ಸದ್ಯ ಮೈಸೂರಲ್ಲಿ ಸೋಂಕು ಇಳಿಮುಖ
ಮೈಸೂರು

ಸದ್ಯ ಮೈಸೂರಲ್ಲಿ ಸೋಂಕು ಇಳಿಮುಖ

June 29, 2021

ಮೈಸೂರು, ಜೂ.28(ಎಸ್‍ಬಿಡಿ)- ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ಕೊರೊನಾ ಸೋಂಕು ತಗ್ಗಿದ್ದು, ದಿನದ ಪಾಸಿ ಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಗಣ ನೀಯ ಇಳಿಕೆಯಾಗು ತ್ತಿದೆ. ಮೈಸೂರು ಜಿಲ್ಲೆ ಯಲ್ಲಿ ಸೋಮವಾರ 282 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿ ತರ ಸಂಖ್ಯೆ 1,65,792ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ 576 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 1,59,288 ಮಂದಿ ಗುಣಮುಖ ರಾಗಿದ್ದಾರೆ. ಮತ್ತೆ 8 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2,153ಕ್ಕೆ ಹೆಚ್ಚಿದೆ. ಜಿಲ್ಲೆಯಲ್ಲಿನ್ನು 4,351 ಜನರಲ್ಲಿ ಕೊರೊನಾ ಸೋಂಕು ಸಕ್ರಿಯ ವಾಗಿದ್ದು, ಇವರಲ್ಲಿ 2,668 ಮಂದಿ ಹೋಂ ಐಸೊಲೇಷನ್‍ನಲ್ಲಿ, 442 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹಾಗೂ ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ವಿವರ: ಬಾಗಲಕೋಟೆ 08, ಬಳ್ಳಾರಿ 19, ಬೆಳಗಾವಿ 68, ಬೆಂಗಳೂರು ಗ್ರಾಮಾಂತರ 55, ಬೆಂಗಳೂರು ನಗರ 563, ಬೀದರ್ 03, ಚಾಮರಾಜನಗರ 55, ಚಿಕ್ಕ ಬಳ್ಳಾಪುರ 27, ಚಿಕ್ಕಮಗಳೂರು 83, ಚಿತ್ರ ದುರ್ಗ 45, ದಕ್ಷಿಣಕನ್ನಡ 263, ದಾವಣ ಗೆರೆ 81, ಧಾರವಾಡ 28, ಗದಗ 17, ಹಾಸನ 138, ಹಾವೇರಿ 13, ಕಲಬುರಗಿ 04, ಕೊಡಗು 150, ಕೋಲಾರ 79, ಕೊಪ್ಪಳ 55, ಮಂಡ್ಯ 95, ಮೈಸೂರು 282, ರಾಯಚೂರು 09, ರಾಮನಗರ 14, ಶಿವಮೊಗ್ಗ 194, ತುಮಕೂರು 99, ಉಡುಪಿ 71, ಉತ್ತರಕನ್ನಡ 52, ವಿಜಯಪುರ 02 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 04 ಸೇರಿದಂತೆ ರಾಜ್ಯದಲ್ಲಿಂದು 2,576 ಪಾಸಿ ಟಿವ್ ಪ್ರಕರಣ ವರದಿಯಾಗಿವೆ. ಇದರೊಂ ದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28,37,206ಕ್ಕೆ ಏರಿಕೆಯಾಗಿದೆ. ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದ 5,933 ಮಂದಿ ಸೇರಿ 27,04,755 ಸೋಂಕಿತರು ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಕಾರಿ ಯಾಗದೆ ಇಂದು 93 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 34,836ಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 97,592ಕ್ಕೆ ಇಳಿಕೆಯಾಗಿದೆ.

Translate »