ಚುನಾವಣೆಗೆ ಮುನ್ನಒಕ್ಕಲಿಗರ ಮೀಸಲಾತಿ ಹೆಚ್ಚಳ, 2ಎಗೆ ಪಂಚಮಸಾಲಿಗರ ಸೇರ್ಪಡೆ
News

ಚುನಾವಣೆಗೆ ಮುನ್ನಒಕ್ಕಲಿಗರ ಮೀಸಲಾತಿ ಹೆಚ್ಚಳ, 2ಎಗೆ ಪಂಚಮಸಾಲಿಗರ ಸೇರ್ಪಡೆ

December 16, 2022

ಬೆಂಗಳೂರು, ಡಿ.15(ಕೆಎಂಶಿ)- ವಿಧಾನಸಭಾ ಚುನಾವಣೆಗೂ ಮುನ್ನ ಒಕ್ಕಲಿಗ ಹಾಗೂ ಪಂಚಮ ಸಾಲಿಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸಂಕ್ರಾಂತಿ ಹಬ್ಬದ ಕೊಯ್ಲಿನ ವೇಳೆಗೆ ಈ ಎರಡೂ ಕೃಷಿಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ರಾಜ ಕೀಯ ಕೊಯ್ಲಿಗೆ ಬಿಜೆಪಿ ಕೈ ಹಾಕಿದೆ. ಈ ಸಮು ದಾಯ ಸೇರಿದಂತೆ ಕೆಲವು ಸಣ್ಣಪುಟ್ಟ ಜಾತಿಗಳು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವಂತೆ ಈಗಾಗಲೇ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಅರ್ಜಿ ಸಲ್ಲಿಸಿವೆ.

ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾಸಾಂತ್ಯ ಇಲ್ಲವೇ ಜನವರಿ ಮೊದಲ ವಾರದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಬಜೆಟ್ ಅಧಿವೇಶನದಲ್ಲಿ ಸದನದ ಒಪ್ಪಿಗೆ ಪಡೆದು, ಪಂಚಮ ಸಾಲಿಗಳನ್ನು 2ಎಗೂ, ಒಕ್ಕಲಿಗರ ಮೀಸಲಾತಿ ಯನ್ನು ಶೇಕಡ 4 ರಿಂದ 8 ಇಲ್ಲವೇ 10ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೀಸಲಾತಿ ಯಲ್ಲೇ ಬ್ರಾಹ್ಮಣ ಮತ್ತು ಜೈನ ಸಮುದಾಯಕ್ಕೆ ಅನುಕೂಲ ಮಾಡಿಕೊಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಜ್ಞರು ಹಾಗೂ ಆರ್‍ಎಸ್‍ಎಸ್ ಮುಖಂಡರೊಟ್ಟಿಗೆ ಸಮಾಲೋಚಿಸಿ, ಪ್ರಮುಖ ಸಮುದಾಯಗಳನ್ನು ಚುನಾವಣೆಗೂ ಮುನ್ನ ಓಲೈಸಿಕೊಳ್ಳಲು ಮೀಸಲಾತಿ ತಂತ್ರ ರೂಪಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಶೇಕಡ 50ಕ್ಕಿಂತ ಹೆಚ್ಚು ಮೀಸಲಾತಿ ನೀಡುವಂತಿಲ್ಲ. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10 ರಷ್ಟು ಮೀಸಲಾತಿ ಜಾರಿಗೆ ತಂದಿದ್ದಾರೆ.

ಈ ಸಮುದಾಯಕ್ಕೆ ಉತ್ತರ ಭಾರತದ ಬ್ರಾಹ್ಮಣರು ಹಾಗೂ ಅಲ್ಲಿನ ಪ್ರಮುಖ ಮುಂದುವರೆದ ಸಮು ದಾಯಗಳಿಗೆ ಮೀಸಲಾತಿಯಲ್ಲಿ ಅವಕಾಶ ಮಾಡಿ ಕೊಟ್ಟಿದ್ದಾರೆ. ಮೋದಿ ಅವರ ರಾಜಕೀಯ ತಂತ್ರವನ್ನೇ ಬೊಮ್ಮಾಯಿ ಅವರು, ಅನುಸರಿಸಲು ಹೊರಟಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಶೇ.10ರಷ್ಟು ಮೀಸಲಾತಿ ಯನ್ನು ಬ್ರಾಹ್ಮಣರು ಮತ್ತು ಈ ಎರಡು ಕೃಷಿಕ ಸಮುದಾಯಗಳಿಗೆ ನೀಡಲು ನಿರ್ಧರಿಸಿದ್ದಾರೆ.

ಅಷ್ಟೇ ಅಲ್ಲ ಅಲ್ಪಸಂಖ್ಯಾತರಿಗಿರುವ ಶೇಕಡ 4ರಷ್ಟು ಮೀಸಲಾತಿಯನ್ನು 2ಕ್ಕೆ ಇಳಿಸಲು ತೀರ್ಮಾನಿಸಿರುವ ಬಿಜೆಪಿ ಸರ್ಕಾರ ಇದೇ ರೀತಿ ಶೇಕಡ 50 ರಷ್ಟರಲ್ಲಿರುವ ಮೀಸಲಾತಿಯಲ್ಲೂ ಕೆಲ ಬದಲಾವಣೆ ಮಾಡಲಿದ್ದಾರೆ.

ಪರಿಶಿಷ್ಟರಿಗೆ ಈಗಾಗಲೇ ತೀರ್ಮಾನ ಕೈಗೊಂಡಿ ರುವಂತೆ ಶೇಕಡ 24ರಷ್ಟು ಮೀಸಲಾತಿ ಕಲ್ಪಿಸಿ, ಹಿಂದುಳಿದ ವರ್ಗ 2ಎ ಯಲ್ಲಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಲು ಲೆಕ್ಕಾಚಾರ ಹಾಕಿ ಇಟ್ಟಿ ದ್ದಾರೆ. ಹಿಂದುಳಿದ ವರ್ಗದ ಆಯೋಗದ ವರದಿ ಬರುತ್ತಿದ್ದಂತೆ ಆ ವರದಿ ಆಧಾರವಾಗಿಟ್ಟುಕೊಂಡು ಬಜೆಟ್ ಅಧಿವೇಶನದಲ್ಲಿ ಮಂಡನೆ ಮಾಡಿ, ಅನುಮೋದನೆ ಪಡೆದುಕೊಳ್ಳಲಿದ್ದಾರೆ.

ಈ ಎಲ್ಲವೂ ರಾಜ್ಯ ವಿಧಾನಸಭಾ ಚುನಾ ವಣೆಗೂ ಮುನ್ನ ಅನುಷ್ಠಾನಗೊಂಡು ರಾಜಕೀಯ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ.

Translate »