ಯುವಕರಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ
ಮೈಸೂರು

ಯುವಕರಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ

June 29, 2021

ಮೈಸೂರು, ಜೂ.28(ಎಸ್‍ಪಿಎನ್)- ಯುವ ಜನರಿಂದ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮೈಸೂರು ಚಾಮುಂಡಿಬೆಟ್ಟದ ತಪ್ಪಲಿ ನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ವತಿ ಯಿಂದ ಆಯೋಜಿಸಿದ್ದ ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರ ಸೇವಾ ಕಾರ್ಯದಲ್ಲಿ ತೊಡಗಿದ್ದ 96 ಮಂದಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂಸೇವ ಕರು ನಿಸಾರ್ಥ ಸೇವೆ ಸಲ್ಲಿಸಿದ್ದಾರೆ. ಇಂತಹ ಯುವಕ ತಂಡ ಚಾಮರಾಜನಗರದಲೂ ಇದ್ದಿದ್ದರೆ ಕೋವಿಡ್‍ನಿಂದ ಮೃತಪಟ್ಟ ಹಲ ವರನ್ನು ಬದುಕಿಸಬಹುದಿತ್ತು. ಪ್ರಜ್ಞಾವಂತ ಮತ್ತು ಜವಾಬ್ದಾರಿಯುತ ಸಮಾಜ ಕಟ್ಟಲು ಯುವಕ ಪಾತ್ರ ಅವಶ್ಯಕತೆ ಇದೆ ಎಂದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಕೋವಿಡ್-19 ಸಂಕಷ್ಟ ಸಂದರ್ಭದಲ್ಲಿ ಅನೇಕ ಸ್ವಯಂ ಸೇವಾ ಸಂಸ್ಥೆ ಗಳು ಜನರ ಕಷ್ಟಗಳಿಗೆ ಧಾವಿಸಿರುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಕಾರ್ಯಕರ್ತರ ಸೇವೆ ಅಭಿನಂದನೆಗೆ ಅರ್ಹರು ಎಂದರು.

ಈ ವೇಳೆ ಚಾಮರಾಜನಗರ ವೈದ್ಯ ಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಜಿ.ಎಂ.ಸಂಜೀವ್, ಯೂತ್ ಫಾರ್ ಸೇವಾ ಸಂಸ್ಥೆಯ ಟ್ರಸ್ಟಿ ಹಾಗೂ ರಾಷ್ಟೀಯ ಖಜಾಂಚಿ ಹರೀಶ್ ಶೆಣೈ, ಜಿಲ್ಲಾ ಸಂಯೋಜಕ ಕುಮಾರ ಸತೀಶ ಮೇತ್ರಿ, ಸ್ವಯಂಸೇವಕರಾದ ಚಿರಂಜೀವಿ, ರಾಮಚಂದ್ರ, ವಿಜಯಲಕ್ಷ್ಮಿ, ಭೂಮಿಕಾ, ಶ್ರೀವಾಣಿ ಇನ್ನಿತರರು ಉಪಸ್ಥಿತರಿದ್ದರು.

Translate »