ಬೆಂಗಳೂರಿಗೂ ಕಾಲಿಟ್ಟ ಮಹಾಮಾರಿ ಕೊರೋನಾ
ಮೈಸೂರು

ಬೆಂಗಳೂರಿಗೂ ಕಾಲಿಟ್ಟ ಮಹಾಮಾರಿ ಕೊರೋನಾ

February 3, 2020

ಬೆಂಗಳೂರು, ಫೆ.2- ಕೊರೋನಾ ವೈರಸ್ ಇದೀಗ ಜಗತ್ತಿನ ಜನರಲ್ಲಿ ಮರಣ ಭಯವನ್ನು ಹುಟ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈಗಾ ಗಲೇ ಈ ಮಾರಕ ರೋಗದ ಕಾರಣ ಜಾಗತಿಕ ಎಮ ರ್ಜೆನ್ಸಿ ಘೋಷಿಸಿದೆ. ಆದರೆ ಇದೀಗ ಕನ್ನಡಿಗರು ಆಘಾತ ಕ್ಕೊಳಗಾಗಬೇಕಾಗಿರುವ ಇನ್ನೊಂದು ಆತಂಕದ ಸುದ್ದಿ ಹೊರಬಿದ್ದಿದೆ, ಅದೆಂದರೆ ಒಟ್ಟು 10 ಕೊರೋನಾ ಶಂಕಿ ತರು ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್‍ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್‍ನಲ್ಲಿ ಪರೀಕ್ಷೆಗಾಗಿ ದಾಖಲಾಗಿದ್ದಾರೆ.

“ಒಟ್ಟಾರೆಯಾಗಿ 10 ರೋಗಿಗಳು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ನಾವು ಅವರಿಂದ ರಕ್ತದ ಮಾದರಿಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದೇವೆ. ಅವರು ಇನ್ಫ್ಲು ಯೆಂಜಾ ಜ್ವರದ ಲಕ್ಷಣ ಹೊಂದಿದ್ದರು. ಇದೀಗ ಅವರನ್ನು ತೀವ್ರ ನಿಗಾದಲ್ಲಿರಿಸಿ ದ್ದೇವೆ. ಇನ್ನೊಂದೆಡೆ ವುಹಾನ್‍ನಿಂದ ಹಿಂದಿರುಗಿದ ಮೂವರು ರೋಗಿಗಳನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ಗಳಲ್ಲಿ ಇರಿಸಲಾಗಿದೆ, ಇದರಲ್ಲಿ ಇಬ್ಬರಿಗೆ ನೆಗೆಟಿವ್ ವರದಿ ಬಂದಿದೆ” ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸಿ.ನಾಗರಾಜ ಹೇಳಿದರು.

ಇಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದೆ, ಮೂರನೇ ರೋಗಿಯ ಪರೀಕ್ಷಾ ವರದಿ ಗಾಗಿ ಕಾಯಲಾಗುತ್ತಿದೆ.ಶುಕ್ರವಾರ ಮೊದಲು ಕರ್ನಾಟಕದಿಂದ ಕಳುಹಿಸಲಾದ 13 ಮಾದರಿಗಳಲ್ಲಿ 12 ಮಾದರಿಗಳು ನೆಗೆಟಿವ್ ಎಂದು ಪರೀಕ್ಷಿಸಲ್ಪಟ್ಟಿದೆ. “ಕೊರೋನಾ ವೈರಸ್‍ಗಳು ಮಾನವರು ಸೇರಿದಂತೆ ಸಸ್ತನಿಗಳ ಉಸಿರಾಟದ ಮೇಲೆ ಸಾಮಾನ್ಯ ವಾಗಿ ಪರಿಣಾಮ ಬೀರುವ ವೈರಸ್‍ಗಳಾಗಿವೆ. ಅವು ಸಾಮಾನ್ಯ ಶೀತ, ನ್ಯುಮೋ ನಿಯಾ ಉಸಿರಾಟದ ಸಿಂಡ್ರೋಮ್ (ಒಇಖS) ಮತ್ತು ತೀವ್ರವಾದ ಉಸಿರಾಟದ ಸಿಂಡ್ರೋಮ್ (SಂಖS)ಗೆ ಸಂಬಂಧಿಸಿವೆ. ಇದು ಕರುಳಿನ

ಮೇಲೆ ಸಹ ಪರಿಣಾಮ ಬೀರಬಹುದು”. ಜ್ವರ, ಕೆಮ್ಮು, ಶೀತ ಎದೆ, ಶ್ವಾಸಕೋಶದ ಮೇಲೆ ಇದು ಪರಿಣಾಮ ಬೀರುತ್ತದೆ. ಕಳೆದ 11 ದಿನಗಳಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರಕ ಕೊರೋನಾ ವೈರಸ್ ರೋಗ ಲಕ್ಷಣಗಳಿಗಾಗಿ ಒಟ್ಟು 4,367 ಪ್ರಯಾಣಿಕರನ್ನು ಉನ್ನತ ಮಟ್ಟದ ತಪಾಸಣೆಗೆ ಒಳಪಡಿಸಲಾಗಿದೆ. ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ಜಂಟಿ ನಿರ್ದೇಶಕ ಡಾ.ಬಿ.ಜಿ.ಪ್ರಕಾಶ್ ಮಾತನಾಡಿ, ನಾವು ಜನವರಿ 20ರಂದು ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಪ್ರಾರಂಭಿಸಿ ದ್ದೇವೆ ಮತ್ತು ಜನವರಿ 31ರವರೆಗೆ ನಾವು 4,367 ಪ್ರಯಾಣಿಕರನ್ನು ಪರೀಕ್ಷಿಸಿ ದ್ದೇವೆ, ಇದು ದಿನಕ್ಕೆ ಸರಾಸರಿ 350 ಜನರು ಪರೀಕ್ಷೆಗೆ ಒಳಗಾಗಿದ್ದಾರೆ ಎಂದರು.

ಚೀನಾದಿಂದ 2 ವಿಮಾನಗಳಲ್ಲಿ ಬರುವ ಪ್ರಯಾಣಿಕರಿಗಾಗಿ ಮತ್ತು 3ನೇ ವಿಮಾನವು ಇತರ ಭಾರತೀಯ ನಗರಗಳಿಗೆ ಸಾಗುವ ಮುನ್ನ ಬೆಂಗಳೂರಿನಲ್ಲಿ ಇಳಿಯುತ್ತದೆ. ನಾವು ಜ್ವರದ ರೋಗಲಕ್ಷಣಗಳನ್ನು ಪರಿಶೀಲಿಸುತ್ತೇವೆ ಮತ್ತು ಅವುಗಳನ್ನು ತೋರಿದ ಯಾವುದೇ ಪ್ರಯಾಣಿಕರನ್ನು ರಾಜೀವ್ ಗಾಂಧಿ ಇನ್ಸ್‍ಸ್ಟಿಟ್ಯೂಟ್ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸುತ್ತೇವೆ ಎಂದರು.

Translate »