ಕೊರೊನಾ ನಡುವೆ ಮೈಸೂರಲ್ಲಿ ಸಾಂಕ್ರಾಮಿಕ ಹೆಪಟೈಟಿಸ್ ಆತಂಕ
ಮೈಸೂರು

ಕೊರೊನಾ ನಡುವೆ ಮೈಸೂರಲ್ಲಿ ಸಾಂಕ್ರಾಮಿಕ ಹೆಪಟೈಟಿಸ್ ಆತಂಕ

January 22, 2021

ಮೈಸೂರು,ಜ.21-ಕೊರೊನಾ ನಡುವೆಯೇ ಈಗ ಮೈಸೂರಿನಲ್ಲಿ ಸಾಂಕ್ರಮಿಕ ಹೆಪಟೈಟಿಸ್(ಎ) ಆತಂಕ ಎದುರಾಗಿದೆ. ಒಂದೂವರೆ ತಿಂಗಳಿಂದ ಈ ರೋಗ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಎನ್.ಆರ್. ಮೊಹಲ್ಲಾ, ರಾಜೇಂದ್ರನಗರ ಸೇರಿದಂತೆ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣ ಪತ್ತೆಯಾ ಗುತ್ತಿವೆ. ಈ ಸಾಂಕ್ರಾಮಿಕ ರೋಗ ವಯಸ್ಕರನ್ನೂ ಬಾಧಿಸಲಿದ್ದು, ಅಗತ್ಯವಾಗಿ ಎಚ್ಚರಿಕೆ ವಹಿಸಬೇಕೆಂದು ಮೈಸೂರಿನ ಮಕ್ಕಳ ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಹೆಪಟೈಟಿಸ್ `ಎ’ ರೋಗ ಬಾಧಿಸುತ್ತದೆ. ಈ ರೋಗಿಗಳ ಮಲದಲ್ಲಿರುವ ವೈರಸ್‍ಗಳು ಇತರರು ಸೇವಿಸುವ ನೀರು ಮತ್ತು ಆಹಾರವನ್ನು ಸೇರಿ ವ್ಯಾಪಕವಾಗಿ ಹರಡುತ್ತದೆ. ಹೆಪಟೈಟಿಸ್ `ಎ’ನಿಂದ ಜ್ವರ, ವಾಂತಿ, ಹೊಟ್ಟೆನೋವು ಕಾಣಿಸಿಕೊಂಡು ಮೂರ್ನಾಲ್ಕು ದಿನದಲ್ಲಿ ಕಣ್ಣು ಹಾಗೂ ಮೂತ್ರ ಹಳದಿಯಾಗು ತ್ತದೆ. ಈ ಲಕ್ಷ್ಣಣಗಳು ಕಾಣಿಸಿ ಕೊಂಡ ಕೂಡಲೇ ವೈದ್ಯರನ್ನು ಭೇಟಿ ಯಾಗಿ, ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ರೋಗ ಉಲ್ಬಣಿಸುತ್ತದೆ. ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಶುದ್ಧ ನೀರು, ಆಹಾರ ಸೇವಿಸಬೇಕು. ಮುಖ್ಯವಾಗಿ ನೀರನ್ನು ಚೆನ್ನಾಗಿ ಕಾಯಿಸಿ ನಂತರ ಆರಿಸಿ ಸೇವಿಸುವುದು ಒಳ್ಳೆ ಯದು. ಬೀದಿ ಬದಿಯಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳನ್ನು ಸೇವಿಸ ಬಾರದು. ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥ ಹಾಗೂ ನೀರಿನ ಮೇಲೂ ನೊಣ ಇನ್ನಿತರ ಕ್ರಿಮಿ ಕೀಟಗಳು ಕೂರದಂತೆ ಎಚ್ಚರಿಕೆ ವಹಿಸಬೇಕು. ಹೆಪಟೈಟಿಸ್ `ಎ’ ರೋಗಿಗಳು ಶೌಚಾಲಯ ಬಳಸಿದ ಬಳಿಕ ಪೆನಾಯಿಲ್ ಹಾಕಿ, ಚೆನ್ನಾಗಿ ಸ್ವಚ್ಛಗೊಳಿಸುವುದು ಸೂಕ್ತ. ಈ ರೋಗ ದೃಢಪಟ್ಟರೆ ವೈದ್ಯರ ಸಲಹೆಯಂತೆ ಔಷಧಿ ತೆಗೆದು ಕೊಳ್ಳುವುದರ ಜೊತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ, ಹರಡು ವಿಕೆಯನ್ನು ಆದಷ್ಟು ತಡೆಗಟ್ಟ ಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ನಿರ್ಲಕ್ಷಿಸಬೇಡಿ: ಇತ್ತೀಚೆಗೆ ಮಕ್ಕಳಲ್ಲಿ ಹೆಪಟೈಟಿಸ್ `ಎ’ ಸಾಂಕ್ರಮಿಕ ರೋಗ ಹೆಚ್ಚಾಗಿ ಕಾಣಿಸಿಕೊಳ್ಳು ತ್ತಿರುವುದನ್ನು ತಜ್ಞ ವೈದ್ಯರಿಂದಲೇ ತಿಳಿದುಬಂದಿ ರುವುದರಿಂದ ಆರೋಗ್ಯ ಇಲಾಖೆ ಇದನ್ನು ಗಂಭೀರ ವಾಗಿ ಪರಿಗಣಿಸಬೇಕಿದೆ. ಅದರಲ್ಲೂ ಎನ್.ಆರ್. ಮೊಹಲ್ಲಾ, ರಾಜೇಂದ್ರನಗರ ಇನ್ನಿತರ ಪ್ರದೇಶದಲ್ಲಿ ಹೆಚ್ಚು ಪ್ರಕರಣ ಕಂಡುಬರುತ್ತಿರುವುದರಿಂದ ಆ ಭಾಗಕ್ಕೆ ಪೂರೈಕೆಯಾಗುವ ನೀರಿನ ಶುದ್ಧತೆ ಬಗ್ಗೆಯೂ ಗಮನ ಹರಿಸಬೇಕಿದೆ. ಸರಬರಾಜಾಗುವ ನೀರಿಗೆ ಕಲುಷಿತ ನೀರು ಸೇರಿಕೊಂಡರೆ ಅದು ಪೂರೈಕೆಯಾಗುವ ಪ್ರದೇಶಗಳ ಜನ ಹೆಪಟೈಟಿಸ್ `ಎ’ಗೆ ತುತ್ತಾಗಬಹುದು. ಜಿಲ್ಲಾ ಆರೋಗ್ಯಾಧಿಕಾರಿಗಳು, ನಗರ ಪಾಲಿಕೆ ಆರೋ ಗ್ಯಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನಿರ್ಲಕ್ಷಿಸಿದರೆ ರೋಗ ಉಲ್ಬಣವಾಗಿ, ಟೈಫಾಯಿಡ್ ಇನ್ನಿತರ ಗಂಭೀರ ಸಮಸ್ಯೆಗಳಾಗಬಹುದು. ಇದು ಸಾಂಕ್ರಾಮಿಕ ರೋಗ ಆಗಿರುವುದರಿಂದ ಕೊರೊನಾ ನಿಯಂತ್ರಣ ಮಾದರಿ ಯಲ್ಲೇ ತೀವ್ರ ಎಚ್ಚರಿಕೆ ವಹಿಸಬೇಕು.

Translate »