ಜು.25ರಿಂದ ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತಲಿನ ಕಲ್ಲುಗಣಿಗಳಲ್ಲಿ ಪರೀಕ್ಷಾರ್ಥ ಸ್ಫೋಟ
ಮೈಸೂರು

ಜು.25ರಿಂದ ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತಲಿನ ಕಲ್ಲುಗಣಿಗಳಲ್ಲಿ ಪರೀಕ್ಷಾರ್ಥ ಸ್ಫೋಟ

July 22, 2022

ಮೈಸೂರು, ಜು.21(ಆರ್‍ಕೆ)-ಕೃಷ್ಣ ರಾಜಸಾಗರ (ಕೆಆರ್‍ಎಸ್) ಅಣೆಕಟ್ಟೆ ಸುತ್ತ ಲಿನ ಕಲ್ಲುಗಣಿಗಾರಿಕೆ ಸ್ಥಳಗಳಲ್ಲಿ ಪರೀಕ್ಷಾರ್ಥ ಸ್ಫೋಟಕ್ಕೆ (ಟ್ರಯಲ್ ಬ್ಲಾಸ್ಟ್) ಕಡೆಗೂ ದಿನಾಂಕ ನಿಗದಿಯಾಗಿದೆ.

ಜಾರ್ಖಂಡ್‍ನ ಸಿಎಸ್‍ಐಆರ್-ಸಿಐಎಂಎಫ್‍ಆರ್ ತಂಡದಿಂದ 5 ಕಡೆ ಪರೀಕ್ಷೆ ಜು.25ರಿಂದ 31ರವರೆಗೆ ಪರೀಕ್ಷಾರ್ಥ ಸ್ಫೋಟ ನಡೆಸಲು ನಿರ್ಧರಿಸಲಾಗಿದ್ದು, ಮಂಡ್ಯ ಜಿಲ್ಲಾಡಳಿತವು ಸಿದ್ಧತೆ ನಡೆಸಿದೆ. ಗಣಿಗಾರಿಕೆಯಿಂದ ಕೃಷ್ಣರಾಜಸಾಗರ ಅಣೆ ಕಟ್ಟೆಗೆ ತೊಂದರೆಯಾಗುತ್ತದೆಯೇ ಎಂಬು ದನ್ನು ಖಚಿತಪಡಿಸಿಕೊಳ್ಳಲು ಈ ಸ್ಫೋಟ ನಡೆಸಲಾಗುತ್ತಿದೆ. ಅಣೆಕಟ್ಟೆ ಸುರಕ್ಷತೆ ದೃಷ್ಟಿ ಯಿಂದ ಪರೀಕ್ಷಾರ್ಥ ಸ್ಫೋಟ ಅತೀ ಮುಖ್ಯ ವಾಗಿದ್ದು, ಗೊಂದಲಗಳಿಗೆ ಉತ್ತರ ದೊರೆ ಯಲಿದೆ. ಗಣಿಗಾರಿಕೆಗೆ ಬಳಸುವ ರಾಸಾಯನಿಕ ಸ್ಫೋಟದಿಂದಾಗಿ ಡ್ಯಾಂಗೆ ಅಪಾಯವಿದೆ ಎಂಬ ಆತಂಕ ದಟ್ಟವಾಗಿ ಹರಡಿತ್ತು. ಅದ ರಿಂದಾಗಿ ಅಲ್ಲಿ ಗಣಿಗಾರಿಕೆ ನಿಷೇಧಿಸಬೇಕೆಂಬ ಒತ್ತಾಯ ಬಲವಾಗಿ ಕೇಳಿಬರುತ್ತಿತ್ತು.

ಜಾರ್ಖಂಡ್‍ನ ಕೌನ್ಸಿಲ್ ಆಫ್ ಸೈಂಟಿ ಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ (ಅSIಖ) ಮತ್ತು ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಮೈನಿಂಗ್
ಅಂಡ್ ಫ್ಯೂಯೆಲ್ ರೀಸರ್ಚ್ (ಅIಒಈಖ) ಸಂಸ್ಥೆಗಳ ವಿಜ್ಞಾನಿ ಗಳ ತಂಡವು ಜುಲೈ 25ರಿಂದ 31ರವರೆಗೆ ಕೆಆರ್‍ಎಸ್ ಅಣೆಕಟ್ಟೆ ಸಮೀಪದ ಕಲ್ಲು ಗಣಿ ಪ್ರದೇಶಗಳಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುತ್ತಿರುವುದನ್ನು ಮಂಡ್ಯ ಡಿಸಿ ಅಶ್ವತಿ ದೃಢಪಡಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರೀಕ್ಷಾರ್ಥ ಸ್ಫೋಟ ಪ್ರಕ್ರಿಯೆಗೆ ಅಗತ್ಯ ನೆರವು ನೀಡುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಲಾಖೆ ಹಿರಿಯ ಭೂ ವಿಜ್ಞಾನಿ ಪದ್ಮಜ ಅವರು ತಿಳಿಸಿದ್ದಾರೆ.

Translate »