ಅನಾಥ ಗೂಬೆ ಮರಿಗಳ ರಕ್ಷಣೆ
ಮೈಸೂರು

ಅನಾಥ ಗೂಬೆ ಮರಿಗಳ ರಕ್ಷಣೆ

January 22, 2021

ಮೈಸೂರು, ಜ.21(ಎಂಕೆ)- ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ 4 ಗೂಬೆ ಮರಿಗಳನ್ನು ಮೈಸೂರಿನ ಸಮೀಪದ ಶಿಂಡೇನಹಳ್ಳಿಯಲ್ಲಿ ರಕ್ಷಿಸಲಾಗಿದೆ.

ಇಲ್ಲಿನ ಚಂದ್ರಮೌಳಿ ಎಂಬವರ ತೋಟದಲ್ಲಿ ಗೂಬೆ ಮರಿಗಳು ಪತ್ತೆ ಯಾಗಿವೆ. ಕೆಲ ದಿನಗಳ ಹಿಂದೆ ಯಷ್ಟೇ ತಾಯಿ ಗೂಬೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿತ್ತು. ಬಳಿಕ ಅನಾಥ ವಾದ ಮರಿಗಳಿಗೆ ಆಹಾರ ನೀಡಿ ದರೂ ಪ್ರಯೋಜನವಾಗದ್ದರಿಂದ ಉರಗ ಸಂರಕ್ಷಕ ಸ್ನೇಕ್ ಸೂರ್ಯ ಅವರಿಗೆ ಚಂದ್ರಮೌಳಿ ಮಾಹಿತಿ ನೀಡಿ ದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸ್ನೇಕ್ ಸೂರ್ಯ 4 ಗೂಬೆ ಮರಿಗಳನ್ನು ಸಂರಕ್ಷಿಸಿದ್ದಾರೆ. ರಕ್ಷಣೆ ಮಾಡಿ ರುವ ನಾಲ್ಕು ಗೂಬೆ ಮರಿಗಳನ್ನು ನಾನೇ ಪೋಷಣೆ ಮಾಡುವು ದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆದು ಕೊಂಡಿದ್ದೇನೆ. ಮೈಸೂರಿನ ವಿವಿಧೆಡೆ ಹಾವು ಮತ್ತಿತರ ಪ್ರಾಣಿ-ಪಕ್ಷಿಗಳನ್ನು ಆಗ್ಗಾಗ್ಗೆ ರಕ್ಷಣೆ ಮಾಡಲಾಗುತ್ತದೆ. ಅವುಗಳ ರಕ್ಷಣೆಗಾಗಿ ಪ್ರಾಣಿಗಳ ಸಂರಕ್ಷಣಾ ಕೇಂದ್ರ ತೆರೆದರೆ ಅನುಕೂಲವಾಗುತ್ತದೆ ಸ್ನೇಕ್ ಸೂರ್ಯ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

 

Translate »