ್ಕೆ ಹೊಡೆತ: ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಈ ರೀತಿ ಅವೈಜ್ಞಾನಿಕ ನಿಯಮ ಗಳನ್ನು ಜಾರಿಗೊಳಿಸಲು ಹವಣಿಸುತ್ತಿದೆ ಎಂದು ಎಂ. ಮೋಹನ್‍ಕುಮಾರ್‍ಗೌಡ ಆರೋಪಿಸಿದರು.
ಕೇಂದ್ರ ಸರ್ಕಾರದ ಈ ನೀತಿಯಿಂದಾಗಿ ಅಧಿಕ ಹೊರೆ ಸಾರ್ವಜನಿಕರ ಮೇಲೆ ಬೀಳಲಿದೆ. ದುಬಾರಿ ಶುಲ್ಕ ಪಾವತಿ ಮಾಡಲಾಗದೇ ಗ್ರಾಹಕರು ಕೇಬಲ್ ಟಿವಿ ಯಿಂದ ದೂರವಾಗುವ ಸಾಧ್ಯತೆ ಇದೆ. ಒಟ್ಟಾರೆ ಕೇಂದ್ರದ ಈ ನೀತಿ ಕೇಬಲ್ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಲಿದೆ. ಆ ಮೂಲಕ ಈ ಉದ್ಯಮದಲ್ಲಿ ಜೀವ ನೋಪಾಯ ಕಂಡುಕೊಂಡವರು ನಿರು ದ್ಯೋಗಿಗಳಾಗಲಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಕೈಬಿಡ ಬೇಕು ಎಂದು ಆಗ್ರಹಿಸಿದರು. ಅಸೋಸಿ ಯೇಷನ್ ಉಪಾಧ್ಯಕ್ಷ ಬೋರೇಗೌಡ, ಸಂಚಾಲಕರಾದ ಎಸ್.ಮಂಜುನಾಥ್, ಪಿ.ಆನಂದ್, ರವಿಕುಮಾರ್, ಸಂತೋಷ್, ಪ್ರದೀಪ್ ಸೇರಿದಂತೆ ನೂರಾರು ಮಂದಿ ಜಿಲ್ಲೆಯ ಕೇಬಲ್ ಆಪರೇಟರ್‍ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »