ವಿಶ್ವದಲ್ಲೇ ಭಾರತೀಯ ಆಹಾರ ಪದ್ಧತಿ ಶ್ರೇಷ್ಠ
ಮೈಸೂರು

ವಿಶ್ವದಲ್ಲೇ ಭಾರತೀಯ ಆಹಾರ ಪದ್ಧತಿ ಶ್ರೇಷ್ಠ

November 21, 2021

ಮೈಸೂರು,ನ.20(ಆರ್‍ಕೆ)-ವಿಶ್ವದಲ್ಲೇ ಭಾರತೀಯ ಆಹಾರ ಪದ್ಧತಿ ಶ್ರೇಷ್ಠ ವಾದುದು ಎಂದು ಕುವೆಂಪು ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಡಾ. ಚಿದಾ ನಂದಗೌಡ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರವು ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನಲ್ಲಿ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಭಾರತೀಯ ಪಾರಂಪರಿಕ ಆಹಾರ ಪದ್ಧತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ಕøಷ್ಟ ಆಹಾರ ಪದ್ಧತಿ ಮರೆತು ಇತ್ತೀ ಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಪದ್ಧತಿ ಅನು ಸರಿಸುತ್ತಿರುವುದು ದುರದೃಷ್ಟಕರ. ಅದರಿಂ ದಾಗಿ ಇಂದು ರೋಗಗಳು ಉಲ್ಬಣವಾಗಿ ಮನುಷ್ಯನ ಆಯಸ್ಸೂ ಸಹ ಕ್ಷೀಣಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ.ಜಮುನಾ ಪ್ರಕಾಶ್, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು ಪ್ರಾಂಶುಪಾಲರಾದ ಡಾ.ರಾಧಾ ಕೃಷ್ಣ ರಾಮರಾವ್, ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ಸಹಾ ಯಕ ನಿರ್ದೇಶಕ ಡಾ. ಲಕ್ಷ್ಮೀನಾರಾ ಯಣ ಶೆಣೈ, ಪ್ರಾಧ್ಯಾಪಕ ಶೇಖರ್ ನಾಯಕ್, ಡಾ.ಮಹೇಶ್ ಶಿವನಂಜಪ್ಪ, ಡಾ. ಆಂಜನೇಯಮೂರ್ತಿ, ಡಾ. ಸಂತೋಷ್, ಶೇಷಾಚಲ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »