ಮೈಸೂರಲ್ಲಿ ಖಾಸಗಿ ಶಾಲಾ ವಾಹನಗಳ ತಪಾಸಣೆ ಆರಂಭ
ಮೈಸೂರು

ಮೈಸೂರಲ್ಲಿ ಖಾಸಗಿ ಶಾಲಾ ವಾಹನಗಳ ತಪಾಸಣೆ ಆರಂಭ

July 1, 2018

ಮೈಸೂರು: ಸಾರಿಗೆ ನಿಯಮ ಉಲ್ಲಂಘನೆ ಹಾಗೂ ಮಕ್ಕಳ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಖಾಸಗಿ ಶಾಲಾ ವಾಹನಗಳ ತಪಾಸಣಾ ಕಾರ್ಯಾಚರಣೆಯನ್ನು ಆರ್‍ಟಿಓ ಅಧಿಕಾರಿಗಳು ಇಂದಿನಿಂದ ಆರಂಭಿಸಿದ್ದಾರೆ.

ಮೊದಲ ದಿನವಾದ ಇಂದು 5 ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಿರುವ ಅಧಿಕಾರಿಗಳು, ನಂಬರ್ ಪ್ಲೇಟ್ ಇಲ್ಲದೇ ಓಡಾಡುತ್ತಿರುವ ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಮೂರು ಸೀನಿಯರ್ ಮೋಟಾರ್ ವೆಹಿಕಲ್ ಇನ್ಸ್‍ಪೆಕ್ಟರ್‍ಗಳನ್ನೊಳಗೂಡಿ ಅಧಿಕಾರಿಗಳ ತಂಡವು ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಕಾರ್ಯಾಚರಣೆ ಮುಂದುವರೆಸಲಿದೆ ಎಂದು ಆರ್‍ಟಿಓ (ಪಶ್ಚಿಮ) ಎಂ.ಪ್ರಭುಸ್ವಾಮಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಅನುಭವವುಳ್ಳ ಚಾಲಕರು ಮತ್ತು ಜವಾಬ್ದಾರಿಯುತ ಅಟೆಂಡರ್ ಅನ್ನು ನೇಮಿಸಬೇಕು. ವಾಹನ ಸುಸ್ಥಿತಿಯಲ್ಲಿರಬೇಕು. ಕಿಟಕಿ ಬಳಿ ಕಬ್ಬಿಣದ ರಾಡ್ ಅಳವಡಿಸಿರಬೇಕು. ತುರ್ತು ನಿರ್ಗಮನ ಡೋರ್, ಡೋರ್ ಲಾಕರ್ ಇರಬೇಕೆಂಬಿತ್ಯಾದಿ ಮಕ್ಕಳ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕೆಂಬ ನಿಯಮಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕಾಗಿದೆ.

Translate »