ಸಂಪುಟದಲ್ಲಿ ಹಳೆ ಮೈಸೂರು ಭಾಗಕ್ಕೆ ಅನ್ಯಾಯ: ರಾಮದಾಸ್ ವಿಷಾದ
ಮೈಸೂರು

ಸಂಪುಟದಲ್ಲಿ ಹಳೆ ಮೈಸೂರು ಭಾಗಕ್ಕೆ ಅನ್ಯಾಯ: ರಾಮದಾಸ್ ವಿಷಾದ

January 14, 2021

ಮೈಸೂರು, ಜ.13(ಎಂಟಿವೈ)- ಸಚಿವ ಸಂಪುಟದಲ್ಲಿ ಹಳೆ ಮೈಸೂರು ಭಾಗಕ್ಕೆ ಅನ್ಯಾಯವಾಗಿದೆ. ಮೈಸೂರು ಜಿಲ್ಲೆಯಿಂದ ಒಬ್ಬರನ್ನಾದರೂ ಮಂತ್ರಿ ಮಾಡಬಹು ದಾಗಿತ್ತು ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ರಾಮದಾಸ್, ಈಗಿನ ಸಂಪುಟ ವಿಸ್ತರಣೆ ವೇಳೆ 7 ಮಂದಿ ಸಚಿವರಾಗಿದ್ದಾರೆ. ಆದರೆ, ಹಳೆ ಮೈಸೂರು ಭಾಗದಲ್ಲಿ ಯಾರೊ ಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ನಾನು ಯುವಮೋರ್ಚಾ ಮೈಸೂರು ನಗರ ಅಧ್ಯಕ್ಷನಾಗಿ ಪಕ್ಷದ ಕೆಲಸ ಪ್ರಾರಂಭಿಸಿದೆ. ಯುವಮೋರ್ಚಾ ರಾಜ್ಯ ಅಧ್ಯಕ್ಷನಾಗಿ ಸತತ 2 ಅವಧಿಗೆ ಕೆಲಸ ಮಾಡಿದ್ದೇನೆ. 28 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಮೈಸೂರು ವಿಭಾಗದಲ್ಲಿ ಬಿಜೆಪಿಯಿಂದ ಗೆದ್ದ 11 ಶಾಸಕರಲ್ಲಿ 10 ಮಂದಿ ಪಕ್ಷ ತೊರೆದು ಅನ್ಯ ಪಕ್ಷಕ್ಕೆ ಸೇರಿದ್ದಾರೆ. ನಾನು ಇಂದಿಗೂ ಪಕ್ಷಕ್ಕೆ ನಿಷ್ಟೆಯಿಂದಲೇ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಮನದ ಮಾತು ಹೊರ ಹಾಕಿದ್ದಾರೆ. ಪಕ್ಷವನ್ನು ನನ್ನ ತಾಯಿ ಯಂತೆ ಭಾವಿಸಿದ್ದೇನೆ. ಅದರ ಘನತೆ ಹೆಚ್ಚಿಸುವುದೇ ನನ್ನ ಕರ್ತವ್ಯ ಎಂದು ತಿಳಿದವನಾಗಿದ್ದೇನೆ. ನಾನು ನಿಜವಾದ ಸ್ವಯಂಸೇವಕ. ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮಸಾಕ್ಷಿಗೆ ವಿರುದ್ಧ ಎಂದು ಮತ್ತೊಂದು ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ.

 

 

Translate »