ಮೈಸೂರಲ್ಲಿ ತೀವ್ರಗೊಂಡ ಪೊಲೀಸರ ರಾತ್ರಿ ಗಸ್ತು
ಮೈಸೂರು

ಮೈಸೂರಲ್ಲಿ ತೀವ್ರಗೊಂಡ ಪೊಲೀಸರ ರಾತ್ರಿ ಗಸ್ತು

October 1, 2021

ಮೈಸೂರು, ಸೆ.30(ಆರ್‍ಕೆ)- ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಪರಾಧ ಕೃತ್ಯ ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ನಗರ ದಾದ್ಯಂತ ಇಂದಿನಿಂದ ಪೊಲೀಸರು ರಾತ್ರಿ ಗಸ್ತನ್ನು ತೀವ್ರಗೊಳಿಸಿದ್ದಾರೆ.

ಪುಂಡ ಪೋಕರಿಗಳು, ಅಪರಾಧ ಹಿನ್ನೆಲೆ ಯುಳ್ಳವರು, ಸಮಾಜಘಾತುಕ ಶಕ್ತಿಗಳು ರಾತ್ರಿ ವೇಳೆ ಅನಗತ್ಯ ಗುಂಪು ಸೇರುವುದು, ಜೂಜು, ಗಲಾಟೆ ಸೇರಿದಂತೆ ಹಲವು ಕ್ರಿಮಿ ನಲ್ ಚಟುವಟಕೆಗಳಲ್ಲಿ ಪಾಲ್ಗೊಳ್ಳುವವರನ್ನು ಬಗ್ಗು ಬಡಿಯಲು ರಾತ್ರಿ ಪಟ್ರೋಲಿಂಗ್ ಅನ್ನು ಮೈಸೂರು ನಗರದಾದ್ಯಂತ ತೀವ್ರಗೊಳಿ ಸುವಂತೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಿರ್ದೇಶನ ನೀಡಿದ್ದಾರೆ.

ಆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಮೈಸೂರು ನಗರದ ದೇವರಾಜ ಉಪವಿಭಾಗದ ಎಸಿಪಿ ಶಶಿಧರ, ಕೆ.ಆರ್. ಉಪವಿಭಾಗದ ಪೂರ್ಣಚಂದ್ರ ತೇಜಸ್ವಿ, ಎನ್.ಆರ್.ಉಪವಿಭಾಗದ ಶಿವಶಂಕರ ಹಾಗೂ ಸಂಚಾರ ವಿಭಾಗದ ಎಸ್‍ಇ ಗಂಗಾ ಧರಸ್ವಾಮಿ ಅವರಿಗೆ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುವ ಕುರಿತು ವಿವರಿಸಿದ್ದಾರೆ.

ಅದರಂತೆ ಎಸಿಪಿಗಳೂ ಸಹ ತಮ್ಮ ಉಪವಿಭಾಗದ ವ್ಯಾಪ್ತಿಯ ಎಲ್ಲಾ ಪೊಲೀಸ್ ಇನ್ಸ್‍ಪೆಕ್ಟರ್‍ಗಳಿಗೆ ರೋಲ್‍ಕಾಲ್ ಮೂಲಕ ಸಿಬ್ಬಂದಿ, ಪಿಸಿಆರ್, ಗರುಡ ವಾಹನ ಸಿಬ್ಬಂದಿ ರಾತ್ರಿ 8ರಿಂದ ಬೆಳಗ್ಗೆ 6 ಗಂಟೆವರೆಗೆ ಯಾವ ಯಾವ ರಸ್ತೆ, ಸರ್ಕಲ್, ಬೀಟ್ ಪಾಯಿಂಟ್‍ಗಳಲ್ಲಿ ಪೆಟ್ರೋಲಿಂಗ್ ಮಾಡ ಬೇಕು, ಒಂದೊಂದು ಬೀಟ್ ಮಾರ್ಗದಲ್ಲಿ ಎಷ್ಟು ಮಂದಿ ಸಿಬ್ಬಂದಿಗಳಿರ ಬೇಕೆಂಬು ದರ ಬಗ್ಗೆ ತಿಳುವಳಿಕೆ ನೀಡಿದರು.

ಮಲ್ಟಿಪ್ಲೆಕ್ಸ್ ಸಿನಿಮಾ, ಮಾಲ್, ಡಿಪಾರ್ಟ್ ಮೆಂಟಲ್ ಸ್ಟೋರ್ಸ್, ರೆಸ್ಟೋರೆಂಟ್‍ಗಳು, ನಿರ್ಜನ ಪ್ರದೇಶ, ರಿಂಗ್ ರಸ್ತೆಗೆ ಹೊಂದಿ ಕೊಂಡಂತಹ ವಸತಿ ಬಡಾವಣೆಗಳು, ಎಟಿಎಂ ಸುತ್ತಲಿನ ಪ್ರದೇಶ, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್‍ಗಳಂತಹ ಜನ ಸಂಚಾರ ಸ್ಥಳಗಳಲ್ಲಿ ಪೊಲೀಸ್ ಗಸ್ತು ವಾಹನ ಹಾಜರಿರ ಬೇಕೆಂದು ಎಸಿಪಿಗಳು ಇನ್ಸ್‍ಪೆಕ್ಟರ್‍ಗಳಿಗೆ ತಾಕೀತು ಮಾಡಿದ್ದಾರೆ. ಇಂದು ರಾತ್ರಿ ಯಿಂದಲೇ ಈ ವ್ಯವಸ್ಥೆ ಜಾರಿಗೆ ಬರಬೇಕು, ಖದೀಮರು, ದರೋಡೆಕೋರರು, ಸಂಶ ಯಾಸ್ಪದ ವ್ಯಕ್ತಿಗಳು, ವಾಹನಗಳು ಕಂಡಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ವಾಕಿ-ಟಾಕಿ ಮೂಲಕ ಅಧಿಕಾರಿಗಳ ನಡುವೆ ನಿರಂತರ ಸಂಪರ್ಕದಿಂದಿದ್ದು, ಮಾಹಿತಿ ಹಂಚಿಕೊಂಡು ಮೈಸೂರಲ್ಲಿ ಅಪರಾಧ ಕೃತ್ಯಗಳನ್ನು ತಡೆ ಗಟ್ಟಲು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದ್ದಾರೆ.

Translate »