ನ.27ಕ್ಕೆ ಮೈಸೂರಲ್ಲಿ ಪ್ರಸಿದ್ಧ ನ್ಯಾಯವಾದಿ ಸಾಯಿ ದೀಪಕ್ ಅವರ `ಇಂಡಿಯಾ  ದಟ್ ಈಸ್ ಭಾರತ್’ ಪುಸ್ತಕ ಬಿಡುಗಡೆ
ಮೈಸೂರು

ನ.27ಕ್ಕೆ ಮೈಸೂರಲ್ಲಿ ಪ್ರಸಿದ್ಧ ನ್ಯಾಯವಾದಿ ಸಾಯಿ ದೀಪಕ್ ಅವರ `ಇಂಡಿಯಾ ದಟ್ ಈಸ್ ಭಾರತ್’ ಪುಸ್ತಕ ಬಿಡುಗಡೆ

November 23, 2021

ಮೈಸೂರು,ನ.22-ಸುಪ್ರಿಂಕೋರ್ಟ್ ವಕೀಲ ಜೆ.ಸಾಯಿ ದೀಪಕ್ ಅವರ `ಇಂಡಿಯಾ ದಟ್ ಈಸ್ ಭಾರತ್’ ಪುಸ್ತಕ ನ.27ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ.

ಮಂಥನ ಮೈಸೂರು ಸಂಸ್ಥೆ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಅಂದು ಸಂಜೆ 5 ಗಂಟೆಗೆ ಆಯೋಜಿಸಿ ರುವ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಬಿಡುಗಡೆ ಮಾಡಲಿದ್ದು, ನಂತರ ಲೇಖಕ ಜೆ.ಸಾಯಿ ದೀಪಕ್ ಅವರೊಂದಿಗೆ ಸಂವಾದ ನಡೆಯಲಿದೆ.

ಸಾಯಿ ದೀಪಕ್, ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವಿ, ಖಾರಗ್‍ಪುರ ಐಐಟಿಯಿಂದ ಕಾನೂನು ಪದವಿ ಪಡೆದಿದ್ದಾರೆ. ಇಂಜಿನಿಯರಿಂಗ್ ಪದವಿ ನಂತರ ಕಾನೂನು ಸಂಸ್ಥೆಯ ಪಾಲುದಾರರಾದರು. ನಂತರ ತಮ್ಮದೇ `ಲಾ ಛೇಂಬರ್ಸ್ ಆಫ್ ಜೆ.ಸಾಯಿ ದೀಪಕ್’ ಸ್ಥಾಪಿಸಿ ಕಾನೂನು ಸೇವೆಗೆ ಮುಂದಾಗಿ, ಸುಪ್ರಿಂಕೋರ್ಟ್ ಅಲ್ಲದೆ ದೆಹಲಿ, ಮದ್ರಾಸ್ ಹೈಕೋರ್ಟ್‍ಗಳಲ್ಲಿ ಕಕ್ಷಿದಾರರ ಪರ ವಾದ ಮಂಡಿಸುತ್ತಾ ಬಂದರು. ಕಾನೂನಿನ ಎಲ್ಲಾ ಪ್ರಾಕಾರಗಳಲ್ಲೂ ಪರಿಣಿತಿ ಪಡೆದ ದೀಪಕ್, ಸಂವಿಧಾನಾತ್ಮಕ ಜೀವಿಸುವ ಹಕ್ಕಿನಡಿ ಭಾರತೀಯ ಸೇನಾಪಡೆಗಳ ಯೋಧರಿಗೆ ಸುರಕ್ಷತಾ ಸಲಕರಣೆ ಕಲ್ಪಿಸಬೇಕು. ಸುಪ್ರಿಂಕೋರ್ಟ್ ಸಾಂವಿಧಾನಿಕ ಪೀಠದೆದುರು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ದೂರು ಸಂಬಂಧ ರೆಡಿ ಟು ವೆಯಿಟ್ ಮಹಿಳಾ ಚಳವಳಿಗಾರರ ಪರ ವಾದ ಮಂಡಿಸಿ ದ್ದರು. ಅಲ್ಲದೆ ತ್ರಿವಂಕೂರ್ ರಾಜಮನೆತನ ಹಾಗೂ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೂ ಇರುವ ಸಂಬಂಧ ವಿಷಯದಲ್ಲಿ ದೇವಸ್ಥಾನದ ಮುಖ್ಯ ತಂತ್ರಿ ಹಾಗೂ ಇಂಡಿಕ್ ಸಂಘಟನೆ ಗಳ ಪರ ವಾದ ಮಾಡಿದ್ದರು. ನ್ಯಾಷನಲ್ ಐಪಿಆರ್ ಪಾಲಿಸಿ ಜಾರಿ ಸಂಬಂಧವೂ ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಪ್ರವರ್ಧನೆ ಇಲಾಖೆ ಯಲ್ಲೂ ತೊಡಗಿಸಿಕೊಂಡಿದ್ದರು. ಈ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ.

Translate »