ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ, ಸಾಧಕರಿಗೆ ಸನ್ಮಾನ
ಹಾಸನ

ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ, ಸಾಧಕರಿಗೆ ಸನ್ಮಾನ

August 15, 2018

ಹಾಸನ: ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆ.15ರಂದು ಬೆಳಗ್ಗೆ 9 ಗಂಟೆಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಉಪಸ್ಥಿತಿ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋ ತ್ಸವ ಸಂದೇಶ ನೀಡುವರು. ಶಾಸಕ ಪ್ರೀತಮ್ ಜೆ.ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಜಿಪಂ ಅಧ್ಯಕ್ಷ, ಬಿ.ಎಸ್.ಶ್ವೇತಾ ದೇವರಾಜ್, ಶಾಸಕ ರಾದ, ಎ.ಟಿ.ರಾಮಸ್ವಾಮಿ, ಹೆಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಕೆ.ಎಸ್.ಲಿಂಗೇಶ್, ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಮರಿ ತಿಬ್ಬೇಗೌಡ, ಎಂ.ಎ.ಗೋಪಾಲಸ್ವಾಮಿ, ಕೆ.ಟಿ. ಶ್ರೀಕಂಠೇಗೌಡ, ಮತ್ತಿತರರು ಭಾಗವಹಿಸುವರು.

ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಪೊಲೀಸ್ ಇಲಾಖೆ: ಎಂ.ಎನ್.ಕುಮಾರ್(ಎಎಸ್‍ಸೈ, ಹಾಸನ ಜಿಲ್ಲಾ ಗುಪ್ತಶಾಖೆ), ವೀರನಾರಿ ಕ್ಷೇತ್ರ: ಎಂ.ಕೆ.ಪೃಥ್ವಿ( ಹುತಾತ್ಮ ಸೈನಿಕ ಚಂದ್ರ ಅವರ ಪತ್ನಿ, ಹರದೂರು, ಅರಕಲಗೂಡು), ಎಂ.ಆರ್. ಸಣ್ಣಮ್ಮ(ನಗರಸಭೆ ಪೌರಕಾರ್ಮಿಕರು, ಹಾಸನ), ಸಮಾಜ ಸೇವೆ/ಪರಿಸರ ಕ್ಷೇತ್ರ: ಪಿ.ಪುಟ್ಟಯ್ಯ, (ಪರಿಸರವಾದಿ), ವಿದ್ಯಾರ್ಥಿ ವಿಭಾಗ: ಎಂ.ಕೆ. ಕಾವೇರಿಯಪ್ಪ (ಎಸ್‍ಎಸ್‍ಎಲ್‍ಸಿ 625 ಅಂಕ, ವಿಜಯ ಹೈಸ್ಕೂಲ್), ಎಸ್.ಎಲ್.ಮೋಹನ್ (ದ್ವೀತಿಯ ಪಿಯು ವಿಜ್ಞಾನ ವಿಭಾಗ, 595 ಅಂಕ, ಮಾಸ್ಟರ್ ಪಿಯು ಕಾಲೇಜು), ಕೆ. ಹೆಚ್.ತೇಜಸ್ವಿ(ಕಲಾ ವಿಭಾಗ, 563 ಅಂಕ, ಸೇಂಟ್ ಫೀಲೋಮಿನ ಪಿಯು ಕಾಲೇಜು), ಎ.ಎಸ್.ಸಂಧ್ಯಾ (ವಾಣಿಜ್ಯ ವಿಭಾಗ 584 ಅಂಕ, ಕ್ರೈಸ್ಟ್‍ದ ಕಿಂಗ್ ಪಿಯು ಕಾಲೇಜು, ಚನ್ನರಾಯಪಟ್ಟಣ), ಕ್ರೀಡಾಕ್ಷೇತ್ರ: ಕವನ ಎಂ.ಗೌಡ(ವಿಜಯ ಇಂಗ್ಲೀಷ್ ಹೈಸ್ಕೂಲ್), ಸ್ಕೌಟ್ಸ್ ಮತ್ತು ಗೈಡ್ಸ್: ಆರ್.ಜಿ.ಗಿರೀಶ್(ಸ್ಕೌಟ್ಸ್ ಮತ್ತು ಗೈಡ್ಸ್), ಭಾರತ ಸೇವಾದಳ: ಬಿ.ಎಸ್. ಮಹೇಶ(ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದೊಡ್ಡಬೆಮ್ಮತ್ತಿ, ಅರಕಲಗೂಡು), ಪತ್ರಿಕಾ ಕ್ಷೇತ್ರ: ಎ.ಆರ್.ವೆಂಕಟೇಶ್, (ಜನಮಿತ್ರ ದಿನ ಪತ್ರಿಕೆ ವರದಿಗಾರ), ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ: ಗೋವಿಂದರಾಜಶೆಟ್ಟಿ(ರಾಮನಾಥಪುರ, ಅರಕಲಗೂಡು) ಎನ್‍ಸಿಸಿ: ಎಸ್.ಆರ್.ಧನಂಜಯ (ಸರ್ಕಾರಿ ಕಲಾ ಕಾಲೇಜು, ಹಾಸನ) ಎನ್‍ಎಸ್‍ಎಸ್: ಎಂ.ಆರ್.ಉಮೇಶ್(ಸರ್ಕಾರಿ ಕಲಾ ಕಾಲೇಜು ಹಾಸನ)ರನ್ನು ಸನ್ಮಾನಿಸಲಾಗುವುದು.

Translate »