ಹೆಚ್ಚಿದ ಸಂದರ್ಶಕರ ಭೇಟಿ: ಸಿದ್ದಗಂಗಾ ಶ್ರೀಗಳು ಐಸಿಯುಗೆ ಶಿಫ್ಟ್
ಮೈಸೂರು

ಹೆಚ್ಚಿದ ಸಂದರ್ಶಕರ ಭೇಟಿ: ಸಿದ್ದಗಂಗಾ ಶ್ರೀಗಳು ಐಸಿಯುಗೆ ಶಿಫ್ಟ್

December 17, 2018

ತುಮಕೂರು:  ತುಮಕೂರಿನ ಸಿದ್ದಗಂಗಾ ಮಠದ ಶತಾಯುಷಿ ಸಿದ್ದಗಂಗಾ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಬರುವ ಗಣ್ಯರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ.

ಚೆನ್ನೈ ರೇಲಾ ಮೆಡಿಕಲ್ ಕಾಲೇ ಜಿನಲ್ಲಿ ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದರು. 111 ವರ್ಷದ ಸಿದ್ದಗಂಗಾ ಶ್ರೀಗಳಿಗೆ ಡಿಸೆಂಬರ್ 9 ರಂದು ಬೈಪಾಸ್ ಸರ್ಜರಿ ನಡೆದು ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಕರ್ನಾಟಕದ ರಾಜಕಾರಣಿಗಳು ಆಸ್ಪತ್ರೆಗೆ ಭೇಟಿ ನೀಡುವ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸೋಂಕು ಹೆಚ್ಚುವ ಸಾಧ್ಯತೆ ಇರುವ ಕಾರಣ ವಾಪಸ್ ಐಸಿಯುಗೆ ಶಿಫ್ಟ್ ಮಾಡಲಾಗಿದೆ.

ಶ್ರೀಗಳನ್ನು ಒಂದು ವಾರದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ.

Translate »