ಮೈಸೂರು, ಸೆ.8(ವೈಡಿಎಸ್)-ಜಿಲ್ಲೆ ಯಲ್ಲಿ ನೂತನ ಕೈಗಾರಿಕಾ ವಸಾಹತು ಸ್ಥಾಪಿಸು ವಂತೆ ಅನೇಕ ಅರ್ಜಿಗಳು ಬಂದಿವೆ. ಕಾಸಿಯಾ ಮತ್ತು ಸ್ಥಳೀಯ ಕೈಗಾರಿಕಾ ಸಂಘಗಳೊಂ ದಿಗೆ ಸಮಾಲೋಚಿಸಿ ಸೂಕ್ತ ಜಾಗ ಸಿಕ್ಕರೆ 50 ಎಕರೆಯಲ್ಲಿ `ಕೈಗಾರಿಕಾ ವಸಾಹತು’ ಅಭಿವೃದ್ಧಿಪಡಿಸಲಾಗುವುದು ಎಂದು ಕೆಎಸ್ ಎಸ್‍ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಿ.ಶಿರೂರ್ ಭರವಸೆ ನೀಡಿದರು.
ಸಯ್ಯಾಜಿರಾವ್ ರಸ್ತೆಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕೆಎಎಸ್ ಎಸ್‍ಐಎ), ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ `ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶ ಗಳು’ ಕುರಿತು ಅರಿವು ಮೂಡಿಸುವ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಲ್ಲಿ 190 ಕೈಗಾ ರಿಕಾ ವಸಾಹತು ಪ್ರಾರಂಭಿಸಲಾಗಿದೆ. ಮುಖ್ಯವಾಗಿ ಮೈಸೂರಿನಲ್ಲಿ 3 ಕೈಗಾರಿಕಾ ವಸಾಹತುಗಳು ಇವೆ. ಆದರೆ, 2005 ರಿಂದ ಹೊಸ ಕೈಗಾರಿಕಾ ವಸಾಹತು ಪ್ರಾರಂಭಿಸಿಲ್ಲ ಎಂದರು.
ಕೋವಿಡ್ ಹಿನ್ನೆಲೆ ಕೈಗಾರಿಕೋದ್ಯಮಿ ಗಳು ಅನೇಕ ಸವಾಲು ಎದುರಿಸುತ್ತಿದ್ದು, ಕೈಗಾ ರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳಿದ್ದರೂ ಮಂಡಳಿ ಗಮನಕ್ಕೆ ತನ್ನಿ. ಪರಿಹಾರ ಒದಗಿಸಲು ಕ್ರಮ ವಹಿಸ ಲಾಗುವುದು ಎಂದು ಭರವಸೆ ನೀಡಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಎಂಎಸ್‍ಎಂಇ) ನಿರ್ದೇಶಕರಾದÀ ಆರ್. ವಿನೋತ್ ಪ್ರಿಯಾ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ, ನೂತನ ಕೈಗಾರಿಕಾ ನೀತಿ 2020-25ರಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಹೆಚ್ಚಿನ ಮಹತ್ವ ನೀಡುವ ಜತೆಗೆ ಆರ್ಥಿಕ ಪುನಶ್ಚೇತನಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಸಣ್ಣ ಕೈಗಾರಿಕೋದ್ಯಮ ದಲ್ಲಿ ಮಾರಾಟಗಾರರ ಅಭಿವೃದ್ಧಿ, ನಿರಂತರ ಉದ್ಯೋಗಾವಕಾಶ ಮತ್ತು ಉತ್ಪಾದನೆಗೆ ಅನುಕೂಲವಾಗುವ ಅಂಶಗಳನ್ನು ಒಳ ಗೊಂಡಿದೆ ಎಂದರು.
ಲಾಕ್‍ಡೌನ್‍ನಿಂದಾಗಿ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ನಷ್ಟ ಅನು ಭವಿಸಿವೆ. ಇತ್ತೀಚೆಗಷ್ಟೇ ಕೈಗಾರಿಕಾ ವಲಯ ದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಈ ವೇಳೆ ಇಲಾಖೆಯಿಂದ ಯಾವ ರೀತಿ ಬೆಂಬಲ ನೀಡಬೇಕು ಎಂಬುದನ್ನು ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ಕೌಶಲಾಭಿವೃದ್ಧಿಗೆ ಸಂಬಂಧಿಸಿ ಕೈಗಾರಿಕೆ ಗಳಲ್ಲಿ ಯುವಕರಿಗೆ ತರಬೇತಿ ನೀಡಿ, ಅಲ್ಲಿಯೇ ಉದ್ಯೋಗ ನೀಡಬಹುದು ಎಂಬ ಸಲಹೆಗಳು ಬಂದಿದ್ದು, ಈ ನೀತಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡಿರುವ ಎಂಎಸ್‍ಎಂಇ ಚಟುವಟಿಕೆಗಳನ್ನು ಗಮ ನಿಸಬೇಕು ಎಂದರು.
ಹಿಂದೆ ಉದ್ಯಮ ಪ್ರಾರಂಭಿಸಲು ಅನೇಕ ಸವಾಲು ಎದುರಾಗುತ್ತಿದ್ದವು. ಪ್ರಸ್ತುತ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಫೇಸ್‍ಬುಕ್ ಪೇಜ್ ತೆರೆಯಲಾಗಿದ್ದು, ಇಲ್ಲಿ ಕೈಗಾರಿ ಕೋದ್ಯಮಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು, ಸಲಹೆಗಳನ್ನೂ ನೀಡಬಹುದು ಎಂದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕ ಹೆಚ್.ಎಂ.ಶ್ರೀನಿವಾಸ ಮಾತನಾಡಿದರು.
ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು, ಎಸ್‍ಬಿಐ ಡಿಸ್ಟ್ರಿಕ್ಸ್ ಸೇಲ್ಸ್ ಹಬ್‍ನ ವಲಯ ವ್ಯವಸ್ಥಾಪಕ ಬಿನ್ನಿ ಜಾನ್ ಮ್ಯಾಥ್ಯು, ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಎನ್.ಆರ್.ಜಗದೀಶ್, ನಗರ ಜಂಟಿ ಕಾರ್ಯದರ್ಶಿ ಪಿ.ಎನ್.ಜೈಕುಮಾರ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಚನ್ನ ಬಸಪ್ಪ ಸಿ.ಹೊಂಡದಕಟ್ಟಿ, ಖಜಾಂಚಿ ಎಸ್.ಶಂಕರನ್ ಮತ್ತಿತರರಿದ್ದರು.