ವಿಜಯನಗರ 4ನೇ ಹಂತ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ತೆರವು 8 ಕೋಟಿ ಮೌಲ್ಯದ ಆಸ್ತಿ ಮುಡಾ ವಶಕ್ಕೆ
ಮೈಸೂರು

ವಿಜಯನಗರ 4ನೇ ಹಂತ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ತೆರವು 8 ಕೋಟಿ ಮೌಲ್ಯದ ಆಸ್ತಿ ಮುಡಾ ವಶಕ್ಕೆ

June 29, 2021

ಮೈಸೂರು,ಜೂ.28(ಆರ್‍ಕೆ)- ಮುಡಾ ಸ್ವಾಧೀನಪಡಿಸಿಕೊಂಡಿದ್ದ ಜಾಗ ಒತ್ತುವರಿ ಮಾಡಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಗಳನ್ನು ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಮೈಸೂರು ತಾಲೂಕು, ಹಿನಕಲ್ ಗ್ರಾಮದ ಸರ್ವೆ ನಂ.9ರಲ್ಲಿ ಬರುವ ವಿಜಯನಗರ 4ನೇ ಹಂತ ಬಡಾವಣೆಯಲ್ಲಿ 33 ಗುಂಟೆ ಒತ್ತುವರಿ ಮಾಡಿ ಅಲ್ಲಿ ಶೆಡ್‍ಗಳನ್ನು ನಿರ್ಮಿಸಿ ಕೆಲವರು ಸ್ವಾಧೀನಾನುಭವ ದಲ್ಲಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್ ಅವರು ಖುದ್ದಾಗಿ ನಿಂತು ಪೊಲೀಸ್ ಭದ್ರತೆಯೊಂದಿಗೆ ಸೋಮವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದರು.

ಜೆಸಿಬಿ, ಟ್ರಕ್ಕರ್‍ಗಳೊಂದಿಗೆ ಕಾರ್ಯಾ ಚರಣೆ ನಡೆಸಿರುವ ಮುಡಾ ಅಧಿಕಾರಿ ಗಳು, ಸುಮಾರು 8 ಕೋಟಿ ರೂ. ಮೌಲ್ಯದ ಮುಡಾ ಸ್ವತ್ತನ್ನು ತಮ್ಮ ವಶಕ್ಕೆ ಪಡೆಯು ವಲ್ಲಿ ಯಶಸ್ವಿಯಾದರು. ಈ ಹಿಂದೆ ಹಿನಕಲ್ ಸರ್ವೆ ನಂ.9ರಲ್ಲಿ 33 ಗುಂಟೆ ಭೂಮಿ ಯನ್ನು ಪ್ರಾಧಿಕಾರವು ಭೂಸ್ವಾಧೀನ ಪಡಿಸಿ ಕೊಂಡು ಭೂ ಮಾಲೀಕರಿಗೆ ಪರಿಹಾರದ ಮೊಬಲಗನ್ನು ಪಾವತಿಸಿದ್ದರೂ, ಆ ಸ್ವತ್ತಿ ನಲ್ಲಿ ಮಾಲೀಕರು ಅನಧಿಕೃತವಾಗಿ ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದರು ಎಂದು ಡಾ. ನಟೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮುಡಾ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳಾದ ಪಾಂಡುರಂಗ, ಸತ್ಯನಾರಾಯಣ ಜೋಷಿ, ವಿಶೇಷ ಭೂಸ್ವಾಧೀನಾಧಿಕಾರಿ ಹರ್ಷವರ್ಧನ್, ವಲಯಾಧಿಕಾರಿಗಳಾದ ಕೆ.ಆರ್.ಮಹೇಶ್, ಭಾಸ್ಕರ್, ರವೀಂದ್ರ ಕುಮಾರ್, ರವಿಶಂಕರ್, ಮೋಹನ್, ನಾಗೇಶ್, ಹೆಚ್.ಪಿ.ಶಿವಣ್ಣ ಸೇರಿದಂತೆ ಇತರ ಅಧಿ ಕಾರಿಗಳು ಹಾಗೂ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »