ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ
ಮೈಸೂರು

ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

November 21, 2021

ಮೈಸೂರು,ನ.20(ಎಂಟಿವೈ)- ಮಾಜಿ ಪ್ರಧಾನಿ ಇಂದಿರಾಗಾಂಧಿ ಆದರ್ಶ ಮತ್ತು ಸ್ಫೂರ್ತಿಯ ಸಂಕೇತ. ಜವಾಹರಲಾಲ್ ನೆಹರು ಮೊದಲ ಪ್ರಧಾನಿಯಾಗಿದ್ದರೂ ಅವರ ಅವಧಿಯಲ್ಲಿ ಜಾರಿಗೆ ತರಲು ಉದ್ದೇಶಿ ಸಿದ್ದ ಶೇ.75ರಷ್ಟು ಯೋಜನೆ ಪೂರ್ಣಗೊಳಿ ಸಿದ ಕೀರ್ತಿ ಇಂದಿರಾಗಾಂಧಿ ಅವರಿಗೆ ಸಲ್ಲು ತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಮೈಸೂರು ನಗರ ಹಾಗೂ ಗ್ರಾಮಾಂ ತರ ಕಾಂಗ್ರೆಸ್ ಸಮಿತಿ ವತಿಯಿಂದ ಶನಿ ವಾರ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿ ಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿರಾಗಾಂಧಿ ಅವರು ಇಡೀ ದೇಶಕ್ಕೆ ಆದರ್ಶ. ಅವರ ಆದರ್ಶವನ್ನು ಪಾಲನೆ ಮಾಡಬೇಕು. ಇಂದಿರಾ ಗಾಂಧಿ ನಮ್ಮ ಹೆಮ್ಮೆಯ ಮಹಿಳೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಮೊದಲ ಪ್ರಧಾನಿ ಯಾಗಿದ್ದ ನೆಹರು ಅವರು ದೇಶದ ಅಭಿ ವೃದ್ಧಿಗೆ ಅಡಿಗಲ್ಲು ಹಾಕಿದ್ದ ಯೋಜನೆಗಳಲ್ಲಿ ಶೇ.75ರಷ್ಟು ಯೋಜನೆಗಳು ಇಂದಿರಾ ಗಾಂಧಿ ಅವರ ಕಾಲದಲ್ಲಿಯೇ ಪೂರ್ಣ ಗೊಂಡವು. ಹೋರಾಟದ ಇತಿಹಾಸವುಳ್ಳ ಕುಟುಂಬದಲ್ಲಿ ಜನಿಸಿದ್ದ ಅವರು, ಚಿಕ್ಕಂ ದಿನಿಂದಲೇ ಬ್ರಿಟಿಷರ ವಿರುದ್ಧದ ಹೋರಾಟ ದಲ್ಲಿ ಪಾಲ್ಗೊಂಡ ಅನುಭವ ಹೊಂದಿ ದ್ದರಿಂದ ಉತ್ತಮ ಆಡಳಿತ ನೀಡಲು ಸಾಧ್ಯ ವಾಯಿತು. ಅವರ ಕಾಲದಲ್ಲಿ ಕಾಂಗ್ರೆಸ್ ಸದೃಢವಾಗಿತ್ತು. ಈಗ ಮತ್ತೆ ಈ ಹಿಂದೆ ಇದ್ದ ಮಟ್ಟಕ್ಕೆ ಪಕ್ಷ ಕಟ್ಟಬೇಕಾಗಿದೆ. ಅದರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕಾ ಗಿಯೇ ಸದಸ್ಯತ್ವ ಅಭಿಯಾನ ನಡೆಸ ಲಾಗುತ್ತಿದೆ ಎಂದು ಹೇಳಿದರು.
2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪಕ್ಷದ ಸದಸ್ಯತ್ವ ಅಭಿಯಾನವನ್ನು ಗಂಭೀರ ವಾಗಿ ಪರಿಗಣಿಸಬೇಕು. ಪಕ್ಷದ ಕಾರ್ಯಕರ್ತ ರಿಗೆ ತರಬೇತಿ ನೀಡುವ ಅವಶ್ಯಕತೆಯಿದೆ. ಮೈಸೂರು ವಿಭಾಗÀ ಮಟ್ಟದ 5 ಜಿಲ್ಲೆಗಳ ಕಾರ್ಯಕರ್ತರಿಗೆ ತರಬೇತಿ ನೀಡಲು ಮೈಸೂ ರಲ್ಲಿ ಕಟ್ಟಡವೊಂದನ್ನು ವ್ಯವಸ್ಥೆ ಮಾಡಿದರೆ ತರಬೇತಿ ನೀಡುವ ಕೆಲಸ ನಾವು ಮಾಡು ತ್ತೇವೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ ಮಾತನಾಡಿ, ದೇಶಾದ್ಯಂತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 104ನೇ ಜನ್ಮದಿನವನ್ನು ಅರ್ಥಪೂರ್ಣ ವಾಗಿ ಆಚರಿಸಲಾಗುತ್ತಿದೆ. ದೇಶಕ್ಕೆ ಇಂದಿರಾ ಗಾಂಧಿ ನೀಡಿರುವ ಕೊಡುಗೆ ಅಪಾರ. 15 ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕÀ ದೇಶದ ಅಭಿವೃದ್ಧಿಗೆ ಬುನಾದಿ ಹಾಕಿದ್ದ ದಿಟ್ಟ ಮಹಿಳೆ. ಪ್ರಸ್ತುತ ಸಂದರ್ಭ ದಲ್ಲಿ ಬಿಜೆಪಿ ನಾಯಕರು ಏರ್ ಸ್ಟ್ರೈಕ್ ಸಂಬಂಧ ಮಾತನಾಡಿ ರಾಜಕೀಯ ಲಾಭ ಮಾಡಿಕೊಂಡರು. ಆದರೆ ಆ ಕಾಲದಲ್ಲಿಯೇ ಇಂದಿರಾಗಾಂಧಿ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ನಡೆಸಿದ್ದರು. ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ್ದರು. ಗರೀಬಿ ಹಠಾವೋ ಕಾರ್ಯಕ್ರಮ, 20 ಅಂಶದ ಕಾರ್ಯಕ್ರಮ, ಬ್ಯಾಂಕ್ ರಾಷ್ಟ್ರೀಕರಣ, ಹಸಿರು ಕ್ರಾಂತಿ ಮೂಲಕ ಆಹಾರ ಸಮಸ್ಯೆ ಹೋಗಲಾಡಿ ಸಿದರು. ಮೊದಲ ಬಾರಿಗೆ `ಆರ್ಯಭಟ’ ಕ್ಷಿಪಣಿ ತಯಾರಿಕೆ ಸೇರಿದಂತೆ ದೇಶದ ಭದ್ರತೆ ಹಲವು ಕಾರ್ಯಕ್ರಮ ಜಾರಿಗೊಳಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ಚೀನಾದವರು ನಮ್ಮ ದೇಶ ಗಡಿಯೊಳಗೆ ನುಗ್ಗಿ ಮನೆ ನಿರ್ಮಾಣ ಮಾಡುತ್ತಿದ್ದರೂ ಅತಿಕ್ರಮಣ ವನ್ನು ಎದುರಿಸುವ ಶಕ್ತಿ 56 ಇಂಚಿನ ಎದೆಯುಳ್ಳ ನಾಯಕನಿಗೆ ಇಲ್ಲ. ಆದರೆ ಇಂದಿರಾಗಾಂಧಿ ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದರು ಎಂದು ಸ್ಮರಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ ಮಾತನಾಡಿ, ಇಂದಿರಾಗಾಂಧಿ ಅವರ ಜೀವನ ಪುರುಷ ರಿಗೆ ಮಾದರಿ. ವಾಜಪೇಯಿ ಅವರಿಂದ ದುರ್ಗೆ ಎಂದು ಕರೆಸಿಕೊಂಡಿದ್ದರು. ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ರಣ ಕಹಳೆ ಊದಿದ್ದರು. ಇಂದು ಬಿಜೆಪಿ ರೈತರ ಎದುರು ಮಂಡಿಯೂರಿದೆ. ಇದು ಆರಂಭ ಎಂದರಲ್ಲದೆ, ಪಕ್ಷದಲ್ಲಿ ಮಹಿಳೆ ಯರಿಗೂ ಪ್ರಾಧಾನ್ಯತೆ ನೀಡಬೇಕು. ಭಿತ್ತಿಚಿತ್ರಗಳಲ್ಲಿ ಮಹಿಳಾ ನಾಯಕಿಯರ ಭಾವಚಿತ್ರ ಹಾಕಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತ ನಾಡಿ, 15 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಹೆಚ್.ಪಿ. ಮಂಜುನಾಥ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ವಾಸು, ಕಳಲೆ ಕೇಶವಮೂರ್ತಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಕೆ.ಆರ್.ನಗರದ ಮುಖಂಡ ಡಿ.ರವಿಶಂಕರ್, ಕೆ.ಹರೀಶ್‍ಗೌಡ, ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ಕವಿತಾ ಕಾಳೆ, ಮಹಿಳಾ ಘಟಕದ ಜಿಲ್ಲಾ ಧ್ಯಕ್ಷೆ ಲತಾ ಸಿದ್ದಶೆಟ್ಟಿ, ನಗರಾಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ತಾ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಮುಖಂಡರಾದ ಎಂ.ಎ.ಕಮಲಾ ಅನಂತರಾಮ್, ಈಶ್ವರ್ ಚಕ್ಕಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »