ನ್ಯೂಜಿಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತ
ಮೈಸೂರು

ನ್ಯೂಜಿಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತ

February 3, 2020

ಮೌಂಟ್ ಮಾಂಗ್ನುಯಿ, ಫೆ.2- ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲೂ 7 ರನ್‍ಗಳ ಭರ್ಜರಿ ಜಯ ಸಾಧಿಸಿರುವ ಭಾರತ ಕೀವಿಸ್ ನಾಡಲ್ಲಿ ಚೊಚ್ಚಲ ಟಿ-20 ಸರಣಿ ಗೆಲುವು ದಾಖಲಿಸಿದ್ದು, ಈ ಮೂಲಕ ಭಾರತ 5-0 ಅಂತರದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ನಿರ್ಮಿಸಿದೆ.

ಇಲ್ಲಿನ ಬೇ ಓವಲ್ ಮೈದಾನದಲ್ಲಿ ಭಾನುವಾರ ನಡೆದ 5ನೇ ಟಿ-20 ಪಂದ್ಯ ದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 163ರನ್ ಗಳಿ ಸಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156ರನ್ ಗಳಿಸಿ 7ರನ್‍ಗಳಿಂದ ಸೋಲು ಅನುಭವಿಸಿತು.

ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಕೇವಲ 2ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ರಾಹುಲ್ ಜೊತೆಯಾದ ರೋಹಿತ್ ಶರ್ಮಾ ಎರ ಡನೇ ವಿಕೆಟ್‍ಗೆ 88 ರನ್‍ಗಳ ಜೊತೆ ಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿ ದರು. ಆದರೆ 33 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಒಳಗೊಂಡ 45ರನ್ ಗಳಿಸಿ ಉತ್ತಮವಾಗಿ ಆಟವಾಡುತ್ತಿದ್ದ ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿದರು.

ಆಗ ತಂಡದ ಮೊತ್ತ 96 ರನ್ ಆಗಿತ್ತು. ಬಳಿಕ ಬಂದ ಶ್ರೇಯಸ್ ಐಯ್ಯರ್ ರೋಹಿತ್ ಜೊತೆಗೂಡಿ 3ನೇ ವಿಕೆಟ್‍ಗೆ ಅರ್ಧ ಶತಕದ ಜೊತೆಯಾಟವಾಡಿದರು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ರೋಹಿತ್ 41 ಎಸೆತಗಳಲ್ಲಿ ತಲಾ 3 ಸಿಕ್ಸರ್, ಬೌಂಡರಿ ಒಳಗೊಂಡ 60ರನ್ ಗಳಿಸಿದ್ದ ವೇಳೆ ಗಾಯಗೊಂಡು ನಿವೃತ್ತ ರಾದರು. ಅಂತಿಮವಾಗಿ ಭಾರತದ ಪರ ಶ್ರೇಯಸ್ ಅಯ್ಯರ್ 33, ಮನೀಶ್ ಪಾಂಡೆ 33 ರನ್ ಗಳಿಸಿದರು. ನ್ಯೂಜಿ ಲೆಂಡ್ ಪರ ಬೌಲಿಂಗ್‍ನಲ್ಲಿ ಸ್ಕಾಟ್ ಕುಗ್ಲಿ ಜನ್ 2, ಹಮೀಶ್ ಬೆನಟ್ 1 ವಿಕೆಟ್ ಪಡೆದರು. ಭಾರತ ನೀಡಿದ 164ರನ್ ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡದ ಮೊತ್ತ 17 ರನ್ ಆಗುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜೊತೆಯಾದ ರಾಸ್ ಟೇಲರ್ ಹಾಗೂ ಸೈಫರ್ಟ್ 4ನೇ ವಿಕೆಟ್‍ಗೆ 99ರನ್‍ಗಳ ಜೊತೆಯಾಟವಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ನ್ಯೂಜಿಲ್ಯಾಂಡ್ ಪರ ಸೈಫರ್ಟ್ 50, ರಾಸ್ ಟೇಲರ್ 53 ಮತ್ತು ಸೋಧಿ ಅಜೇಯ 16 ರನ್ ಪೇರಿಸಿದರಾದರೂ, ಉಳಿದ ಬ್ಯಾಟ್ಸ್‍ಮನ್‍ಗಳಿಂದ ನಿರೀಕ್ಷಿತ ಆಟ ಬರಲಿಲ್ಲ. ಭಾರತದ ಪರ ಬೌಲಿಂಗ್‍ನಲ್ಲಿ ಬೂಮ್ರಾ 3, ನವದೀಪ್ ಸೈನಿ, ಶಾರ್ದೂಲ್ ಠಾಕೂರ್ ತಲಾ 2 ಹಾಗೂ ವಾಷಿಂಗ್‍ಟನ್ ಸುಂದರ್ ಒಂದು ವಿಕೆಟ್ ಉರುಳಿಸಿದರು. ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ 224 ರನ್ ಗಳಿಸಿದ ಕೆ.ಎಲ್.ರಾಹುಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಹಾಗೂ ಬೂಮ್ರಾ ಪಂದ್ಯ ಶೇಷ್ಠ ಪ್ರಶಸ್ತಿಗೆ ಭಾಜನವಾದರು. ನ್ಯೂಜಿಲೆಂಡ್ ಹಾಗೂ ಭಾರತ ನಡುವಿನ ಏಕದಿನ ಸರಣಿ ಫೆಬ್ರವರಿ 5ರಿಂದ ಆರಂಭವಾಗಲಿದೆ.

Translate »