ಮೈಸೂರಲ್ಲಿ ಶ್ರದ್ಧಾಭಕ್ತಿಯಿಂದ ಕನಕದಾಸರ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ಶ್ರದ್ಧಾಭಕ್ತಿಯಿಂದ ಕನಕದಾಸರ ಜಯಂತಿ ಆಚರಣೆ

November 23, 2021

ಮೈಸೂರು,ನ.22(ಎಂಟಿವೈ)-ಮೈಸೂ ರಲ್ಲಿ ಸೋಮವಾರ ಎಲ್ಲೆಡೆ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ ವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕನಕದಾಸರ ಭಾವಚಿತ್ರ, ಪ್ರತಿಮೆಯನ್ನು ಪೂಜಿಸಿ ಗೌರವ ಸಮರ್ಪಿಸಲಾಯಿತು.

ಮೈಸೂರು ವಿವಿ ವಿಜ್ಞಾನ ಭವನದಲ್ಲಿ: ಮೈಸೂರು ವಿಶ್ವವಿದ್ಯಾನಿಲಯದ ವತಿ ಯಿಂದ ಮಾನಸಗಂಗೋತ್ರಿ ಆವರಣದಲ್ಲಿ ರುವ ವಿಜ್ಞಾನ ಭವನದಲ್ಲಿ ಸೋಮವಾರ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮೈವಿವಿ ಕುಲಪತಿ ಪೆÇ್ರ.ಜಿ.ಹೇಮಂತಕುಮಾರ್, ಕನದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತ ನಾಡಿ, ಕನಕದಾಸರ ಕೊಡುಗೆಗಳನ್ನು ಚಿರ ಸ್ಥಾಯಿಗೊಳಿಸಲು 2007ರಲ್ಲಿ ಸ್ಥಾಪನೆ ಯಾದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಸಂತ ಕನಕದಾಸರನ್ನು ಕುರಿತು ಹಲವಾರು ಸಿಡಿ ಹೊರತಂದಿದೆ. ಅಲ್ಲದೆ, ಕನಕದಾಸರ ಕುರಿತ ಪುಸ್ತಕಗಳು ಇಂಗ್ಲಿಷ್, ಮರಾಠಿ, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲೂ ಅನು ವಾದಗೊಂಡಿವೆ. ಕನಕದಾಸರ ಚಿಂತನೆ ಗಳನ್ನು ಅನ್ಯಭಾಷಿಕರಿಗೂ ತಲುಪಿಸುವುದು ಇದರಿಂದ ಸಾಧ್ಯವಾಗಿದೆ. ಬಸವೇಶ್ವರರ ತತ್ವ ಮತ್ತು ಬಹುಭಾಷೆಗಳ ಅನುವಾದದ ಮೂಲಕ ‘ಹೊರನಾಡಿನವರಿಗೆ ತಲು ಪುತ್ತಿರುವುದೂ ಸಂತೋಷದ ವಿಚಾರ. ಆ ಮೂಲಕ ನಮ್ಮ ಸಂತರು, ಶರಣರು ಹೇಗೆ ಕರ್ನಾಟಕದ ಕೀರ್ತಿ ಎಲ್ಲೆಡೆ ಹಬ್ಬಲು ಕಾರಣಕರ್ತರಾಗಿದ್ದಾರೆ ಎಂಬು ದನ್ನು ತಿಳಿಯಬಹುದು ಎಂದರು.

ಕನಕದಾಸರು ‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ನೇನಾದರೂ ಬಲ್ಲಿರಾ?’ ಎಂದು ಕೇಳಿದ ಪ್ರಶ್ನೆ ಶತಮಾನಗಳನ್ನು ದಾಟಿ ಇಂದಿಗೂ ನಮಗೆ ಕೇಳಿಸುವಂತಿದೆ. ಆ ಪ್ರಶ್ನೆ ಮತ್ತು ಅವರು ಸಾರಿದ ಸಂದೇಶದ ಕುರುಹಾಗಿ ಕನಕದಾಸರ 15 ಅಡಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕನಕದಾಸರು ಶಂಖ ವನ್ನು ಮೊಳಗಿಸುತ್ತಿರುವಂಥ ಪ್ರತಿಮೆ ಸಾಂಕೇತಿಕವಾದದ್ದು. ಹಾಗೆಯೇ ಬಂಕಾ ಪುರ ಕ್ರಾಸ್‍ನಲ್ಲಿ ಕನಕದಾಸರು ತಂಬೂರಿ ಮೀಟಿ ಹಾಡುತ್ತಿರುವ ಒಂದು ಪ್ರತಿಮೆ ಇದೆ. ಇದೂ ಸಹ ಭಕ್ತ ಸಮೂಹದಲ್ಲಿ ಬೆರಗುಂಟು ಮಾಡುತ್ತದೆ. ಅಲ್ಲದೆ, ಬಾಡ ಮತ್ತು ಕಾಗಿನೆಲೆಯಲ್ಲಿರುವ 28 ಕಟ್ಟಡಗಳು ಕನಕದಾಸರ ಹೆಜ್ಜೆ ಗುರುತು ಮೂಡಿಸಿದೆ. ತಿಂಗಳಿಗೆ ಸುಮಾರು 6 ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪೆÇ್ರ.ಆರ್.ಶಿವಪ್ಪ, ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಪೆÇ್ರ.ಸಿ. ನಾಗಣ್ಣ, ಹಿಂದುಳಿದ ವರ್ಗಗಳ ಘಟಕ ಸಂಯೋಜನಾಕಾರಿ ಪೆÇ್ರ.ಬಿ.ವಿ.ಸುರೇಶ್ ಹಾಗೂ ಮೈಸೂರು ವಿವಿ ಸಹ ಪ್ರಾಧ್ಯಾ ಪಕರು ಉಪಸ್ಥಿತರಿದ್ದರು.

ಮಹಾರಾಜ ಸಂಜೆ ಕಾಲೇಜು: ಜೀವನ ದಲ್ಲಿ ಕನಕದಾಸರ ತತ್ವಗಳನ್ನು ಅಳವಡಿ ಸಿಕೊಳ್ಳಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಕರೆ ನೀಡಿದರು.

ವಿಶ್ವ ಮಾನವ ಮೈಸೂರು ವಿಶ್ವವಿದ್ಯಾ ನಿಲಯ ನೌಕರರ ವೇದಿಕೆಯು ಸಂಜೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತ ನಾಡಿ, ಕನಕದಾಸರು ಶ್ರೇಷ್ಠ ಸಂತರು. ಅವರ ಕೀರ್ತನೆಗಳು ಬದುಕಿನ ದರ್ಶನ ಮಾಡಿಸುತ್ತವೆ. ಅವುಗಳನ್ನು ಅರ್ಥ ಮಾಡಿ ಕೊಂಡು ಪಾಲಿಸಬೇಕು ಎಂದರು.

ಮೈಸೂರು ವಿವಿ ಹಣಕಾಸು ಅಧಿಕಾರಿ ಡಾ. ಸಂಗೀತ ಗಜಾನನ ಭಟ್, ಪರೀ ಕ್ಷಾಂಗ ಕುಲಸಚಿವ ಪೆÇ್ರ.ಎ.ಜಿ. ಜ್ಞಾನ ಪ್ರಕಾಶ್, ವಿವಿ ಸಂಜೆ ಕಾಲೇಜು ಪ್ರಾಂಶು ಪಾಲ ಡಾ.ಹೆಚ್.ಸಿ.ದೇವರಾಜೇಗೌಡ ಮಾತ ನಾಡಿದರು. ಇದೇ ವೇಳೆ ಮೈವಿವಿ ಪಿಹೆಚ್.ಡಿ ಸಂಯೋಜನಾಕಾರಿ ಡಾ.ಹೆಚ್. ಪಿ.ಜ್ಯೋತಿ, ಪ.ಜಾತಿ ಮತ್ತು ವರ್ಗ ವಿಭಾಗದ ಉಪ ಕುಲಸಚಿವ ಡಾ.ಮಹದೇವಮೂರ್ತಿ, ಸಿದ್ಧಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಪಿ. ಚಂದ್ರಶೇಖರ್, ಡಾ.ಪುರುಷೋತ್ತಮ್, ಹಿರಿಯ ವಕೀಲ ಎಸ್.ಉಮೇಶ್, ಮೈವಿವಿ ಆಡಳಿತ ವಿಭಾಗದ ಸಹಾಯಕ ಕುಲಸಚಿವೆ ಜಯಂತಿ, ಅಧೀಕ್ಷಕಿ ನೇತ್ರಾ, ಹಿರಿಯ ಸಹಾಯಕಿ ಹೇಮಲತಾ ಹಣಕಾಸು ವಿಭಾ ಗದ ಅಧೀಕ್ಷಕಿ ಆರ್.ರತ್ನಾ, ನಾಗರತ್ನ, ಹೇಮಾವತಿ, ಪರೀಕ್ಷಾ ವಿಭಾಗದ ಅಧೀಕ್ಷಕಿ ಯರಾದ ಹೇಮಲತಾ, ಚಿಕ್ಕಜ್ಯೋತಿ, ಹಿರಿಯ ಸಹಾಯಕರಾದ ಟಿ.ಎಲ್.ಮೀನಾ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವೇದಿಕೆ ಅಧ್ಯಕ್ಷ ಆರ್.ವಾಸುದೇವ, ಮಹಾರಾಣಿ ಕಾಲೇಜು ಗಣಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದರಾಜು, ಡಾ.ನಿಂಗರಾಜು, ಬಿ.ಎಸ್. ದಿನಮಣಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಉಪಾಧ್ಯಕ್ಷ ಭಾಸ್ಕರ್, ಕಾರ್ಯ ದರ್ಶಿ ವಿನೋದ್, ಸಹ ಕಾರ್ಯದರ್ಶಿ ಯೋಗೇಶ್, ಭರತ್‍ರಾಜ್, ಗೌರವ ಕಾರ್ಯದರ್ಶಿ ಸತ್ಯರಾಜ್, ಸಂಚಾಲಕ ವಿವೇಕ್, ಖಜಾಂಚಿ ಶಿವಕುಮಾರ್, ನಿರ್ದೇ ಶಕರಾದ ಗಣೇಶ್, ಮಧುಸೂದನ್, ಚೆಲುವಾಂಬಿಕೆ, ಚಿದಾನಂದ, ಹರೀಶ್, ಅಭಿಷೇಕ್, ದಾಮಿನಿ, ರಿಷಿರಾಜ್, ಆನಂದ್ ಇನ್ನಿತರರರು ಉಪಸ್ಥಿತರಿದ್ದರು.

Translate »