ರಸ್ತೆಗೆ ವಿಮೆ: ಕ್ಯಾಬ್ ಚಾಲಕನ ಮಾದರಿ ಕಾರ್ಯ!
ಮೈಸೂರು

ರಸ್ತೆಗೆ ವಿಮೆ: ಕ್ಯಾಬ್ ಚಾಲಕನ ಮಾದರಿ ಕಾರ್ಯ!

July 3, 2020

ಮೈಸೂರು, ಜು.2(ಆರ್‍ಕೆಬಿ)- ರಸ್ತೆಗೆ ವಿಮೆ ಮಾಡಿಸಿದ್ದನ್ನು ಎಲ್ಲಾದರೂ ಕೇಳಿ ದ್ದೀರಾ…? ಇಲ್ಲೊಬ್ಬ ಕ್ಯಾಬ್ ಚಾಲಕ ತಮ್ಮ ಮನೆ ಇರುವ ರಸ್ತೆಗೆ ಬರೋಬ್ಬರಿ 3.23 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿದ್ದಾರೆ. ಅದಕ್ಕೆ 899 ರೂ. ವಾರ್ಷಿಕ ಪ್ರೀಮಿಯಂ ಕಟ್ಟುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕ್ಯಾಬ್ ಚಾಲಕ ವಾಸು ಮೈಸೂರಿನ ಬೋಗಾದಿ 2ನೇ ಹಂತದ ಸಿಎಫ್‍ಟಿ ಆರ್‍ಐ ಬಡಾವಣೆಯ 5ನೇ ಕ್ರಾಸ್ ನಿವಾಸಿ. ಒಮ್ಮೆ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ, `ಈ ರಸ್ತೆಯನ್ನು ಹೇಗಾದರೂ ಉಳಿಸಿ ಕೊಳ್ಳಬೇಕು’ ಎಂಬ ಯೋಚನೆ ಬಂತು. ಕೂಡಲೇ ಅವರು ರಸ್ತೆಗೆ ವಿಮೆ ಏಕೆ ಮಾಡಿಸ ಬಾರದು? ಎಂದು ಯೋಚನೆ ಮಾಡಿ ಕೂಡಲೇ ಕಾರ್ಯಪ್ರವೃತ್ತರಾದರು. ವಿಮಾ ಕಂಪನಿಗೆ ಅಲೆದರು. ಇದಕ್ಕಾಗಿ ಪಾಲಿಕೆ ಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆದರು. ಕೊನೆಗೂ ವಿಮೆ ಮಾಡಿಸು ವಲ್ಲಿ ಯಶಸ್ವಿಯಾದರು.

ಒಟ್ಟಾರೆ 96.80 ಮೀಟರ್ ಉದ್ದ ಮತ್ತು 4 ಮೀಟರ್ ಅಗಲದ ರಸ್ತೆಯನ್ನು ವಿಮೆಗೆ ಒಳಪಡಿಸಿದ್ದಾರೆ. ನೈಸರ್ಗಿಕವಾಗಿ ಹಾಗೂ ಕಿಡಿಗೇಡಿಗಳಿಂದ ರಸ್ತೆಗೆ ಹಾನಿಯಾದರೆ ಓರಿಯಂಟಲ್ ವಿಮಾ ಕಂಪನಿ ನಷ್ಟ ಭರಿ ಸುತ್ತದೆ. ಆಗ ಹಾನಿಯಾದ ರಸ್ತೆ ಶೀಘ್ರ ದುರಸ್ತಿಗೆ ಅವಕಾಶವಾಗುತ್ತದೆ. ಹಾಗಾಗಿ ಜೂ.24ರಂದು ವಿಮಾ ಕಂಪನಿಯಲ್ಲಿ ರಸ್ತೆಯನ್ನು ನೋಂದಾಯಿಸಿದ್ದಾರೆ. ಒಟ್ಟು 3.23 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿದ್ದು, ಮೊದಲ ವಿಮಾ ಕಂತು 899 ರೂ. ಗಳನ್ನು ಕಂಪನಿಗೆ ಕಟ್ಟಿದ್ದಾರೆ. ಅದಕ್ಕೆ ಸಂಬಂಧಿ ಸಿದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ವಾಸು ಅವರಿಗೆ ಇನ್ಫೋಸಿಸ್ ಪ್ರತಿ ಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸ್ಫೂರ್ತಿ ಯಂತೆ. ಸುಧಾಮೂರ್ತಿ ಅವರ ಬಗ್ಗೆ ತಿಳಿದ ವಾಸು ಅವರಿಗೆ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಮನಸ್ಸಾಯಿತು. ಈ ವೇಳೆ ಹುಬ್ಬಳ್ಳಿಯಲ್ಲೊಬ್ಬರು ರಸ್ತೆಗೆ ವಿಮೆ ಮಾಡಿಸಿದ ಬಗ್ಗೆ ಸಿಕ್ಕಿದ ಮಾಹಿತಿ ಅನು ಸರಿಸಿ, ತಮ್ಮ ಮನೆಯಿರುವ ರಸ್ತೆಗೂ ಏಕೆ ವಿಮೆ ಮಾಡಿಸಬಾರದು ಎಂದು ಆಲೋ ಚಿಸಿದರು. 2018ರಿಂದ ವಿಮಾ ಕಂಪನಿ ಗಳಿಗೆ ಅಲೆದರು. ಈಗ ಅವರ ಆಸೆ ಕೈಗೂಡಿ ರುವ ಬಗ್ಗೆ ವಾಸು ಸಂತಸ ವ್ಯಕ್ತಪಡಿಸುತ್ತಾರೆ.

ನಾವು ಪ್ರತಿಯೊಂದಕ್ಕೂ ಸರ್ಕಾರದ ಅನುದಾನವನ್ನೋ, ನಗರ ಪಾಲಿಕೆ ಯನ್ನೋ ಕಾಯುವುದನ್ನು ಬಿಟ್ಟು ನಮ್ಮ ಕೆಲಸ ನಾವೇ ಮಾಡಿಕೊಳ್ಳುವುದು ಒಳಿತು. ವಿಮೆ ಆಗಿದ್ದರಿಂದ ರಸ್ತೆಗೆ ಹಾನಿ ಯಾದರೆ ಕಂಪನಿ ಹಣ ನೀಡುತ್ತದೆ. ವಿಮೆ ಹಣದಲ್ಲಿ ರಸ್ತೆ ದುರಸ್ತಿ ಮಾಡಿ ಕೊಳ್ಳಬಹುದಲ್ಲವೇ? ಇದರಿಂದ ಸರ್ಕಾ ರಕ್ಕೂ ಹೊರೆ ಕಡಿಮೆಯಾಗುತ್ತದೆ ಎಂಬುದು ಇವರ ಅಭಿಪ್ರಾಯ.

ಪಾಲಿಕೆ ಅಧಿಕಾರಿ ಮೆಚ್ಚುಗೆ: ನಗರದ ನಾಗರಿಕರೊಬ್ಬರು ರಸ್ತೆಗೆ ವಿಮೆ ಮಾಡಿಸಿದ ಬಗ್ಗೆ ಮಾಹಿತಿ ತಿಳಿದ ಪಾಲಿಕೆ ಅಧಿಕಾರಿಗಳು ಕ್ಯಾಬ್ ಚಾಲಕ ವಾಸು ಅವರ ಸಾಮಾಜಿಕ ಕಳಕಳಿ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Translate »