ಭಾರತೀಯರಿಗೆ ಭಾರತೀಯತೆ ಮುಖ್ಯವೇ ಹೊರತು ಎಡಪಂಥ, ಬಲಪಂಥ ಅಲ್ಲ
ಮೈಸೂರು

ಭಾರತೀಯರಿಗೆ ಭಾರತೀಯತೆ ಮುಖ್ಯವೇ ಹೊರತು ಎಡಪಂಥ, ಬಲಪಂಥ ಅಲ್ಲ

November 28, 2021

ಮೈಸೂರು,ನ.27(ಎಂಕೆ)-ಭಾರತೀಯ ರಿಗೆ ಭಾರತೀಯತೆ ಮುಖ್ಯವೇ ಹೊರತು ಎಡಪಂಥೀಯ ಹಾಗೂ ಬಲಪಂಥೀಯ ಎಂಬುದಲ್ಲ. ನಮಗೆ ಈ ಎಡ-ಬಲ ಎಂಬುದನ್ನು ನೀಡಿದವರು ಬ್ರಿಟಿಷರು ಎಂದು ಸುಪ್ರಿಂ ಕೋರ್ಟ್ ನ್ಯಾಯವಾದಿ ಜೆ.ಸಾಯಿ ದೀಪಕ್ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿನ ವಿಜ್ಞಾನ ಭವನದಲ್ಲಿ ಮಂಥನ ಮೈಸೂರು ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ `ಇಂಡಿಯಾ ದಟ್ ಈಸ್ ಭಾರತ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರು ಒಂದೇ ಆಗಿದ್ದರು. ನಂತರ ಬಂದ ಬ್ರಿಟಿಷ ರಿಂದಾಗಿ ಎಡಪಂಥೀಯ ಹಾಗೂ ಬಲ ಪಂಥೀಯ ಎಂಬುದು ನಮ್ಮಲ್ಲಿ ಉದ್ಭವ ವಾಯಿತು ಎಂದು ತಿಳಿಸಿದರು.

ನಾವುಗಳು ಇನ್ನೂ ಭಾರತೀಯತೆಯನ್ನು ಗುರುತಿಸಿಕೊಳ್ಳದೆ ದಾಸ್ಯತ್ವ ಪರಿಭಾವನೆ ಯಲ್ಲೇ ಇದ್ದೇವೆ. ನಮ್ಮ ಮನಸ್ಸಿನಲ್ಲಿ ದಾಸ್ಯತ್ವ ಜೇಡದಗೂಡಿನಂತೆ ಕಟ್ಟಿಕೊಂಡಿದೆ. ಭಾರತ ಇಂದು ಕವಲುದಾರಿಯಲ್ಲಿದ್ದು, ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಈಗ ಬಂದಿದೆ. ಏಕೆಂದರೆ ಯುವಕರೇ ಹೆಚ್ಚಾಗಿರುವ ಈ ದೇಶದಲ್ಲಿನ ಕೆಲ ವಿಶ್ವವಿದ್ಯಾನಿಲಯಗಳು ದೇಶ ವಿರೋಧಿ ಚಟುವಟಿಕೆಗಳಿಗೆ ಹೆಸರಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ನಾನು ಯಾವುದೇ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುತ್ತಿಲ್ಲ. ಅಲ್ಲದೆ ಎಡಪಂಥೀಯ ಹಾಗೂ ಬಲಪಂಥೀಯನೂ ಅಲ್ಲ. ಈಗಿನ ಸರ್ಕಾರ ಬರದಿದ್ದರೆ 2004ರಿಂದ 2014ರವರೆ ಗಿನ 10 ವರ್ಷಗಳನ್ನು ನಾವು ಹೇಗೆ ಕಳೆ ದೆವೋ ಅದೇ ರೀತಿ ಮತ್ತೆ ಕಾಲ ಕಳೆಯ ಬೇಕಾಗಿತ್ತು. ಸದ್ಯ 2014ರ ನಂತರ ಜನಾಭಿ ಪ್ರಾಯ ಬದಲಾಗಿರುವುದರಿಂದ ಎಡ ಪಂಥೀ ಯರಿಗೆ ತಳಮಳ ಉಂಟಾಗಿದ್ದು, ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗಿದೆ ಎಂದರು.

ಅಪಾಯಕಾರಿ ಜನ: ದೇಶದಲ್ಲಿಂದು ಒಂದೋ ಎಡಪಂಥೀಯ ಇಲ್ಲವೇ ಬಲ ಪಂಥೀಯನಾಗಬೇಕಾದ ವಾತಾವರಣ ನಿರ್ಮಾಣವಾಗಿದೆ. ಈ ಎರಡು ಕಡೆಗೂ ಸೇರದೆ ಗಾಳಿ ಬಂದಾಗ ತೂರಿಕೋ ಎಂಬಂತೆ ಇರುವವರು ಎಂದೆಂದಿಗೂ ಅಪಾಯಕಾರಿ ಜನ. ಇಂತಹವರು ದೇಶದಲ್ಲಿಂದು ಹೆಚ್ಚಾ ಗುತ್ತಿದ್ದಾರೆ ಎಂದು ಹೇಳಿದರು.

ಮುಖವಾಣಿಯಲ್ಲ: `ಇಂಡಿಯಾ ದಟ್ ಈಸ್ ಭಾರತ್’ ಪುಸ್ತಕ ಯಾವುದೇ ಪಕ್ಷದ ಮುಖವಾಣಿಯಲ್ಲ. ಭಾರತದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಮಾಡಿರುವ ಸಣ್ಣ ಪ್ರಯತ್ನ ವಾಗಿದೆ. ಇಂದಿನ ಯುವ ಪೀಳಿಗೆ ಎಡ ಅಥವಾ ಬಲ ಎನ್ನದೆ ಭಾರತೀಯತೆಯನ್ನು ಹುಡುಕಿ ಮುನ್ನೆಲೆಗೆ ತರಬೇಕು ಎಂದರು.

ಅಸ್ತಿತ್ವ ಉಳಿಸಿಕೊಂಡಿವೆ: ಕರ್ನಾಟಕ ರಾಜ್ಯ ದಲ್ಲಿ ಮೈಸೂರು ಹಾಗೂ ಬೆಂಗಳೂರು ತನ್ನದೇ ಅಸ್ತಿತ್ವವನ್ನು ಉಳಿಸಿಕೊಂಡಿವೆ, ಹಾಗೆಯೇ ಸಮತೋಲನ ಕಾಯ್ದುಕೊಂಡಿವೆ. ಹೊರಗಡೆ ಯಿಂದ ಬರುವ ಆಲೋಚನೆಗಳನ್ನು ಸ್ವೀಕ ರಿಸುತ್ತಿವೆ. ಮೈಸೂರಿನಲ್ಲಿ ಪಾರಂಪರೀಕತೆ ಎಂಬುದು ಜೀವಂತವಾಗಿದ್ದು, ಹಳೆಯ ವಸ್ತು-ವಿಚಾರಗಳನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಮೆಚ್ಚುಗೆ ಮಾತು ಗಳನ್ನಾಡಿದರು. ಮೈಸೂರು ಹಾಗೂ ತಿರು ವಾಂಕೂರ್ ರಾಜವಂಶಸ್ಥರು ವಿನಯಶೀಲರು, ಮಾನವೀಯತೆ ಹಾಗೂ ಧರ್ಮ ಉಳಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ಅಭಿಪ್ರಾಯ ಪಟ್ಟರು. ಈಗ ಬಿಡುಗಡೆಯಾಗಿರುವ ‘ಇಂಡಿಯಾ ದಟ್ ಈಸ್ ಭಾರತ್’ ಪುಸ್ತಕ ಮೊದಲನೇ ಹಂತದಾಗಿದ್ದು, ಇನ್ನೂ ಎರಡು ಪುಸ್ತಕಗಳು ಹೊರ ಬರಲಿವೆ ಎಂದರು. ವಿಜಯ ವಿಠಲ ವಿದ್ಯಾಸಂಸ್ಥೆ ಕಾರ್ಯದರ್ಶಿ ವಾಸುದೇವಭಟ್ ಕಾರ್ಯಕ್ರಮದಲ್ಲಿದ್ದರು.

Translate »