`ಗಜಪಯಣ’ದೊಳಗೆ  ಬೇಡಿಕೆ ಈಡೇರದಿದ್ದರೆ ದಸರಾ ಬಹಿಷ್ಕಾರ
ಕೊಡಗು

`ಗಜಪಯಣ’ದೊಳಗೆ ಬೇಡಿಕೆ ಈಡೇರದಿದ್ದರೆ ದಸರಾ ಬಹಿಷ್ಕಾರ

July 22, 2022

ಕುಶಾಲನಗರ, ಜು.21 -ವೇತನ ಹೆಚ್ಚಳವೂ ಸೇರಿದಂತೆ ತಮ್ಮ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ರುವ ಮಾವುತರು, ಕಾವಾಡಿಗರು ಮತ್ತು ಜಮೆದಾರರು `ಗಜ ಪಯಣ’ಕ್ಕೂ ಮುನ್ನ ತಮ್ಮ ಬೇಡಿಕೆ ಈಡೇರಿಸದಿದ್ದರೆ ಈ ಬಾರಿಯ ದಸರಾ ಮಹೋತ್ಸವವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಮಾವುತರು ಮತ್ತು ಕಾವಾಡಿ ಗರ ಸಂಘದ ರಾಜ್ಯಾಧ್ಯಕ್ಷ ಗೌಸ್‍ಖಾನ್, ಕಾರ್ಯದರ್ಶಿ ಪರ್ವಿನ್ ಖಾನ್ ಅವರ ಸಮ್ಮುಖ ದುಬಾರೆ ಆನೆ ಮಾವುತರು ಮತ್ತು ಕಾವಾಡಿಗರ ಸಂಘದ ಅಧ್ಯಕ್ಷ ಜೆ.ಕೆ.ಡೋಬಿ, ಮತ್ತಿಗೋಡು ಸಾಕಾನೆ ಶಿಬಿರದ ಜೆ.ಕೆ.ವಸಂತ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗಜಪಯಣ ಆ.7 ರಂದು ಆರಂಭವಾಗಲಿದ್ದು, ಆ.5ರೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ, ಈ ಬಾರಿಯ ದಸರಾ ಮಹೋತ್ಸವಕ್ಕೆ ಆನೆಗಳನ್ನು ಕರೆತರುವ ಕಾರ್ಯದಿಂದ ದೂರ ಉಳಿಯುವ ಮೂಲಕ ದಸರಾ ಮಹೋತ್ಸವವನ್ನು ಬಹಿಷ್ಕರಿಸಲು ಸಭೆ ಯಲ್ಲಿ ನಿರ್ಧರಿಸಲಾಯಿತು. 1976ರಲ್ಲಿ ಆನೆಗಳ ಮಾವುತರು ಮತ್ತು ಕಾವಾಡಿಗಳ ಸಂಬಳ ಗಾರ್ಡುಗಳು ಮತ್ತು ವಾಚರ್ ಗಳಿಗಿಂತ ಜಾಸ್ತಿ ಇತ್ತು. ಕಾಲ ಕ್ರಮೇಣ ಗಾರ್ಡುಗಳು ಮತ್ತು ವಾಚರ್‍ಗಳ ಸಂಬಳ ಹೆಚ್ಚಾಗುತ್ತಾ ಹೋಯಿತು. 2000 ಇಸವಿ ಯಿಂದ ಇಲ್ಲಿಯವರೆಗೂ ತಮ್ಮ ಸಂಬಳ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆ ಈಡೇ ರಿಸುವಂತೆ ಸಂಬಂಧಪಟ್ಟ ಮುಖ್ಯಮಂತ್ರಿ ಗಳು, ಸಚಿವರು, ಶಾಸಕರು ಮತ್ತು ಅರಣ್ಯಾ ಧಿಕಾರಿಗಳಿಗೆ ಮನವಿ ಸಲ್ಲಿಸಿಯೂ ಏನೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಈ ಬಾರಿ ದಸರಾ ಮಹೋತ್ಸವಕ್ಕೆ ದುಬಾರೆ ಸಾಕಾನೆ ಶಿಬಿರದಿಂದ 9 ಆನೆಗಳು ಮತ್ತು ಮತ್ತಿಗೋಡು ಸಾಕಾನೆ ಶಿಬಿರದಿಂದ 4 ಆನೆಗಳು ಆಯ್ಕೆಯಾಗಿದ್ದು, ಅದರಲ್ಲಿ ಅಂತಿಮವಾಗಿ 6-7 ಆನೆಗಳು ದಸರಾ ಮಹೋತ್ಸವಕ್ಕೆ ಆಯ್ಕೆಯಾಗಲಿದೆ. ನಮ್ಮ ಬೇಡಿಕೆ ಈ ಬಾರಿ ಈಡೇರಲೇಬೇಕು. ಇಲ್ಲದಿದ್ದರೆ ನಾವು ನಮ್ಮ ಹೋರಾಟದ ಮುಂದಿನ ಹಾದಿಯನ್ನು ತುಳಿಯಬೇಕಾ ಗುತ್ತದೆ ಎಂದು ಎಚ್ಚರಿಸಿದರು.

ಈ ಮುನ್ನ ನಮಗೆ ಅರಣ್ಯ ಇಲಾಖೆ ಯಿಂದ ವಸತಿ ಗೃಹದ ಸೌಲಭ್ಯವಿತ್ತು. ಗಾರ್ಡುಗಳು ಮತ್ತು ವಾಚರ್‍ಗಳ ಸಂಬಳ ದೊಂದಿಗೆ ನಮಗೆ ನೀಡುತ್ತಿದ್ದ ವಸತಿ ಗೃಹದ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗಿದ್ದು, ನಾವುಗಳು ಕಾಡಿನಲ್ಲಿ ಟಾರ್ಪಾಲ್‍ನಿಂದ ಕಟ್ಟಿಕೊಂಡ ಟೆಂಟ್ ಹೌಸ್‍ಗಳಲ್ಲಿ ವಾಸಿಸ ಬೇಕಾಗಿದೆ ಎಂದು ಕಾವಾಡಿಗರು ಮತ್ತು ಮಾವುತರು ತಮ್ಮ ಸ್ಥಿತಿಯನ್ನು ಸಭೆಯಲ್ಲಿ ತೆರೆದಿಟ್ಟರು. ಪ್ರತೀ ಬಾರಿ ದಸರಾ ಮಹೋ ತ್ಸವದಲ್ಲಿ ಎರಡು ತಿಂಗಳುಗಳ ಕಾಲ ಭಾಗ ವಹಿಸುವ ನಮಗೆ ಹೆಚ್ಚುವರಿ ಕೇವಲ 10 ಸಾವಿರ ರೂ.ಗಳನ್ನು ಮಾತ್ರ ನೀಡಲಾಗುತ್ತದೆ. ಆದರೆ ಅಂಬಾರಿ ಕಟ್ಟಲು ಬರುವ ತಂಡದವರ ಐದಾರು ದಿನಗಳ ಕೆಲಸಕ್ಕೆ 10 ಸಾವಿರ ರೂ. ನೀಡುವ ಮೂಲಕ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆಪಾದಿಸಿರುವ ಮಾವುತರು ಮತ್ತು ಕಾವಾಡಿಗರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ನಮಗೆ ಹೆಚ್ಚುವರಿಯಾಗಿ ನೀಡುವ ಹಣವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾವುತರು, ಕಾವಾಡಿಗರಿಗೆ ಬೆಲೆ ಇರುತ್ತದೆ, ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಂತರ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.

ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ದಸರಾ ಮಹೋ ತ್ಸವದಲ್ಲಿ ಭಾಗವಹಿಸುವುದಿಲ್ಲ ಎಂದು ದುಬಾರೆ ಸಾಕಾನೆ ಶಿಬಿರದ ಅಧ್ಯಕ್ಷ ಮತ್ತು ಕರ್ನಾಟಕ ಮಾವುತರು ಮತ್ತು ಕಾವಾಡಿಗಳ ಸಂಘದ ರಾಜ್ಯ ಉಪಾಧ್ಯಕ್ಷರೂ ಆದ ಕಾವೇರಿ ಆನೆಯ ಮಾವುತ ಜೆ.ಕೆ.ಡೋಬಿ, ಮತ್ತೀಗೋಡು ಸಾಕಾನೆ ಶಿಬಿರದ ಅಧ್ಯಕ್ಷರು ಮತ್ತು ಅಭಿಮನ್ಯು ಆನೆಯ ಮಾವುತ ವಸಂತ ತಿಳಿಸಿದ್ದಾರೆ.

Translate »