ಮೈಸೂರಲ್ಲಿ ಜೆಎಸ್‌ಎಸ್ ರೇಡಿಯೋ ೯೧.೨ ಎಫ್‌ಎಂ ಕೇಂದ್ರ ಉದ್ಘಾಟನೆ:  ದೇಶದ ಅಭಿವೃದ್ದಿಗೆ ಸಮುದಾಯ ರೇಡಿಯೋ ಕೇಂದ್ರಗಳ ಕೊಡುಗೆ ಅಪಾರ
ಮೈಸೂರು

ಮೈಸೂರಲ್ಲಿ ಜೆಎಸ್‌ಎಸ್ ರೇಡಿಯೋ ೯೧.೨ ಎಫ್‌ಎಂ ಕೇಂದ್ರ ಉದ್ಘಾಟನೆ: ದೇಶದ ಅಭಿವೃದ್ದಿಗೆ ಸಮುದಾಯ ರೇಡಿಯೋ ಕೇಂದ್ರಗಳ ಕೊಡುಗೆ ಅಪಾರ

August 30, 2021

ಕೇಂದ್ರ ವಾರ್ತಾ, ಪ್ರಸಾರ ಸಚಿವ ಡಾ.ಎಲ್.ಮುರುಗನ್

ಮೈಸೂರು, ಆ.೨೯(ಆರ್‌ಕೆಬಿ)- ಸಮುದಾಯ ರೇಡಿಯೋ ಕೇಂದ್ರಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಸ್ಥಳೀಯವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋ ಪನೆ, ಡೈರಿ, ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರು ಗನ್ ಇಂದಿಲ್ಲಿ ತಿಳಿಸಿದರು.
ಮೈಸೂರಿನ ಊಟಿ ರಸ್ತೆ ಜೆಎಸ್‌ಎಸ್ ಕಲಾ, ವಾಣ ಜ್ಯ ಮತ್ತು ವಿಜ್ಞಾನ ಕಾಲೇಜಿ ನಲ್ಲಿ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೬ನೇ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಜೆಎಸ್‌ಎಸ್ ರೇಡಿಯೋ ೯೧.೨ ಎಫ್‌ಎಂ ಕೇಂದ್ರ ಉದ್ಘಾ ಟಿಸಿ ಮಾತನಾಡಿದರು.

ದೇಶದ ೩೦೦ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳ ಪೈಕಿ ೨೨ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳು ಕರ್ನಾಟಕದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಸ್ಥಳೀಯ ವಿಚಾರಗಳಿಗೆ ಒತ್ತು ನೀಡಿ ಸರ್ಕಾರದ ಕೆಲಸಗಳಿಗೆ ನೆರವಾಗುತ್ತಿವೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ನೀರು, ಆರೋಗ್ಯ ಮತ್ತು ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಜನರಿಗೆ ಮಾಹಿತಿ ಮುಟ್ಟಿಸುವ ನಿರ್ಣಾ ಯಕ ಪಾತ್ರ ವಹಿಸಿವೆ. ರೇಡಿಯೋಗ ಳಿಂದ ಸರ್ಕಾರದ ಕೆಲಸ ಜನರಿಗೆ ಹತ್ತಿರ ವಾಗಿವೆ ಎಂದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಕೋವಿಡ್-ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರು ರೇಡಿಯೋ ಮತ್ತು ರೇಡಿಯೋ ಬ್ರಹ್ಮಪುತ್ರ ಉತ್ತಮ ಕೆಲಸ ನಿರ್ವಹಿಸಿ ಮೆಚ್ಚುಗೆ ಪಡೆದಿವೆ ಎಂದ ಅವರು, ಜೆಎಸ್‌ಎಸ್ ಸಮುದಾಯ ಬಾನುಲಿ ಕೇಂದ್ರವು ಹೆಚ್ಚು ಜನರನ್ನು ತಲುಪುವಂತಾಗಲಿ ಎಂದು ಶುಭ ಹಾರೈಸಿದರು. ಶಿಕ್ಷಣ, ಆಧ್ಯಾತ್ಮ, ಆರೋಗ್ಯ ಸೇವೆ ನೀಡುತ್ತಿರುವ ಸುತ್ತೂರು ಸಂಸ್ಥೆ ದೇಶದ ಗಡಿಯನ್ನು ದಾಟಿ ಸೇವೆ ಯಲ್ಲಿ ತೊಡಗಿದೆ ಎಂದು ಸುತ್ತೂರು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಮೈಸೂರಿನಲ್ಲಿ ದೇಶದ ಮೊದಲ ರೇಡಿಯೋ ಸ್ಥಾಪನೆಯನ್ನು ಪ್ರೊ.ಗೋಪಾಲಸ್ವಾಮಿ ಅವರು ಸ್ಥಾಪಿಸಿದಬಗ್ಗೆ ಪ್ರಸ್ತಾಪಿಸಿದರು. ಕಟ್ಟ ಕಡೆಯ ವ್ಯಕ್ತಿಗೂ, ಅಕ್ಷರ ಜ್ಞಾನ ಇಲ್ಲದವರಿಗೂ ಮಾಹಿತಿ ತಲುಪಿಸುವ ಕಾರ್ಯವನ್ನು ರೇಡಿಯೋಗಳು ಮಾಡುತ್ತಿವೆ. ಶಿಕ್ಷಕರು ರೇಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ತಲುಪಿಸಲು ಉತ್ತಮ ಮಾಧ್ಯಮವೂ ಆಗಿದೆ. ಅದರಲ್ಲಿ ಬರುವ ಸಂಗೀತ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುವ ಜೊತೆಗೆ ಮಾನಸಿಕ ರೋಗಕ್ಕೆ ಚಿಕಿತ್ಸೆಯನ್ನು ನೀಡುತ್ತವೆ. ಇಂತಹ ಸಮುದಾಯ ರೇಡಿಯೋ ಕೇಂದ್ರವನ್ನು ಸ್ಥಾಪಿಸಿರುವ ಜೆಎಸ್‌ಎಸ್ ಸಂಸ್ಥೆಗೆ ಶುಭ ಹಾರೈಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಆರೋಗ್ಯಸ ಸೇವೆಯ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಜನರಲಿ ಆತ್ಮಸ್ಥೆöÊರ್ಯ ತುಂಬುವ ಕೆಲಸವನ್ನು ಮಾಡಿದೆ. ಸಾವಿರಾರು ಜನರಿಗೆ ದಿನಸಿ ಕಿಟ್‌ಗಳನ್ನು ನೀಡಿದೆ. ಇದೀಗ ಬಾನುಲಿ ಕೇಂದ್ರ ಆರಂಭಿಸುವ ಮೂಲಕ ಗ್ರಾಮೀಣ ಜನರನ್ನು ತಲುಪಲಿ ಎಂದು ಹಾರೈಸಿದರು. ಎನ್.ಆರ್.ಕ್ಷೇತ್ರದ ಶಾಶಕ ತನ್ವೀರ್‌ಸೇಠ್ ಮಾತನಾಡಿ, ೧೯೩೫ರಲ್ಲಿ ದೇಶದ ಮೊಟ್ಟ ಮೊದಲ ರೇಡಿಯೋ ಕೇಂದ್ರವನ್ನು ಪ್ರೊ.ಗೋಪಾಲಸ್ವಾಮಿ ಸ್ಥಾಪನೆ ಮಾಡಿದ ಮೈಸೂರು ರೇಡಿಯೋ ನಂತರ ಆಕಾಶವಾಣ ಯಾಗಿ ರೂಪುಗೊಂಡ ಬಗ್ಗೆ ಸಚಿವರ ಗಮನ ಸೆಳೆದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಮೇಯರ್ ಸುನಂದಾ ಪಾಲನೇತ್ರ ರೇಡಿಯೋ ಕೇಂದ್ರ ಲೋಗೋ ಬಿಡುಗಡೆ ಮಾಡಿದರು. ವಾರ್ತಾ ಮತ್ತು ಪ್ರಸಾರ ಇಲಾಖೆ ದಕ್ಷಿಣ ವಲಯ ಮಹಾನಿರ್ದೇಶಕ ಎಸ್.ವೆಂಕ ಟೇಶರವರ್ ರೇಡಿಯೋ ಕೇಂದ್ರದ ಆಪ್ ಬಿಡುಗಡೆ ಮಾಡಿದರು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಬಿ.ಜಿ.ಬೆಟ್‌ಸೂರಮಠ್, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಹೆಚ್.ಸಿ.ಹೊನ್ನಪ್ಪ, ಡಾ.ಆರ್.ಸುಹಾಸ್ ಇನ್ನಿತರರು ಉಪಸ್ಥಿತರಿದ್ದರು.

ಜೆಎಸ್‌ಎಸ್ ರೇಡಿಯೋ ೯೧.೨ ಎಫ್‌ಎಂ ಕೇಂದ್ರ

 ಜೆಎಸ್‌ಎಸ್ ರೇಡಿಯೋ ೯೧.೨ ಎಫ್‌ಎಂ ಕೇಂದ್ರವು ಪ್ರತಿದಿನ ಬೆಳಗ್ಗೆ ೭ರಿಂದ ೮ರವರೆಗೆ ಮತ್ತು ಸಂಜೆ ೪ರಿಂದ ೫ರವರೆಗೆ ಮೈಸೂರು ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಅಭಿವೃದ್ಧಿ ವಿಚಾರಗಳ ಕುರಿತು ಮಾಹಿತಿ ಒದಗಿಸಿ, ಜಾಗೃತಿ ಮೂಡಿಸಿ, ಸಶಕ್ತ ಹಾಗೂ ಜಾಗೃತ ಸಮುದಾಯವನ್ನು ರೂಪಿಸುವ ಗುರಿಯೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುತ್ತದೆ.

 ಸ್ಥಳೀಯ ವೈಶಿಷ್ಟö್ಯ, ಕಲೆ, ಸಂಸ್ಕೃತಿಗೆ ಉತ್ತೇಜನ, ಧ್ವನಿ ಇಲ್ಲದವರಿಗೆ ಧ್ವನಿಯಾಗುವುದು, ಸ್ಥಳೀಯ ಸಮಸ್ಯೆಗಳ ಗುರುತಿಸಿ, ಪರಿಹಾರೋಪಾಯ ಸೂಚಿಸುವುದು, ಶಿಕ್ಷಣ, ಆರೋಗ್ಯ, ದುರ್ಬಲರ ಸಬಲೀಕರಣಕ್ಕೆ ಒತ್ತು ನೀಡುವ ಕಾರ್ಯಕ್ರಮಗಳ ಪ್ರಸಾರ ಮಾಡಲಿದೆ.

 ಸಮುದಾಯದ ಭಾಗವಹಿಸುವಿಕೆ, ವಿದ್ಯಾರ್ಥಿಗಳು, ಯುವಕ-ಯುವತಿಯರು, ಹಿರಿಯ ನಾಗರಿಕರು, ಕೂಲಿಕಾರ್ಮಿಕರು, ವಿವಿಧ ಕ್ಷೇತ್ರದ ತಜ್ಞರು, ಕೃಷಿಕರು, ಜನಸಾಮಾನ್ಯರನ್ನು ಒಳಗೊಂಡತೆ ನಗರದ ೧೦ ಲಕ್ಷ ಜನರು ರೇಡಿಯೋ ಕೇಂದ್ರದ ಪ್ರಸಾರ ವ್ಯಾಪ್ತಿಗೆ ಒಳಪಡುತ್ತಾರೆ.

 ಕರುಣಾಳು ಬಾ ಬೆಳಕೆ, ಜೀವ ಸಂಜೀವಿನಿ, ಪ್ರತಿಭಾ ವಿಲಾಸ, ಕಾವ್ಯ ಪರಂಪರೆ, ಕೃಷಿ, ಇದು ನಮ್ಮ ನಾಡು, ಭಾಗ ಸಂಗಮ, ಇವರು ನಮ್ಮವರು, ಪರಿಸರ ಪರಿಚಯ, ಆಯುರ್‌ಸತ್ವ, ಜ್ಞಾನಸುಧಾ, ವಿಜ್ಞಾನ-ಜಾಣಸುದ್ದಿ, ಶಿಕ್ಷಣ, ಕಾನೂನು ಅರಿವು ಇತರೆ ಕಾರ್ಯಕ್ರಮಗಳ ಪ್ರಸಾರ.

 ರೇಡಿಯೋ ಕೇಂದ್ರವನ್ನು ರೇಡಿಯೋ ಸೆಟ್, ಮೊಬೈಲ್ ಫೋನ್‌ನಲ್ಲಿ ೯೧.೨ ಎಪ್‌ಎಂ ಟ್ಯೂನ್ ಮಾಡಬಹುದು. ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಜೆಎಸ್‌ಎಸ್ ರೇಡಿಯೋ ಆಪ್ ಡೌನ್‌ಲೋಡ್ ಮಾಡಿಕೊಂಡು ಕೇಳಬಹುದು. ತಿತಿತಿ.ರಿssಛಿಚಿಛಿs.eಜu.iಟಿ ವೆಬ್‌ಸೈಟ್‌ನಲ್ಲಿಯೂ ಕೇಳಬಹುದು. ಹೆಚ್ಚಿನ ಮಾಹಿತಿಗೆ ದೂರವಾಣ – ೦೮೨೧-೨೫೪೬೫೬೩, ೮೨೯೬೭೨೫೯೧೨ ಸಂಪರ್ಕಿಸಬಹುದು.

Translate »