ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ
News

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ

December 13, 2021

ವಾರಣಾಸಿ,ಡಿ.12-ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ (ಡಿ.13) ವಾರಣಾಸಿಯಲ್ಲಿ ‘ಕಾಶಿ ವಿಶ್ವ ನಾಥ ಕಾರಿಡಾರ್’ ಅನ್ನು ಉದ್ಘಾಟಿ ಸಲಿದ್ದಾರೆ. ಇಡೀ ಕಾರ್ಯಕ್ರಮವನ್ನು ದೇಶಾದ್ಯಂತ ನೇರ ಪ್ರಸಾರ ಮಾಡ ಲಾಗುತ್ತದೆ. ದೇಶಾದ್ಯಂತ 2000ಕ್ಕೂ ಹೆಚ್ಚು ಸಂತರು ಮತ್ತು ಗಣ್ಯರು ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ.

800 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ಧಾಮ ಯೋಜನೆ ಪೂರ್ಣ ಗೊಂಡಿದೆ. ಈ ಕಾರಿಡಾರ್ ಯೋಜನೆ ಭಕ್ತಾದಿಗಳ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ ಹಾಗೂ ದೇವಾಲಯ ಮತ್ತು ಗಂಗಾ ನದಿಯ ನಡುವೆ ನೇರ ಸಂಪರ್ಕ ಕಲ್ಪಿಸುತ್ತದೆ. ಪ್ರಧಾನಿ ಮೋದಿ 2 ದಿನಗಳ ಕಾಲ ವಾರಣಾಸಿಯಲ್ಲಿಯೇ ಇರಲಿದ್ದು, ನಾಳೆ (ಸೋಮ ವಾರ) ಮತ್ತು ನಾಡಿದ್ದು (ಮಂಗಳವಾರ) ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ ಬಾಬಾನ ದರ್ಶನದ ನಂತರ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ನಂತರ ಬರೇಕಾ ಅತಿಥಿ ಗೃಹವನ್ನು ತಲುಪಲಿದ್ದಾರೆ. ಸಂಜೆ ರೋರೋ ಬೋಟ್ ಮೂಲಕ ಗಂಗಾ ಆರತಿಗೆ ತೆರಳಲಿದ್ದು ಆರತಿಯಲ್ಲಿ ಎಲ್ಲಾ ಮುಖಂ ಡರು ಪಾಲ್ಗೊಳ್ಳಲಿದ್ದಾರೆ. ಆರತಿಯ ನಂತರ ಪ್ರಧಾನಿ ಮತ್ತೆ ಬರೇಕಾಗೆ ತೆರಳಲಿದ್ದಾರೆ. ಡಿ.14ರಂದು ಬೆಳಗ್ಗೆ 9.30ಕ್ಕೆ ಕಾಶಿ ವಾರಣಾಸಿ ಮಹಾನಗರ ಮತ್ತು ಬಿಜೆಪಿ ಸಂಘಟನೆಯ ಜಿಲ್ಲಾ ಪದಾಧಿಕಾರಿ ಗಳೊಂದಿಗೆ ಪ್ರಧಾನಿ ಮೋದಿ ಔಪಚಾರಿಕ ಸಭೆ ನಡೆಸಲಿದ್ದಾರೆ. 10 ಗಂಟೆಗೆ ಬರೇಕಾ ಆಡಳಿತ ಭವನದಲ್ಲಿ ಮುಖ್ಯಮಂತ್ರಿಗಳೊಂ ದಿಗೆ ಸಮಾವೇಶ ನಡೆಯಲಿದೆ. ಈ ಸಮ್ಮೇಳನ 4 ಗಂಟೆಗಳ ಕಾಲ ನಡೆಯಲಿದೆ. ಇದರಲ್ಲಿ ಎಲ್ಲಾ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳ ಕಾಮಗಾರಿ ಮತ್ತು ಯೋಜನೆಗಳ ಪ್ರಸ್ತುತಿ ನೀಡಲಿದ್ದಾರೆ.

Translate »