ಹಾಸನ ಜಿಲ್ಲಾ ಬಳಗಕ್ಕೆ ಮುಡಾದಿಂದ ಸಿಎ ನಿವೇಶನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ
ಮೈಸೂರು

ಹಾಸನ ಜಿಲ್ಲಾ ಬಳಗಕ್ಕೆ ಮುಡಾದಿಂದ ಸಿಎ ನಿವೇಶನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ

November 23, 2021

ಮೈಸೂರು,ನ.22(ಪಿಎಂ)-ಮೈಸೂರಿನ ಹಾಸನ ಜಿಲ್ಲಾ ಬಳಗಕ್ಕೆ ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಕರ್ಯ (ಸಿಎ) ನಿವೇಶನ ಕಲ್ಪಿಸಿ ಕೊಡುವ ಪ್ರಾಮಾ ಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಲ್.ನಾಗೇಂದ್ರ ತಿಳಿಸಿದರಲ್ಲದೆ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲೇ ನಿವೇಶನ ಲಭ್ಯವಾದರೆ, ತಮ್ಮ ಶಾಸಕರ ನಿಧಿಯಿಂದ ಅನುದಾನ ಕಲ್ಪಿಸುವ ಭರವಸೆಯನ್ನೂ ನೀಡಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿ ನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಹಾಸನ ಜಿಲ್ಲಾ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬಳಗದ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ಯತೀತವಾಗಿ ಎಲ್ಲಾ ಸಮುದಾಯ ಗಳೂ ಒಳಗೊಂಡಂತೆ ಹಾಸನ ಜಿಲ್ಲಾ ಬಳಗ ಹೆಸರಿನಲ್ಲಿ ಸಂಘಟನೆ ಆಗಿರು ವುದು ಶ್ಲಾಘನೀಯ. ಬಳಗಕ್ಕೆ ನನ್ನಿಂದ ಸಾಧ್ಯವಿರುವ ಅಗತ್ಯ ಸಹಕಾರ ನೀಡುತ್ತೇನೆ. ಬಳಗಕ್ಕೆ ಸಿಎ ನಿವೇಶನ ಕಲ್ಪಿಸುವ ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನ ಮಂಜೂರಾದರೆ, ಕಟ್ಟಡ ನಿರ್ಮಾಣಕ್ಕೂ ಶಾಸಕರ ನಿಧಿಯಡಿ ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಹಾಸನ ನಮಗೆ ದೂರದ ಊರು ಎನ್ನಿಸುವುದಿಲ್ಲ. ಅದೂ ಹಳೇ ಮೈಸೂ ರಿನ ಒಂದು ಪ್ರಮುಖ ಭಾಗ. ಬಳಗದ ಅಧ್ಯಕ್ಷೆಯಾಗಿರುವ ಪಿ.ಶಾರದಮ್ಮನವರು ಶಿಕ್ಷಣ ಇಲಾಖೆ ಅಧಿಕಾರಿಯಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ, ಹೆಸರು ಗಳಿಸಿದವರು ಎಂದರು.

ಹೆಚ್‍ಡಿಡಿ ಪಿಎಂ ಆದಾಗ ಸಂಸತಪಟ್ಟೆ: ಹೆಚ್.ಡಿ.ದೇವೇಗೌಡರು ದೇಶದ ಪ್ರಧಾನಿ ಯಾಗುವ ಮೂಲಕ ಕನ್ನಡ ನಾಡು ಮತ್ತು ಹಾಸನ ಜಿಲ್ಲೆಗೆ ವಿಶೇಷ ಗೌರವ ತಂದುಕೊಟ್ಟಿದ್ದಾರೆ. ನಾನು ಬಿಜೆಪಿ ಪಕ್ಷ ದವನಾಗಿ ಮೂರು ಬಾರಿ ಪಾಲಿಕೆ ಸದಸ್ಯ, ಒಮ್ಮೆ ಮುಡಾ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ ದ್ದೇನೆ. ಇದೀಗ ಶಾಸಕನಾಗಿದ್ದೇನೆ. ನಾನು ಅನ್ಯ ಪಕ್ಷದವನಾದರೂ ದೇವೇಗೌಡರು ದೇಶದ ಪ್ರಧಾನಿಯಾದ ಸಂದರ್ಭದಲ್ಲಿ ನಮ್ಮ ಕುಲಬಾಂಧವರೊಬ್ಬರು ಇಂತಹ ಉನ್ನತ ಸ್ಥಾನ ಅಲಂಕರಿಸಿದ ಹಿನ್ನೆಲೆ ಯಲ್ಲಿ ಅತ್ಯಂತ ಸಂಸತಪಟ್ಟವನಲ್ಲಿ ನಾನೂ ಒಬ್ಬ. ಅಂದು ರಾಜ್ಯದ ಐದು ಕೋಟಿ ಕನ್ನಡಿ ಗರು ಅತ್ಯಂತ ಸಂತಸಪಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷೆ ಪಿ.ಶಾರದಮ್ಮ ಮಾತನಾಡಿ, ಹಾಸನ ಜಿಲ್ಲೆ ಮೂಲದವರಾಗಿ ಮೈಸೂರಿನಲ್ಲಿ ನೆಲೆಸಿ ರುವ ನಮ್ಮ ಬಳಗದ ಸದಸ್ಯರ ಎಲ್ಲಾ ವರ್ಗದ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂದು ಪ್ರತಿಭಾ ಪುರಸ್ಕಾರ ನೀಡಲಾಗಿದೆ. ನಮ್ಮ ಜಿಲ್ಲೆಯ ಎಲ್ಲರೂ ಒಂದೆಡೆ ಸೇರಿ ಸಂಘಟಿತರಾಗುವುದು ಮತ್ತು ಸಾಂಸ್ಕøತಿಕ ಚಟುವಟಿಕೆ ನಡೆಸುವುದು ಸಂಘದ ಉದ್ದೇಶ. ಬಳಗದ ಚಟುವಟಿಕೆಗಳಿಗೆ ಸ್ವಂತ ಸ್ಥಳ ಇಲ್ಲವಾಗಿದೆ. ಹಾಗಾಗಿ ಸುಮಾರು 10 ವರ್ಷಗಳಿಂದ ಬಳಗಕ್ಕೆ ಮುಡಾದಿಂದ ಸ್ವಂತ ನಿವೇಶನ ಪಡೆಯಲು ಪ್ರಯತ್ನಿ ಸುತ್ತಿದ್ದೇವೆ. ಇದೀಗ ಮತ್ತೆ ಅರ್ಜಿ ಹಾಕಿ ದ್ದೇವೆ ಎಂದು ಹೇಳಿದರು.

ಬಯಸಿದ ನಿವೇಶನ ಪಡೆಯುವುದು ಕಷ್ಟವಿದೆ. ಹಾಗಾಗಿ ಬಳಗದ ಕಾರ್ಯ ಕಾರಿ ಸಮಿತಿ ಸದಸ್ಯರು ಶಕ್ತಿಮೀರಿ ಧನ ಸಹಾಯ ಮಾಡಿದ್ದಾರೆ. ನಿವೇಶನಕ್ಕೆ ಕನಿಷ್ಠ 60 ಲಕ್ಷ ರೂ. ಅಗತ್ಯವಿದ್ದು, ಇಷ್ಟು ಹಣ ಹೊಂದಿಸಿ, ನಿವೇಶನ ಪಡೆದರೆ ಕಟ್ಟಡ ನಿರ್ಮಾಣಕ್ಕೆ ಹಣದ ತೊಂದರೆ ಇಲ್ಲ. ಕಾರಣ ಈಗಾಗಲೇ ಶಾಸಕರು ತಮ್ಮ ನಿಧಿ ಯಿಂದ ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ. ಹೀಗೆ ಜನಪ್ರತಿನಿಧಿಗಳ ನಿಧಿ ಯಿಂದ ಅನುದಾನ ಕೋರಿ ಕಟ್ಟಡ ನಿರ್ಮಾಣ ಮಾಡಬಹುದು. ನಿವೇಶನ ಪಡೆಯಲು ಎಲ್ಲರೂ ಸಾಧ್ಯವಾದ ಮಟ್ಟಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳಾದ ನಾಡಪ್ರಭು ಕೆಂಪೇ ಗೌಡ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್, ರೈಲ್ವೆ ಇಲಾಖೆ ಇಲಾಖೆ ಕಾರ್ಯಪಾಲಕ ಅಭಿಯಂತರ ಡಾ. ಎಂ.ಬಿ.ಮಂಜೇಗೌಡ ಮತ್ತು ಸುಮಿತ್ರಾ ರಮೇಶ್ ಅತಿಥಿಗಳಾಗಿ ಭಾಗವಹಿಸಿ, ತಮಗೆ ಮತ ನೀಡುವಂತೆ ಸಮುದಾಯ ದವರಲ್ಲಿ ಇದೇ ವೇಳೆ ಮನವಿ ಮಾಡಿದರು.

ಪ್ರತಿಭಾ ಪುರಸ್ಕಾರ: ಇದಕ್ಕೂ ಮುನ್ನ 2020 ಮತ್ತು 2021ನೇ ಸಾಲಿನಲ್ಲಿ ಎಸ್‍ಎಸ್ ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಬಳಗದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರ ಸ್ಕಾರ ನೀಡಲಾಯಿತು. ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ ಹೆಚ್ಚು ಅಂಕ ಗಳಿಸಿದವ ರನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಎಂದು ವಿಂಗಡಿಸಿ, ಕ್ರಮವಾಗಿ ಸಾವಿರ ರೂ, 750 ರೂ., 500 ರೂ. ನಗದು ಪುರಸ್ಕಾರ ನೀಡಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಸಾಧನೆಗಾಗಿ ಎನ್.ಧನುಷ್, ಎಂ.ಶ್ರೇಯಾಂಕ, ಧೃತಿ ರಮೇಶ್, ಎಸ್.ದೀವಿತ್, ಎಸ್‍ಎಸ್‍ಎಲ್‍ಸಿ ಯಲ್ಲಿ ಡಿ.ವೈಭವಿ, ಆರ್.ತೇಜಸ್, ಎಂ. ಹಿತೇಶ್, ಹೆಚ್.ಬಿ.ಗಗನ್, ಗ್ರೀಶ್ಮಾ ವಿಜಯ್ ಗೌಡ, ಎಸ್.ನಿಕಿತಾ, ಡಿ.ಆದಿತ್ಯಾ, ಬಿ. ಆರ್.ನೇಹಾ ರಮೇಶ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗೈರಾಗಿದ್ದ ವಿದ್ಯಾರ್ಥಿಗಳ ಪುರಸ್ಕಾರವನ್ನು ಅವರ ಪೋಷಕರು ಸ್ವೀಕರಿಸಿದರು.

ಅಲ್ಲದೆ, ಬಳಗಕ್ಕೆ ದೇಣಿಗೆ ನೀಡಿದ ಮಹಾಪೋಷಕರು ಮತ್ತು ಪೋಷಕರನ್ನು ಸನ್ಮಾನಿಸಲಾಯಿತು. ಜೊತೆಗೆ ಬಳಗಕ್ಕೆ 1 ಲಕ್ಷ ರೂ. ದೇಣಿಗೆ ಮತ್ತು ಬಳಗದ ಪ್ರತಿ ಕಾರ್ಯಕ್ರಮಕ್ಕೆ 25 ಸಾವಿರ ರೂ. ದೇಣಿಗೆ ನೀಡುತ್ತಿರುವ ಉದ್ಯಮಿಯೂ ಆದ ಬಳಗದ ಸದಸ್ಯ ಬಾಲಾಜಿ ಶೇಖರ್ ಅವರನ್ನೂ ಸನ್ಮಾನಿಸಲಾಯಿತು. ವಕೀಲ ಮ.ನ.ರಮೇಶ್, ಬಳಗದ ಗೌರವಾಧ್ಯಕ್ಷ ಬಿ.ಬಿ.ರಾಮಕೃಷ್ಣ, ಉಪಾಧ್ಯಕ್ಷರಾದ ಮೋದಾಮಣಿ, ಟಿ.ಎಸ್.ರಾಮಚಂದ್ರ, ಕೆ.ಇ.ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಬಿ.ಜಿ.ರಂಗೇಗೌಡ, ಖಜಾಂಚಿ ಕೆ.ಎನ್. ಅಣ್ಣೇಗೌಡ ಮತ್ತಿತರರು ಹಾಜರಿದ್ದರು.

Translate »